ಬೆಂಗಳೂರಿನಲ್ಲಿ ನಿನ್ನೆ ವರ್ಷದ ಅತಿ ಹೆಚ್ಚು ಬಿಸಿಲು: 36.5ಕ್ಕೆ ತಲುಪಿದ ಉಷ್ಣಾಂಶ

ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ವಾಡಿಕೆಗಿಂತ ಬರೋಬ್ಬರಿ 3 ಡಿಗ್ರಿ ಸೆಲ್ಷಿಯಸ್‌ನಷ್ಟು ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಿದ್ದು, ಈ ಮೂಲಕ 36.5 ಡಿಗ್ರಿ ಸೆಲ್ಷಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. 

Yesterday was the hottest day of the year in Bengaluru Temperature reached 36 5 gvd

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಏ.19): ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ವಾಡಿಕೆಗಿಂತ ಬರೋಬ್ಬರಿ 3 ಡಿಗ್ರಿ ಸೆಲ್ಷಿಯಸ್‌ನಷ್ಟು ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಿದ್ದು, ಈ ಮೂಲಕ 36.5 ಡಿಗ್ರಿ ಸೆಲ್ಷಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಈ ಬಾರಿಯ ಬೇಸಿಗೆ ಅವಧಿಯಲ್ಲಿ ನಗರದಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ಉಷ್ಣಾಂಶವಾಗಿದೆ.

ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ ಏರಿಕೆ ಆಗುತ್ತಿದ್ದು, ಮಳೆ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಒಂದೆರಡು ದಿನ ಉಷ್ಣಾಂಶದಲ್ಲಿ ಇಳಿಕೆಯಾಗಿತ್ತು. ಇದೀಗ ಮತ್ತೆ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಮಂಗಳವಾರ ಈವರೆಗಿನ ಬೇಸಿಗೆಯ ಅತಿ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಏಪ್ರಿಲ್‌ನ ಸಾಮಾನ್ಯ ಗರಿಷ್ಠ ಉಷ್ಣಾಂಶ 34.1 ಡಿಗ್ರಿ ಇದ್ದು, ವಾಡಿಕೆ ಗರಿಷ್ಠ ಉಷ್ಣಾಂಶಕ್ಕಿಂತ ಬರೋಬ್ಬರಿ 3 ಡಿಗ್ರಿ ಸೆಲ್ಷಿಯಸ್‌ ಹೆಚ್ಚು ದಾಖಲಾಗಿದೆ.

ಬೆಂಗಳೂರಿನಲ್ಲಿ ಕಾಂಗ್ರೆಸ್‌, ಬಿಜೆಪಿ, ಆಪ್‌ನಿಂದ ಒಟ್ಟು 21 ನಾಮಪತ್ರ: ಭಾರಿ ಮೆರವಣಿಗೆ

ಕಳೆದ ವಾರ 36 ಡಿಗ್ರಿ ದಾಖಲು: ಮಾರ್ಚ್‌ ಕೊನೆಯ ವಾರದಿಂದ ನಗರದಲ್ಲಿ ಉಷ್ಣಾಂಶದಲ್ಲಿ ಹೆಚ್ಚಳವಾಗಿತ್ತು. 32ರಿಂದ 34 ಡಿಗ್ರಿ ಸೆಲ್ಷಿಯಸ್‌ ಅಸುಪಾಸಿನಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶವು, ಕಳೆದ ಗುರುವಾರ ಏಕಾಏಕಿ 2 ಡಿಗ್ರಿ ಏರಿಕೆ ಆಗಿತ್ತು. ಹೀಗಾಗಿ, ಗರಿಷ್ಠ ಉಷ್ಣಾಂಶವು 36 ಡಿಗ್ರಿ ಸೆಲ್ಷಿಯಸ್‌ ತಲುಪಿತ್ತು. ಇದೀಗ ಅದಕ್ಕಿಂತ ಹೆಚ್ಚಿನ ಉಷ್ಣಾಂಶ ಮಂಗಳವಾರ ದಾಖಲಾಗಿದೆ.

