Saundatti Yellamma Temple: 2 ವರ್ಷಗಳ ನಂತರ ಯಲ್ಲಮ್ಮನ ಜಾತ್ರಾ ಮಹೋತ್ಸವ

*  ಯಲ್ಲಮ್ಮನ ಜಾತ್ರಾ ಮಹೋತ್ಸವ ಇಂದು
*  ಭಾರತ ಹುಣ್ಣಿಮೆ ಅಂಗವಾಗಿ ಗುಡ್ಡಕ್ಕೆ ಲಕ್ಷಾಂತರ ಭಕ್ತರು 
*  ಯಲ್ಲಮ್ಮ ಗುಡ್ಡದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
 

Yellamma Devi Fair Will Be Held at Saundatti After Two Years on Feb 16th at Belagavi grg

ಸುರೇಶ ಬಾಳೋಜಿ

ಸವದತ್ತಿ(ಫೆ.16):  ಪ್ರತಿ ವರ್ಷ ಭಾರತ ಹುಣ್ಣಿಮೆ ಎಂದರೆ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿ(Yellamma Temple) ಜಾತ್ರೆಯ(Fair) ಸಂಭ್ರಮ ಮನೆ ಮಾಡಿದೆ. ಅಪಾರ ಸಂಖ್ಯೆಯಲ್ಲಿ ಭಕ್ತ ಸಂಕುಲ ಸೇರುವ ವಿಶೇಷ ಹುಣ್ಣಿಮೆ ಇದಾಗಿದೆ. ಕಳೆದ 2 ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಪೂಜೆ ಹೊರತುಪಡಿಸಿ ಎಲ್ಲವೂ ಸ್ತಬ್ಧವಾಗಿತ್ತು. ಈಗ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಇಂದು ನಡೆಯುವ ಭಾರತ ಹುಣ್ಣಿಮೆಗೆ ಲಕ್ಷಾಂತರ ಭಕ್ತರು(Devotees) ಬಂದು ಸೇರುತ್ತಿದ್ದಾರೆ.

ಭಾರತ ಹುಣ್ಣಿಮೆಗೆ ತರಳುಬಾಳು ಹುಣ್ಣಿಮೆಯಂತಲೂ ಕರೆಯುವುದು ವಾಡಿಕೆಯಾಗಿದೆ. ಕಳೆದ ವರ್ಷ ಭಣಗುಡುತ್ತಿದ್ದ ದೇವಸ್ಥಾನದ ಆವರಣ ಈ ಬಾರಿ ಜನಜಂಗುಳಿಯಿಂದ ಕಂಗೊಳಿಸುತ್ತಿದೆ. ಕೊರೋನಾ(Coronavirus) ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕ್ಷೇತ್ರದಲ್ಲಿ ಅನೇಕ ವಿಧದ ಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಅಕ್ಕಪಕ್ಕದ ವಿವಿಧ ರಾಜ್ಯಗಳಿಂದಲೂ ಭಕ್ತರು ಶ್ರೀಕ್ಷೇತ್ರಕ್ಕೆ ಹರಿದು ಬರುತ್ತಿದ್ದು, ಶ್ರೀ ಕ್ಷೇತ್ರದಲ್ಲಿ ದರ್ಶನ ಹೊರತುಪಡಿಸಿ ಬೇರಾವುದೆ ಉತ್ಸವಗಳಿಗೆ ಅವಕಾಶ ಇಲ್ಲದಾಗಿದೆ. 

ಸವದತ್ತಿ ಯಲ್ಲಮ್ಮ ದೇವಸ್ಥಾನ ಬಾಗಿಲು ಓಪನ್: ದರ್ಶನಕ್ಕೆ ಕೆಲ ಷರತ್ತುಗಳು ಅನ್ವಯ

ಕಳೆದ ಒಂದು ವಾರದಿಂದ ಚಕ್ಕಡಿ ಮೂಲಕ ಭಕ್ತರು ಸಾಗಿ ಬರುತ್ತಿದ್ದು, ಕ್ಷೇತ್ರದೆಲ್ಲೆಡೆ ಬಿಡಾರ ಹೂಡಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಭಕ್ತರು ತಾವು ತಂದ ಅಡುಗೆ ಪದಾರ್ಥಗಳಿಂದ ಕ್ಷೇತ್ರದ ಆವರಣದಲ್ಲಿಯೇ ಒಲೆ ಹೂಡಿ ಕರಿಕಡಬು, ಅನ್ನ ವಿವಿಧ ತರಕಾರಿಗಳಿಂದ ಅಡುಗೆ ತಯಾರಿಸಿ ಪಡ್ಡಲಗಿ ತುಂಬುವುದು ಸಂಪ್ರದಾಯ ಆಗಿದೆ. ಈ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ದೇವಿಗೆ ಪಡ್ಡಲಗಿ ಮೂಲಕ ನೈವೇದ್ಯ ಅರ್ಪಿಸಿ, ಕಾಯಿ-ಕರ್ಪುರದೊಂದಿಗೆ ದೇವಿಯ ದರ್ಶನ ಪಡೆದುಕೊಳ್ಳುವುದು ಭಕ್ತರ ಪದ್ದತಿಯಾಗಿದೆ. 

