ಯಾದಗಿರಿ(ಸೆ.24): ವೈದ್ಯರ ಎಡವಟ್ಟಿನಿಂದ ಆಗುವ ಅನಾಹುತಗಳು ಒಂದೆರಡಲ್ಲ. ವೈದ್ಯರು ಮಾಡುವ ಎಡವಟ್ಟುಗಳಿಂದ ರೋಗಿಗಳು ಪಡುವ ಪಾಡು ಹೇಳತೀರದು. ಇದೀಗ ಯಾದಗಿರಿಯಲ್ಲಿ ಸತ್ತಿರುವ ಮಗುವನ್ನೇ ಹೆಚ್ಚಿನ ಚಿಕಿತ್ಸೆಗೆ ರೆಫರ್ ಮಾಡಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಎಡವಟ್ಟು ಮಾಡಿದ್ದಾರೆ.

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಶ್ರೀನಿವಾಸಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತೊಂದು ಅವಾಂತರ ಮಾಡಿದ್ದಾರೆ. ಹುಟ್ಟಿದ್ದ ಅವಳಿ ಮಕ್ಕಳಲ್ಲಿ ಸತ್ತ ಮಗುವನ್ನೇ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ರೆಫರ್ ಮಾಡಿದ್ದಾರೆ. ಡಾಕ್ಟರ್ ಸತ್ತೋಗಿದೆ ಎಂದು ಹೇಳಿದ ಮಗುವಿನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡುತ್ತಿದ್ದಾಗ ಮಗು ಉಸಿರಾಡುತ್ತಿರುವುದು ತಿಳಿದುಬಂದಿದೆ. ಐನಾತಿ ವೈದ್ಯ ಡಾ. ಅವಿನಾಶ್ ರಾಠೋಡ್ ಮಾಡಿರೋ ಎಡವಟ್ಟಿನಿಂದ ಮಗುವಿನ ಪಾಲಕರು ದಂಗಾಗಿದ್ದಾರೆ.

ಉಸಿರಾಡುತ್ತಿದ್ದ ವೃದ್ಧನನ್ನು ಮೃತನೆಂದು ಘೋಷಿಸಿ ಪೋಸ್ಟ್ ಮಾರ್ಟಂಗೆ ಕಳುಹಿಸಿದ ವೈದ್ಯ!

ಶ್ರೀನಿವಾಸಪುರದ ಸಾಕಮ್ಮ ಕುಂಬಾರ ಎನ್ನುವ ಮಹಿಳೆ ಚೊಚ್ಚಲ ಹೆರಿಗೆಯಲ್ಲಿ ವೈದ್ಯನ ನಿರ್ಲಕ್ಷ್ಯಕ್ಕೆ ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ಬರದೆ ಡಾ. ಅವಿನಾಶ್ ಬೀಗ ಹಾಕಿದ್ದರಿಂದ ಗರ್ಭಿಣಿಯನ್ನು ಆಸ್ಪತ್ರೆ ದಾಖಲಿಸಲಾಗದೆ ಬೇರೆಡೆ ತೆರಳುವಾಗ ಹೆರಿಗೆಯಾತ್ತು. ಈಗ ಮತ್ತೊಮ್ಮೆ ವೈದ್ಯನ ಎಡುವಟ್ಟಿನಿಂದ ಹೆರಿಗೆ ನಂತರ ಮಹಿಳೆ ಪರದಾಟಕ್ಕೆ ಕಾರಣವಾಗಿದೆ. ನಿರ್ಲಕ್ಷ್ಯ ತೋರಿದ ವೈದ್ಯನ ಅಮಾನತು ಮಾಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವೈದ್ಯರ ಎಡವಟ್ಟು!: ಡಯಾಲಿಸಿಸ್ ಮಾಡಿಸಿಕೊಂಡವರಲ್ಲಿ HCV ವೈರಾಣು!