Asianet Suvarna News Asianet Suvarna News

ಕೊರೋನಾ ವೈರಸ್ ಕುರುಹು ಪತ್ತೆಗೆ ಎಕ್ಸರೇ ನೆರವು ಬಳಕೆ!

ರೋಗದ ಶಂಕೆ ಇದ್ದರೂ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಲು ಹಿಂದೇಟು ಹಾಕುವ ಅನೇಕರಿದ್ದಾರೆ. ಇದೀಗ ವೈರಸ್‌ನ ಕುರುಹು (ಲಕ್ಷಣ ಅಲ್ಲ) ಪತ್ತೆಮಾಡುವ ಸುಲಭದ ಎಕ್ಸರೇ ವಿಧಾನವನ್ನು ವೈರಸ್‌ ಪತ್ತೆ ಬಳಕೆಗೆ ನೆರವಿಗೆ ಬಳಸಲಾಗುತ್ತಿದೆ.

X rays technique to find covid19 in Mangalore
Author
Bangalore, First Published Jul 10, 2020, 8:24 AM IST

ಮಂಗಳೂರು(ಜು.10): ವ್ಯಾಪಕವಾಗಿ ಪ್ರಸಾರವಾಗಿರುವ ಕೊರೋನಾ ವೈರಸ್‌ ಪತ್ತೆಗೆ ರಾರ‍ಯಂಡಮ್‌ ತಪಾಸಣೆ ನಡೆಸುವುದು ಸುಲಭವಲ್ಲ. ಈ ಮಧ್ಯೆ ಕೊರೋನಾ ಸೋಂಕಿನ ಲಕ್ಷಣ ಕಾಣಿಸದೆ ಅನೇಕ ಮಂದಿಗೆ ಕೋವಿಡ್‌ ಬಂದು ಹೋದದ್ದೂ ಇದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.

ಇವೆಲ್ಲದರ ನಡುವೆ ರೋಗದ ಶಂಕೆ ಇದ್ದರೂ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಲು ಹಿಂದೇಟು ಹಾಕುವ ಅನೇಕರಿದ್ದಾರೆ. ಇದೀಗ, ವೈರಸ್‌ನ ಕುರುಹು (ಲಕ್ಷಣ ಅಲ್ಲ) ಪತ್ತೆಮಾಡುವ ಸುಲಭದ ಎಕ್ಸರೇ ವಿಧಾನವನ್ನು ವೈರಸ್‌ ಪತ್ತೆ ಬಳಕೆಗೆ ನೆರವಿಗೆ ಬಳಸಲಾಗುತ್ತಿದೆ.

ಕೊರೋನಾ ಸೋಂಕಿತೆಯ ಸಖತ್ ಟೈಗರ್ ಡ್ಯಾನ್ಸ್, ವಿಡಿಯೋ ವೈರಲ್

ಬೆಂಗಳೂರಿನ ಐಐಎಸ್‌ಸಿ ಸಹಕಾರದಲ್ಲಿ ನಿರಾಮಯಿ ಎಂಬ ಸರ್ಕಾರೇತರ ಸಂಸ್ಥೆ ದಾರಿ ಕಂಡುಕೊಂಡಿದೆ. ಕೇವಲ ಎಕ್ಸರೇ ಮೂಲಕ ವೈರಸ್‌ನ ಕುರುಹನ್ನು ಪತ್ತೆ ಮಾಡಿ ತಿಳಿಸುತ್ತದೆ. ಇದರಿಂದ ಮುಂದೆ ಸ್ವಾಬ್‌ ಟೆಸ್ಟ್‌ ಬಗ್ಗೆ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ. ಅಲ್ಲದೆ ಎಲ್ಲರನ್ನೂ ಸ್ವಾಬ್‌ ಟೆಸ್ಟ್‌ಗೆ ಒಳಪಡಿಸುವ ಅಗತ್ಯವಿರುವುದಿಲ್ಲ. ಎಕ್ಸರೇ ಮೂಲಕ ವೈರಸ್‌ನ ಕುರುಹು ಪತ್ತೆ ವಿಧಾನವನ್ನು ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲೂ ಬಳಸಲಾಗತ್ತಿದೆ. ಈ ವಿಧಾನದ ಮೂಲಕ ಇದುವರೆಗೆ 50ಕ್ಕೂ ಅಧಿಕ ವೈರಸ್‌ ಕುರುಹುಗಳನ್ನು ಪತ್ತೆ ಮಾಡಲಾಗಿದೆ.