ಕ್ಷೇತ್ರದಲ್ಲಿ ಕುಂಕುಮ, ಬಂಢಾರವೇ ದೇವಿಯ ಪ್ರಮುಖ ಪ್ರಸಾದವಾಗಿದೆ. ಈ ಬಾರಿಯ ಜಾತ್ರೆಗೆ ಜನರು ಸಾಕಷ್ಟು ಪ್ರಮಾಣದಲ್ಲಿ ಬಂದಿರುವುದರಿಂದ ಶ್ರೀ ಕ್ಷೇತ್ರದಲ್ಲಿ ವ್ಯಾಪಾರವನ್ನೇ(Business) ನೆಚ್ಚಿಕೊಂಡಿರುವ ಹಲವು ವ್ಯಾಪಾರಿಗಳಿಗೆ ಸಂತಸ ತಂದಿದ್ದು, ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ ಅವರಿದ್ದಾರೆ. ವ್ಯಾಪಾರಸ್ಥರ ಗೋಳು ಒಂದೆಡೆಯಾದರೆ ದೇವಸ್ಥಾನದ ಆದಾಯಕ್ಕೂ ಕಳೆದ ಎರಡು ವರ್ಷಗಳಿಂದ ದೊಡ್ಡ ಹೊಡೆತಬಿದ್ದಿದೆ. ಭಾರತ ಹುಣ್ಣಿಮೆಗೆ ಆಗಮಿಸುತ್ತಿರುವ ಭಕ್ತರ ನಿಯಂತ್ರಣಕ್ಕಾಗಿ ಪೊಲೀಸ್(Police) ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂದು ಸುಮಾರು 10 ರಿಂದ 15 ಲಕ್ಷ ಭಕ್ತರು ಸೇರುವ ನಿರೀಕ್ಷೆಯಿದೆ. ಚಕ್ಕಡಿ, ಕಾರು, ವಿಶೇಷ ಬಸ್‌ಗಳಲ್ಲಿ ತಂಡೋಪತಂಡವಾಗಿ ಭಕ್ತರ ದಂಡು ಯಲ್ಲಮ್ಮ ದೇವಸ್ಥಾನಕ್ಕೆ ಹರಿದು ಬರುತ್ತಿದೆ. ಯಲ್ಲಮ್ಮಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಜೋಗುಳಬಾವಿ, ನೂಲಿನ ಗಿರಣಿ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನ ಅಳವಡಿಕೆ ಮಾಡಲಾಗಿದೆ. 

ಯಲ್ಲಮ್ಮ ಗುಡ್ಡದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

ಜಾತ್ರೆ ಇರುವ ಹಿನ್ನೆಲೆಯಲ್ಲಿ ಯಲ್ಲಮ್ಮ ಗುಡ್ಡದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಯಲ್ಲಮ್ಮ ಗುಡ್ಡದಲ್ಲಿ 52 ಸಿಸಿ ಕ್ಯಾಮರಾಗಳನ್ನ(CC Camera) ಅಳವಡಿಕೆ ಮಾಡಲಾಗಿದ್ದು, ಭಕ್ತರಿಗೆ ಶುದ್ಧ ಕುಡಿಯುವ ನೀರು ಸೇರಿ ಮೂಲಸೌಕರ್ಯಕ್ಕೆ ಸಕಲ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗಿದೆ ಅಂತ ಸವದತ್ತಿ ಯಲ್ಲಮ್ಮ ದೇವಸ್ಥಾನದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರು ಮಾಹಿತಿ ನೀಡಿದ್ದಾರೆ. 

ಗೋವಾ ಸಿಎಂ ಬಂದ ತಕ್ಷಣ ಓಪನ್ ಆದ ಸವದತ್ತಿ ಯಲ್ಲಮ್ಮ ದೇವಾಲಯ!

ಸವದತ್ತಿ ಯಲ್ಲಮ್ಮ ದೇಗುಳ ಅಭಿವೃದ್ಧಿಗೆ ಮುಜರಾಯಿ ಸಚಿವೆ ಆದೇಶ

ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ ಆಚರಿಸುವ ವಿಜಯದಶಮಿಯ (Vijayadashami)  ಸಂಧರ್ಭದಲ್ಲಿ ರಾಜ್ಯದ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು  ನಡೆದಿದ್ದು, ಅಂದಿನ ಮುಜರಾಯಿ, ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಸವದತ್ತಿಯಲ್ಲಿ (Saudatti) ಚಾಲನೆ ನೀಡಿದ್ದರು. 

ರಾಜ್ಯದ ಪ್ರಮುಖ ಶ್ರದ್ಧಾ ಕೇಂದ್ರವಾದ ಬೆಳಗಾವಿ (Belagavi) ಜಿಲ್ಲೆಯ  ಸವದತ್ತಿ ಯಲ್ಲಮ್ಮದೇವಿ ದೇವಾಲಯದಲ್ಲಿ  ಕಳೆದ ವರ್ಷದ ಅ. 15 ರಂದು ಬೆಳಗ್ಗೆ ರಾಜ್ಯದ ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವರಾದ  ಶಶಿಕಲಾ  ಜೊಲ್ಲೆ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಾಡಿನಾದ್ಯಂತ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಿದ್ದರು. 
 

Latest Videos
Follow Us:
Download App:
  • android
  • ios