ರಾಜ್ಯದ 18 ಜಿಲ್ಲೆ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್(ಸ್ಪಾ್ಯನ್)ಗಳ ನಡುವೆ ಹೊಸದಾಗಿ 240 ಕೇಬಲ್ ಅಳವಡಿಸಲು ಶೀಘ್ರದಲ್ಲೇ ಚಾಲನೆ ಸಿಗಲಿದ್ದು ಇನ್ನೂ ನಾಲ್ಕು ತಿಂಗಳು ಭಾರೀ ವಾಹನ ಸಂಚಾರಕ್ಕೆ ಫ್ಲೈ ಓವರ್ ಮುಕ್ತವಾಗುವುದಿಲ್ಲ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ಏ.05): ರಾಜ್ಯದ 18 ಜಿಲ್ಲೆ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್(ಸ್ಪಾ್ಯನ್)ಗಳ ನಡುವೆ ಹೊಸದಾಗಿ 240 ಕೇಬಲ್ ಅಳವಡಿಸಲು ಶೀಘ್ರದಲ್ಲೇ ಚಾಲನೆ ಸಿಗಲಿದ್ದು ಇನ್ನೂ ನಾಲ್ಕು ತಿಂಗಳು ಭಾರೀ ವಾಹನ ಸಂಚಾರಕ್ಕೆ ಫ್ಲೈ ಓವರ್ ಮುಕ್ತವಾಗುವುದಿಲ್ಲ. ಇದರಿಂದಾಗಿ ಒಂದೂವರೆ ವರ್ಷವಾದರೂ ಭಾರೀ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಹೊಸ ಕೇಬಲ್ ಅಳವಡಿಕೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ಟೆಂಡರ್ ಕರೆದಿದ್ದು ಭಾಗವಹಿಸಿದ್ದ ನಾಲ್ಕು ಕಂಪನಿಗಳಲ್ಲಿ ಪ್ರೆಸಿನೇಟ್ ಕಂಪನಿ ಕಡಿಮೆ ಬಿಡ್ ಸಲ್ಲಿಸಿದ್ದು ಈಗಾಗಲೇ ಟೆಂಡರ್ ನೀಡಿ ಮೂರು ವಾರವಾಗಿದೆ.
ಕಂಪೆನಿ ಪ್ರತಿನಿಧಿಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ತಜ್ಞರೊಂದಿಗೆ 10 ದಿನದಲ್ಲಿ ವಿಚಾರ ವಿನಿಮಯಕ್ಕೆ ಎನ್‌ಎಚ್‌ಎಐ ಸಭೆ ಆಯೋಜಿಸಲಿದ್ದು ಏ.20 ರ ಬಳಿಕ ಕೇಬಲ್ ಬದಲಾವಣೆಗೆ ಚಾಲನೆ ಸಿಗುವ ಸಾಧ್ಯತೆ ಇದೆ. ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿ.ಮೀ. ಉದ್ದ ನಿರ್ಮಿಸಿರುವ ಮೇಲ್ಸೇತುವೆಯಲ್ಲಿ 120 ಪಿಲ್ಲರ್‌ಗಳಿದ್ದು ಭಾರ ತಡೆಯಲು ಎರಡು ಪಿಲ್ಲರ್‌ಗಳ ನಡುವೆ 10 ಕೇಬಲ್ ಅಳವಡಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಎರಡು ಕೇಬಲ್ ಅಳವಡಿಸಲು ಅವಕಾಶವಿತ್ತು. ಇದೀಗ ಮೊದಲು ಈ 120 ಪಿಲ್ಲರ್‌ಗಳ ನಡುವೆ 240 ಹೊಸ ಕೇಬಲ್ ಅಳವಡಿಸಲಾಗುವುದು.
