ಮಂಗಳೂರು(ಮಾ.21): ಪೌರಾಣಿಕ ಪ್ರಸಂಗದ ಯಕ್ಷಗಾನ ತಾಳಮದ್ದಲೆ ಕೂಟವೊಂದರಲ್ಲಿ ರಾಕ್ಷಸ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಹವ್ಯಾಸಿ ಅರ್ಥಧಾರಿಗಳಿಬ್ಬರು ಮೈಕ್‌ನಿಂದ ಹೊಡೆದಾಡಿಕೊಂಡ ಘಟನೆ ಉಡುಪಿ ಜಿಲ್ಲೆ ಪಡುಬಿದ್ರಿಯಿಂದ ವರದಿಯಾಗಿದೆ.

ಇಲ್ಲಿನ ಅವರಾಲುಮಟ್ಟು ಗ್ರಾಮದಲ್ಲಿ ಮಾ.13ರಂದು ‘ಶುಂಭ ವಧೆ’ ಎಂಬ ಪ್ರಸಂಗದ ತಾಳಮದ್ದಲೆ ಕೂಟವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಶುಂಭ ಹಾಗೂ ರಕ್ತಬೀಜಾಸುರನ ಅರ್ಥಧಾರಿಗಳಿಬ್ಬರು ಪ್ರಸಂಗದ ನಡೆ ಬಿಟ್ಟು ವೈಯಕ್ತಿಕ ನಿಂದನೆಗೆ ಇಳಿದು ಪರಸ್ಪರ ಹಲ್ಲೆ ನಡೆಸಿದ್ದಾರೆ.

ಕೊರೋ​ನಾ​ತಂಕ: 15 ನಿಮಿ​ಷ​ಕ್ಕಿಂತ ಹೆಚ್ಚು ಹೊತ್ತು ನಮಾಜ್ ಮಾಡುವಂತಿಲ್ಲ

ಈ ಪ್ರಸಂಗದಲ್ಲಿ ರಕ್ತಬೀಜಾಸುರನು ದೇವಿಯ ಗುಣಗಾನ ಮಾಡುವ, ಅದನ್ನು ಶುಂಭ ವಿರೋಧಿಸುವ ಪ್ರಸಂಗ ಇದೆ. ಅದರಂತೆ ತಾಳಮದ್ದಳೆಯಲ್ಲಿ ರಕ್ತಬೀಜಾಸುರನು ಶುಂಭನಿಗೆ ದೇವಿಯನ್ನು ಪೂಜಿಸುವಂತೆ ಬುದ್ಧಿ ಹೇಳಿದಾಗ, ಶುಂಭ ‘ನೀನು ನನಗೆ ಬುದ್ಧಿ ಹೇಳುವ ಅಗತ್ಯ ಇಲ್ಲ. ನೀನು ಇಲ್ಲಿ ಬಂದದ್ದು ಯಾಕೆ? ಹೊರಟು ಹೋಗು’ ಎಂದು ಹೇಳಿದರು. ಅದಕ್ಕೆ ಶುಂಭ, ‘ನಾನು ಹೊಗುವುದಕ್ಕಾಗುವುದಿಲ್ಲ, ನೀನು ಕರೆಸಿದ್ದಲ್ಲ’ ಎಂದು ಪ್ರತ್ಯುತ್ತರ ಕೊಟ್ಟರು.

'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..!

ಈ ವಾಗ್ವಾದ ವೈಯಕ್ತಿಕ ನಿಂದನೆವರೆಗೆ ಸಾಗಿ ಒಂದು ಹಂತದಲ್ಲಿ ಇಬ್ಬರು ತಮ್ಮ ಎದುರಿದ್ದ ಮೈಕ್‌ಗಳನ್ನು ಹಿಡಿದು ಪರಸ್ಪರ ಹಲ್ಲೆಯನ್ನೂ ನಡೆಸಿದರು. ಗಾಯವಾಗಿ ರಕ್ತವೂ ಬಂತು. ವಿಷಯ ವಿಕೋಪಕ್ಕೆ ಹೋಗುತ್ತಿದ್ದಂತೆ ಸಂಘಟಕರು ಇಬ್ಬರು ಅರ್ಥಧಾರಿಗಳನ್ನು ಪಕ್ಕಕ್ಕೆಳೆದು ನಿಲ್ಲಿಸಿದರು. ಭಾಗವತರು ಮಂಗಳ ಹಾಡಿದರು. ನಂತರ ವಿಷಯ ಪಡುಬಿದ್ರಿ ಠಾಣೆಗೂ ಹೋಗಿ, ಅಲ್ಲಿ ಪೊಲೀಸರು ಅರ್ಥದಾರಿಗಳನ್ನು ಸಂಘಟಕರನ್ನು ಕರೆಸಿ ಸೌಹಾರ್ದಯುತವಾಗಿ ಇತ್ಯರ್ಥ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.