ಏನು ಮಾಡಬೇಕು?

ಕೆಮ್ಮು, ದಮ್ಮು, ಜ್ವರದ ಲಕ್ಷಣ ಹೊಂದಿರುವವರು ವೈದ್ಯರ ಶಿಫಾರಸಿನ ಮೇರೆಗೆ ತಮ್ಮ ಮನೆ ಸಮೀಪದ ಪಾಲಿಕ್ಲಿನಿಕ್‌ಗೆ ತೆರಳಿ ಎದೆ ಭಾಗದ ಎಕ್ಸರೇ ತೆಗೆಸಿಕೊಂಡರೆ ಸಾಕು. ಅದನ್ನು ಪಾಲಿ ಕ್ಲಿನಿಕ್‌ನಿಂದಲೇ ನೇರವಾಗಿ ನಿರಾಯಯಿ ಸಂಸ್ಥೆ ರಚಿಸಿದ ಕೋವಿಡ್‌ ಶಿಫ್ಟ್‌ ಗ್ರೂಪ್‌ನ ವಾಟ್ಸಾಪ್‌ ಸಂಖ್ಯೆಗೆ ಕಳುಹಿಸಬೇಕು. ಆ ಗ್ರೂಪ್‌ನಲ್ಲಿ 150ಕ್ಕೂ ಅಧಿಕ ತಜ್ಞ ವೈದ್ಯರಿದ್ದಾರೆ. ಅಲ್ಲಿಂದ ತಜ್ಞರು ವೈರಸ್‌ನ ಕುರುಹು ಇದೆಯೇ ಎಂಬುದನ್ನು ಪರಿಶೀಲಿಸಿ ಮರಳಿ ಪಾಲಿ ಕ್ಲಿನಿಕ್‌ಗೆ ಮಾಹಿತಿ ನೀಡುತ್ತಾರೆ. ಹೆಚ್ಚಿನ ವೆಚ್ಚವಿಲ್ಲದೆ, ಕೇವಲ 150 ರು. ಆಸುಪಾಸಿನ ಎಕ್ಸರೇಯಲ್ಲಿ ವೈರಸ್‌ ಕುರುಹು ಪತ್ತೆ ಮಾಡಲು ಸಾಧ್ಯವಿದೆ. ಲಕ್ಷಣ ಕಂಡುಬಂದರೆ, ಮುಂದೆ ಸ್ವಾಬ್‌ ಪರೀಕ್ಷೆಗೆ ವೈದ್ಯರು ಸೂಚಿಸುತ್ತಾರೆ. ಇಲ್ಲಿ ಪೂರ್ತಿಯಾಗಿ ರೋಗಿಯ ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತದೆ.

ಆಸ್ಪತ್ರೆಯಲ್ಲಿ ಡ್ಯಾನ್ಸ್‌‌ ಮಾಡಿ ಮನೆಯವರಿಗೆ ಧೈರ್ಯ ತುಂಬಿದ ಸೋಂಕಿ​ತ!

ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ಅವರು ತಮ್ಮ ಕ್ಯಾಡ್‌ ವಾಟ್ಸಾಪ್‌ ಗ್ರೂಪನ್ನು(9743287599) ಕೋವಿಡ್‌ ಶಿಫ್ಟ್‌ ಗ್ರೂಪ್‌ಗೆ ಲಿಂಕ್‌ ಮಾಡಿದ್ದಾರೆ. ಇದಕ್ಕೆ ಎಕ್ಸರೇ ಕಳುಹಿಸಿ ವೈರಸ್‌ನ ಕ್ಲೂ ಪಡೆಯಲು ನೆರವಾಗುತ್ತಿದ್ದಾರೆ.