ಕಾಂಗ್ರೆಸ್ಸಿಗೆ 60 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು: ಆಕಾಂಕ್ಷಿ ಸಂಖ್ಯೆ 2ಕ್ಕೆ ಇಳಿಸಲು ರಾಹುಲ್ ತಾಕೀತು
ಕೇಬಲ್ ದೋಷ ಪರೀಕ್ಷಿಸಲು ಕೋರಿಕೆ: ಕೇಬಲ್ ಅಳವಡಿಸಲು ಸುಮಾರು 4 ತಿಂಗಳು ಸಮಾಯಾವಕಾಶ ಬೇಕಿದೆ. ಈ ಸಮಯದಲ್ಲಿ ಮೇಲ್ಸೇತುವೆ ಮೇಲೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ಕಾರ್ಯ ಮುಗಿದ ನಂತರ ಭಾರೀ ವಾಹನಗಳ ಸಂಚಾರಕ್ಕೂ ಮೇಲ್ಸೇತುವೆ ಮುಕ್ತವಾಗಲಿದೆ. ಬಳಿಕ ಪ್ರತಿ ಎರಡು ಪಿಲ್ಲರ್‌ಗಳ ನಡುವೆ ಇರುವ 10 ಕೇಬಲ್(120 ಪಿಲ್ಲರ್‌ಗಳ 1200 ಕೇಬಲ್)ಗಳನ್ನೂ ಬದಲಾಯಿಸಲಾಗುವುದು. 1200 ಕೇಬಲ್ ಅಳವಡಿಕೆಗೆ ಒಂದೂವರೆ ವರ್ಷ ಕಾಲಾವಕಾಶ ಬೇಕಾಗಲಿದ್ದು ಮೇಲ್ಸೇತುವೆಯ ಸಂಪೂರ್ಣ ರಿಪೇರಿ ಕಾರ್ಯ 2025 ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಹಳೆಯ ಕೇಬಲ್‌ಗಳಲ್ಲಿರುವ ದೋಷ ಪರೀಕ್ಷಿಸುವಂತೆ ಐಐಎಸ್‌ಸಿ ಅನ್ನು ಕೋರಲಾಗಿದೆ.
ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯದಲ್ಲಿ ಬರುವ ಮೇಲ್ಸೇತುವೆ ಇದಾಗಿದೆ. ದೊಡ್ಡ ಬಂಡೆ ಸೇರಿದಂತೆ ಭಾರದ ವಸ್ತುಗಳನ್ನು ಹೆಚ್ಚು ಟೈರ್ ಹೊಂದಿರುವ ಭಾರೀ ವಾಹನಗಳು ಸಾಗಿಸಿದ್ದರಿಂದ ಎಂಟನೇ ಮೈಲಿ ಜಂಕ್ಷನ್ ಸಮೀಪ 102 ಮತ್ತು 103 ನೇ ಪಿಲ್ಲರ್ ನಡುವಿನ ಮೂರು ಕೇಬಲ್ ಬಾಗಿದ್ದರಿಂದ 2012 ರ ಡಿಸೆಂಬರ್ ಕೊನೆಯ ವಾರದಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಬಳಿಕ 16-2-2022 ರಿಂದ ಲಘು ವಾಹನಗಳಿಗೆ ಮಾತ್ರ ಮೇಲ್ಸೇತುವೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗಿತ್ತು.
