ಯಶವಂತಪುರ ರೈಲು ನಿಲ್ದಾಣದ ಪುನರ್‌ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿಲ್ದಾಣದ ಮೆಟ್ರೋ ಬದಿಯ ಪ್ರವೇಶದ್ವಾರವನ್ನು ತಾತ್ಕಾಲಿಕವಾಗಿ ಪ್ಲಾಟ್‌ಫಾರ್ಮ್‌ 6ರ ಬಳಿ ಸುಮಾರು 150 ಮೀ. ಮುಖ್ಯ ರಸ್ತೆಯ ಕಡೆಗೆ ಸ್ಥಳಾಂತರಿಸಲಾಗಿದೆ.

 ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದ ಪುನರ್‌ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿಲ್ದಾಣದ ಮೆಟ್ರೋ ಬದಿಯ ಪ್ರವೇಶದ್ವಾರವನ್ನು ತಾತ್ಕಾಲಿಕವಾಗಿ ಪ್ಲಾಟ್‌ಫಾರ್ಮ್‌ 6ರ ಬಳಿ ಸುಮಾರು 150 ಮೀ. ಮುಖ್ಯ ರಸ್ತೆಯ ಕಡೆಗೆ ಸ್ಥಳಾಂತರಿಸಲಾಗಿದೆ.

ಟಿಕೆಟ್‌ ಕೌಂಟರ್‌ಗಳನ್ನು ಸಹ ಈ ತಾತ್ಕಾಲಿಕ ಪ್ರವೇಶ ದ್ವಾರಕ್ಕೆ ಸ್ಥಳಾಂತರಿ

ಜನರಲ್‌ ಟಿಕೆಟ್‌ ಕೌಂಟರ್‌ಗಳನ್ನು ಸಹ ಈ ತಾತ್ಕಾಲಿಕ ಪ್ರವೇಶ ದ್ವಾರಕ್ಕೆ ಸ್ಥಳಾಂತರಿಸಲಾಗಿದ್ದು ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗಳಿಗೆ ತೆರಳಲು ಅಲ್ಲಿರುವ 30 ಮೀ. ಅಗಲದ ಪಾದಚಾರಿ ಮೇಲ್ಸೇತುವೆ ಬಳಸಿಕೊಳ್ಳುವಂತೆ ಕೋರಲಾಗಿದೆ.

ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ಮತ್ತು ನೆರವು ನೀಡಲು ಆರ್‌ಪಿಎಫ್‌ ಸಿಬ್ಬಂದಿ

ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ಮತ್ತು ನೆರವು ನೀಡಲು ಆರ್‌ಪಿಎಫ್‌ ಸಿಬ್ಬಂದಿ ನಿಯೋಜಿಸಲಾಗಿದ್ದು ಸಹಾಯ ಕೇಂದ್ರ ನ್ನು ತೆರೆಯಲಾಗಿದೆ. ಸಾರ್ವಜನಿಕ ಉದ್ಘೋಷಣಾ ವ್ಯವಸ್ಥೆ ಹಾಗೂ ಮಾಹಿತಿ ಫಲಕಗಳ ಅಳವಡಿಕೆಯ ಮೂಲಕ ಪ್ರಯಾಣಿಕರಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.