ಎಕ್ಸರೇ ಕ್ಲೂ-ಸರ್ಕಾರಕ್ಕೂ ಉಳಿತಾಯ

ಕೋವಿಡ್‌ ವೈರಸ್‌ ಕುರಿತು ಚೆಸ್ಟ್‌ ಎಕ್ಸರೇ ವಿಧಾನದಿಂದ ಕ್ಲೂ ಸಿಗುವುದು ಕೊರೋನಾ ಸೋಂಕು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಸರ್ಕಾರಕ್ಕೆ ವರದಾನವಾಗಲಿದೆ. ಎಕ್ಸರೇ ವಿಧಾನದಿಂದ ವೈರಸ್‌ ಕುರುಹು ಪತ್ತೆಯಾಗುವುದಿಂದ ಸಾಮೂಹಿಕವಾಗಿ ಎಲ್ಲರ ಸ್ವಾಬ್‌ ಟೆಸ್ಟ್‌ ನಡೆಸುವ ಅಗತ್ಯವಿರುವುದಿಲ್ಲ. ಯಾರಿಗೆ ಸೋಂಕಿನ ಕುರುಹು ಪತ್ತೆಯಾಗುತ್ತದೋ ಅವರಷ್ಟೆಸ್ವಾಬ್‌ ಟೆಸ್ಟ್‌ ಮಾಡಿಸಿದರೆ ಸಾಕಾಗುತ್ತದೆ. ಸರ್ಕಾರಿ ಲ್ಯಾಬ್‌ಗಳಲ್ಲಿ ಸ್ವಾಬ್‌ ಪರೀಕ್ಷೆ ಉಚಿತವಾದರೆ, ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ 2,500 ರು. ದರ ನಿಗದಿಪಡಿಸಿದೆ. ಎಕ್ಸರೇ ವಿಧಾನ ಅನುಸರಿಸಿದರೆ, ಅತ್ಯಂತ ಕಡಿಮೆಯಲ್ಲಿ ವೈರಸ್‌ ಕುರುಹು ತಿಳಿದುಕೊಳ್ಳಬಹುದು. ಅಲ್ಲದೆ ರಾರ‍ಯಂಡಮ್‌ ತಪಾಸಣೆಯ ಅಗತ್ಯವೂ ಬಾರದು.

ಕೋವಿಡ್‌ ರೋಗದ ಕುರುಹು ಕ್ಷಕಿರಣದಲ್ಲಿ ನೋಡಬಹುದೇ ವಿನಃ ಇದು ಗಂಟಲು ದ್ರವ ಪರೀಕ್ಷೆಗೆ ಸಮಾನವಲ್ಲ. ಆದರೆ ಸಂದಿಗ್ಧ ಪರಿಸ್ಥಿತಿಯಲ್ಲಿ ಚೆಸ್ಟ್‌ ಎಕ್ಸರೇ ವೈದ್ಯರಿಗೆ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕೆಎಂಸಿ ಆಸ್ಪತ್ರೆ ಮಂಗಳೂರು ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ತಿಳಿಸಿದ್ದಾರೆ.

ಐಐಎಸ್‌ಸಿ ನೆರವಿನಲ್ಲಿ ಕಂಪ್ಯೂಟರ್‌ ಮೂಲಕ ಕೃತಕ ಎಐ(ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌)ತಂತ್ರಜ್ಞಾನ ಮೂಲಕ ವೈರಸ್‌ ಯಾವುದು ಎಂಬುದರ ಕುರುಹು ಪತ್ತೆ ಮಾಡುತ್ತದೆ. ಸ್ಕೋರ್‌ ಆಧಾರದಲ್ಲಿ ಕುರುಹನ್ನು ಪರಿಗಣಿಸಲಾಗುತ್ತದೆ. ಗ್ರಾಮೀಣ ಭಾಗದ ಜನತೆಗೆ ಇದು ಹೆಚ್ಚು ಪ್ರಯೋಜನವಾಗಲಿದೆ. ಇತರರಿಗೆ ನೆರವಾಗಲು ಉಚಿತವಾಗಿ ಇದರ ಉಪಯೋಗ ನೀಡಲಾಗುತ್ತಿದೆ ಎಂದು ಸಂಸ್ಥಾಪಕಿ ಸಿಇಒ ನಿರಾಮಯಿ ಡಾ.ಗೀತಾ ಮಂಜುನಾಥ್‌ ತಿಳಿಸಿದ್ದಾರೆ.

-ಆತ್ಮಭೂಷಣ್

Follow Us:
Download App:
  • android
  • ios