ಫ್ಲೈ ಓವರ್ ಕ್ಷಮತೆಗೆ ಹಲವು ಪರೀಕ್ಷೆ: ಮೇಲ್ಸೇತುವೆಯ ಕ್ಷಮತೆ ಬಗ್ಗೆ ಕೆಲವು ಪರೀಕ್ಷೆಗಳನ್ನು ನಡೆಸಿದ ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಚಂದ್ರ ಕಿಶನ್ ನೇತೃತ್ವದ ತಂಡ ಎನ್‌ಎಚ್‌ಎಐಗೆ ವರದಿ ಸಲ್ಲಿಸಿತ್ತು. ಬಳಿಕ ಎನ್‌ಎಚ್‌ಎಐ ಉನ್ನತ ಅಧಿಕಾರಿಗಳ ತಂಡವು ಐಐಎಸ್‌ಸಿಯ ಚಂದ್ರ ಕಿಶನ್, ಟ್ಯಾಂಡನ್ ಕನ್ಸಲ್ಟೆನ್ಸಿಯ ಬ್ರಿಡ್ಜ್ ಇಂಜನಿಯರ್ ದೆಹಲಿಯ ಡಾ.ಮಹೇಶ್ ಟ್ಯಾಂಡನ್, ದೆಹಲಿಯ ಸೆಂಟ್ರಲ್ ರೋಡ್ ರಿಸಚ್‌ರ್ ಇನ್ಸ್‌ಟಿಟ್ಯೂಟ್‌ನ ನಿವೃತ್ತ ವಿಜ್ಞಾನಿ ಡಾ.ಶರ್ಮಾ ಅವರ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಿ ವರದಿ ನೀಡುವಂತೆ ಕೋರಿತ್ತು.
ಹೆಚ್ಚು ಟೈರ್ ಹೊಂದಿರುವ ಭಾರೀ ವಾಹನಗಳಿಗೆ ಅವಕಾಶ ನೀಡದೇ ಉಳಿದ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಮುಕ್ತ ಮಾಡಬಹುದು ಎಂದು ಸಮಿತಿ ವರದಿ ನೀಡಿತ್ತು. ಆದರೆ ಇದನ್ನು ಅನುಷ್ಠಾನಗೊಳಿಸುವುದು ಕಷ್ಟಕರವಾಗಿದ್ದರಿಂದ ಪರ್ಯಾಯ ಮಾರ್ಗ ಕಂಡುಹಿಡಿಯುವಂತೆ ಕೋರಲಾಗಿತ್ತು. ಅದರಂತೆ ಇದೀಗ ಕೇಬಲ್ ಅಳವಡಿಕೆ, ಬದಲಾವಣೆಯ ಕಾರ್ಯಕ್ಕೆ ಎನ್‌ಎಚ್‌ಎಐ ಮುಂದಾಗಿದೆ. ಸಧ್ಯ ಬೆಳಿಗ್ಗೆ 5 ರಿಂದ ರಾತ್ರಿ 12 ಗಂಟೆಯವರೆಗೂ ಲಘು ವಾಹನಗಳಿಗೆ ಮಾತ್ರ ಫ್ಲೈ ಓವರ್‌ನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಆಟೋ ಮೇಲೆ ಪಕ್ಷಗಳ ಸ್ಟಿಕ್ಕರ್, ಬ್ಯಾನರ್ ಇದ್ದರೆ ಕೇಸ್: ಈವರೆಗೂ 450ಕ್ಕೂ ಹೆಚ್ಚು ಪ್ರಕರಣ ದಾಖಲು
ಪ್ರತಿ ಪಿಲ್ಲರ್ ನಡುವೆ ಎರಡು ಹೊಸ ಕೇಬಲ್ ಅಳವಡಿಕೆಗೆ ಎರಡು ವಾರದಲ್ಲಿ ಚಾಲನೆ ಸಿಗಲಿದೆ. ನಾಲ್ಕು ತಿಂಗಳಲ್ಲಿ ಈ ಕಾರ್ಯ ಮುಗಿಯಲಿದ್ದು ಬಳಿಕ 1200 ಕೇಬಲ್ ಬದಲಿಸಲಾಗುವುದು. ಕೇಬಲ್‌ನಲ್ಲಿರುವ ದೋಷ ಪತ್ತೆ ಹಚ್ಚುವಂತೆ ಐಐಎಸ್‌ಸಿಯನ್ನು ಎನ್‌ಎಚ್‌ಎಐ ಕೋರಿದೆ.
- ಡಾ.ಚಂದ್ರ ಕಿಶನ್, ಐಐಎಸ್‌ಸಿ ತಜ್ಞ
