ಮಂಗಳೂರು(ಜು.10): ಕೊರೋನಾ ಪಾಸಿಟಿವ್‌ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯರು ಕರಾವಳಿಯ ಹುಲಿ ವೇಷದ ಹಾಡಿಗೆ ಬಿಂದಾಸ್‌ ಆಗಿ ಹೆಜ್ಜೆ ಹಾಕುತ್ತಿರುವ ವೀಡಿಯೋ ತುಣುಕು ಮಂಗಳೂರು ಭಾಗದಲ್ಲಿ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ನಡೆದಿರುವುದು ಯಾವ ಆಸ್ಪತ್ರೆಯಲ್ಲಿ ಎಂಬ ಮಾಹಿತಿ ಖಚಿತವಾಗಿಲ್ಲ.

"

ಈ ವಾರ್ಡ್‌ನಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಗುಣಲಕ್ಷಣ ರಹಿತ ಕೋವಿಡ್‌ ಸೋಂಕಿತರು ಎನ್ನಲಾದ ಯುವತಿಯರು ಮಾಸ್ಕ್‌ ಧರಿಸಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೊದಲು ಕರಾವಳಿಯ ಹುಲಿ ವೇಷದ ಹಾಡಿಗೆ ಕುಣಿದಿದ್ದು, ನಂತರ ಸಿನಿಮಾ ಹಾಡುಗಳಿಗೆ ನರ್ತಿಸಿದ್ದಾರೆ.

ಆಸ್ಪತ್ರೆಯಲ್ಲಿ ಡ್ಯಾನ್ಸ್‌‌ ಮಾಡಿ ಮನೆಯವರಿಗೆ ಧೈರ್ಯ ತುಂಬಿದ ಸೋಂಕಿ​ತ!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಯುವತಿಯರ ಹೆಜ್ಜೆಯ ಅಬ್ಬರಕ್ಕೆ ಕೊರೋನಾ ಕೂಡ ಬೆಚ್ಚಿ ಬಿದ್ದು ಕಾಲ್ಕೀಳಬಹುದು ಎಂಬ ಕಾಮೆಂಟ್‌ ಜಾಲತಾಣಗಳಲ್ಲಿ ಕಾಣಿಸತೊಡಗಿದೆ.

ಉಡುಪಿಯ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವ್ಯಕ್ತಿಯೊಬ್ಬರು ಡಾ.ರಾಜ್‌ ಕುಮಾರ್‌ ಅವರ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋದ ಮೂಲಕ ಮನೆಯವರಿಗೆ ಕಳುಹಿಸಿ ತಾನು ಚೆನ್ನಾಗಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್‌ ವೈರಲ್‌ ಆಗಿತ್ತು.