ಈಗಾಗಲೇ ಏಳು ವಿಶ್ವ ದಾಖಲೆಗಳನ್ನು ಮಾಡಿರುವ ಉಡುಪಿಯ ಯೋಗಬಾಲೆ ಎಂಟನೇ ವಿಶ್ವದಾಖಲೆ ಪೂರೈಸಿದ್ದಾಳೆ. ಆದರೆ ಈ ಬಾರಿ ಆಕೆ ಯೋಗಕ್ಕೆ ಬದಲಾಗಿ , ಭರತನಾಟ್ಯದ 108ಕರಣಗಳನ್ನು ಕೇವಲ 4 ನಿಮಿಷದಲ್ಲಿ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾಳೆ.

ಉಡುಪಿ (ಏ.05): ಈಗಾಗಲೇ ಏಳು ವಿಶ್ವ ದಾಖಲೆಗಳನ್ನು ಮಾಡಿರುವ ಉಡುಪಿಯ ಯೋಗಬಾಲೆ ಎಂಟನೇ ವಿಶ್ವದಾಖಲೆ ಪೂರೈಸಿದ್ದಾಳೆ. ಆದರೆ ಈ ಬಾರಿ ಆಕೆ ಯೋಗಕ್ಕೆ ಬದಲಾಗಿ , ಭರತನಾಟ್ಯದ 108ಕರಣಗಳನ್ನು ಕೇವಲ 4 ನಿಮಿಷದಲ್ಲಿ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾಳೆ. ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯ ವಿದ್ಯಾರ್ಥಿನಿ ತನುಶ್ರೀ ಈಗಾಗಲೇ ಯೋಗದಲ್ಲಿ ಏಳು ವಿಶ್ವದಾಖಲೆಗಳನ್ನು ಮಾಡಿದ್ದಾಳೆ. ಅದರಲ್ಲಿ ಆರು ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಇನ್ನೊಂದು ಗಿನ್ನೆಸ್...

Add Asianetnews Kannada as a Preferred SourcegooglePreferred

ಯೋಗ ಮಾತ್ರವಲ್ಲದೆ ಭರತನಾಟ್ಯವನ್ನು ಕಳೆದ ಒಂಭತ್ತು ವರ್ಷದಿಂದ ರಾಮಕೃಷ್ಣ ಕೊಡಂಚ ಅವರ ಬಳಿ ಕಲಿಯುತ್ತಿದ್ದಾಳೆ . ಗುರುಗಳ ಆಸಕ್ತಿಯಿಂದ ಭರತನಾಟ್ಯ ಶಾಸ್ತ್ರದ ಒಂದು ವಿಭಾಗವಾದ 108ಕರಣಗಳನ್ನು ಏಕ ಕಾಲದಲ್ಲಿ ಮಾಡಲು ನಿರ್ಧರಿಸಿದ್ದು , ಯಶಸ್ವಿಯೂ ಆಗಿದ್ದಾಳೆ ಕರಣ ಎಂದರೆ ಪಾದ ಮತ್ತು ಹಸ್ತದ ಏಕಕಾಲದ ಯುಗಳ ಚಲನೆ ಇದಕ್ಕೆ ಪೂರಕವಾಗಿ ದೇಹದ ಬಾಗುವಿಕೆ. ಇಂತಹ ಭಂಗಿಗಳನ್ನು ಸಾಮಾನ್ಯವಾಗಿ ಬೇಲೂರು ಹಳೇಬೀಡು ಶಿಲಾಬಾಲಿಕೆಯಲ್ಲಿ ಕಾಣಬಹುದಾಗಿದೆ. 

Bengaluru: ಪೀಣ್ಯ ಮೇಲ್ಸೇತುವೆ: 4 ತಿಂಗಳು ಭಾರೀ ವಾಹನಕ್ಕೆ ತಡೆ

ಕಾಲು ಕೈಗಳ ಚಲನೆ, ದೇಹದ ಭಂಗಿ ಈ ಮೂರು ಅಂಶಗಳ ಸಂಯೋಜನೆ 108 ಕರಣಗಳಾಗಿವೆ. ಭಗವಂತ ಶಿವನು ಕರಣಗಳ ಮೂಲ ಎನ್ನಲಾಗುತ್ತದೆ. ಸದ್ಯ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ತನುಶ್ರೀ ಭರತನಾಟ್ಯದ 108ಕರಣಗಳನ್ನು ಅತೀ ಚಿಕ್ಕ ವಯಸ್ಸಿನಲ್ಲಿ ಪ್ರಸ್ತುತ ಪಡಿಸಿದ್ದಾಳೆ. ಉಡುಪಿಯ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಈ ದಾಖಲೆಯ ಕಾರ್ಯಕ್ರಮ‌ . ನಡೆಯಿತು. ಈ ಸಂದರ್ಭದಲ್ಲಿ ಎಂಟು ಮಂದಿ ಭರತನಾಟ್ಯ ಮತ್ತು ಸಂಗೀತ ವಿದ್ವಾಂಸರನ್ನು ಗೌರವಿಸಲಾಯ್ತು. 

ನಿವೃತ್ತ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌ ವಿರುದ್ಧ 1,300 ಕೋಟಿ ಅಕ್ರಮ ಆರೋಪ

ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆ ದಾರರ ಸಂಘದ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆದುದ್ದು ಎಂಟನೇ ವಿಶ್ವದಾಖಲೆಗೆ ತನುಶ್ರೀ ಗಮನ ಸೆಳೆದಿದ್ದಾಳೆ. ಗೋಲ್ಡನ್ ಬುಕ್ ಸಂಸ್ಥೆಯ ಪ್ರತಿನಿಧಿ ಗೌರವ ಮಿತ್ತಲ್ ಅವರು ದಾಖಲೆಯ ಪ್ರಮಾಣ ಪತ್ರವನ್ನು ತನುಶ್ರೀಗೆ ಹಸ್ತಾಂತರಿಸಿದರು .ಹಲವು ವಿಶ್ವದಾಖಲೆಗಳ‌ ಸರದಾರಿಣಿ ಉಡುಪಿಯ ಹೆಮ್ಮೆಯ ಪ್ರತಿಭೆ ತನುಶ್ರೀ ಈ ಬಾರಿ ಭರತನಾಟ್ಯ ಮೂಲಕ ಹೊಸ ಸಾಧನೆ ಮಾಡಿದ್ದು, ಈ ಸಾಧನೆ ಇನ್ನಷ್ಟು ಮಕ್ಕಳಿಗೆ ಮಾದರಿಯಾಗಲಿ. ತನುಶ್ರೀ ಪೋಷಕರಾದ ಉದಯ್ ಕುಮಾರ್ ಸಂಧ್ಯಾ ದಂಪತಿಗಳು ಈ ವೇಳೆ ಹಾಜರಿದ್ದರು.