ಕಳೆದ ವರ್ಷದ ಗರಿಷ್ಠ ದಾಟಲು 0.2 ಡಿಗ್ರಿ ಬಾಕಿ: ಕಳೆದ ವರ್ಷ ನಗರದಲ್ಲಿ ಪೂರ್ವ ಮುಂಗಾರು ಅವಧಿಯಲ್ಲಿ ಸಾಕಷ್ಟು ಮಳೆ ಆಗಿತ್ತು. ಆದರೂ 2022ರ ಏಪ್ರಿಲ್‌ 30 ರಂದು 36.7 ಡಿಗ್ರಿ ಸೆಲ್ಷಿಯಸ್‌ನಷ್ಟುಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದು ಕಳೆದ ವರ್ಷದ ಏಪ್ರಿಲ್‌ನಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ. ಪ್ರಸಕ್ತ ವರ್ಷ ಈಗಾಗಲೇ 36.5 ಡಿಗ್ರಿ ಸೆಲ್ಷಿಯಸ್‌ ತಲುಪಿದ್ದು ಕಳೆದ ವರ್ಷದ ಗರಿಷ್ಠ ಉಷ್ಣಾಂಶಕ್ಕಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುವುದಕ್ಕೆ ಕೇವಲ 0.2 ಡಿಗ್ರಿ ಅಷ್ಟೇ ಬಾಕಿ ಇದೆ.

ಬಿಸಿ ಗಾಳಿ ಅನುಭವ: ಗರಿಷ್ಠ ಉಷ್ಣಾಂಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮಧ್ಯಾಹ್ನದ ಅವಧಿಯಲ್ಲಿ ಬಿಸಿ ಗಾಳಿಯ ಅನುಭವವಾಗುತ್ತಿದೆ. ಗಾಳಿಯಲ್ಲಿ ತೇವಾಂಶ ಕಡಿಮೆ ಆಗಿರುವುದರಿಂದ ಈ ರೀತಿ ಅನುಭವವಾಗುತ್ತಿದೆ. ಮಳೆ ಬಂದರೆ ಉಷ್ಣಾಂಶದಲ್ಲಿ ಇಳಿಕೆ ಆಗಲಿದೆ. ಆಗ ಬಿಸಿ ಗಾಳಿ ಅನುಭವ ಆಗುವುದಿಲ್ಲ ಎಂದು ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ.

2016ರಲ್ಲಿ ಅತಿ ಹೆಚ್ಚು ಉಷ್ಣಾಂಶ: ರಾಜಧಾನಿ ಬೆಂಗಳೂರಿನಲ್ಲಿ 2016ರ ಏಪ್ರಿಲ್‌ 25ರಂದು 39.2 ಡಿಗ್ರಿ ಸೆಲ್ಷಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತು. ಇದು ಬೆಂಗಳೂರಿನಲ್ಲಿ ಈವರೆಗೆ ಏಪ್ರಿಲ್‌ನಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ಉಷ್ಣಾಂಶವಾಗಿದೆ.

ಶುಭ್ರ ಆಕಾಶ ಇರುವುದರಿಂದ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಮುಂದಿನ ಎರಡು ದಿನದ ನಂತರ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಗರಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಮಳೆ ಬರದಿದ್ದರೆ, ಉಷ್ಣಾಂಶ ಇನ್ನಷ್ಟು ಹೆಚ್ಚಾಗಬಹುದು.
-ಹೆಸರು ಹೇಳಲು ಇಚ್ಛಿಸದ ಹವಾಮಾನ ತಜ್ಞ, ಭಾರತೀಯ ಹವಾಮಾನ ಇಲಾಖೆ

ರಾಹುಲ್‌ ಗಾಂಧಿ ಸಭೆಗೆ ಗೈರಾಗಿದ್ದಕ್ಕೆ ವಿಶೇಷ ಅರ್ಥ ಬೇಡ: ಡಾ.ಜಿ.ಪರಮೇಶ್ವರ್

ಬೆಂಗಳೂರಿನ ವಿವಿಧ ಭಾಗದ ಉಷ್ಣಾಂಶ
ಸ್ಥಳ ಗರಿಷ್ಠ ಉಷ್ಣಾಂಶ ಕನಿಷ್ಠ ಉಷ್ಣಾಂಶ

ಬೆಂಗಳೂರು ನಗರ 36.5 21.0
ಬೆಂಗಳೂರು ವಿಮಾನ ನಿಲ್ದಾಣ 36.5 20.5
ಎಚ್‌ಎಎಲ್‌ 35.0 21.0

ಕಳೆದ 12 ವರ್ಷದಲ್ಲಿ ಏಪ್ರಿಲ್‌ನಲ್ಲಿ ಗರಿಷ್ಠ ಉಷ್ಣಾಂಶ
ದಿನ ಗರಿಷ್ಠ ಉಷ್ಣಾಂಶ (ಡಿ.ಸೆ)

2011(ಏ14) 34.6
2012(ಏ.25) 37.5
2013(ಏ.8) 36.8
2014(ಏ.29) 36.2
2015(ಏ.6) 36.5
2016(ಏ.25) 39.2
2017(ಏ.28) 38.9
2018(ಏ.28) 34.9

2019
2020(ಏ.6) 36.4
2021(ಏ.1) 37.2
2022(ಏ.30) 36.2

Latest Videos
Follow Us:
Download App:
  • android
  • ios