ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿ ಮನೆಯವರಿಗೆ ಧೈರ್ಯ ತುಂಬಿದ ಸೋಂಕಿತ!
ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವ್ಯಕ್ತಿಯೊಬ್ಬರು ಡಾ.ರಾಜ್ ಕುಮಾರ್ ಅವರ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋದ ಮೂಲಕ ಮನೆಯವರಿಗೆ ಕಳುಹಿಸಿ ತಾನು ಚೆನ್ನಾಗಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ.
ಉಡುಪಿ(ಜು.08): ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವ್ಯಕ್ತಿಯೊಬ್ಬರು ಡಾ.ರಾಜ್ ಕುಮಾರ್ ಅವರ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋದ ಮೂಲಕ ಮನೆಯವರಿಗೆ ಕಳುಹಿಸಿ ತಾನು ಚೆನ್ನಾಗಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ.
ಕೋಟದ ಹೊಟೇಲೊಂದರ ಮಾಲೀಕರಿಗೆ ವಾರದ ಹಿಂದೆ ಸೋಂಕು ಪತ್ತೆಯಾಗಿತ್ತು. ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಿಂದ ಅವರ ಮನೆಯವರು ಆತಂಕಗೊಂಡಿದ್ದರು.
96ರ ಇಳಿ ವಯಸ್ಸಲ್ಲೂ ಕೊರೋನಾ ಗೆದ್ದು ಬಂದ್ರು ಅಜ್ಜಿ..! ಆತ್ಮಸ್ಥೈರ್ಯವೇ ಬಲ
ಇದನ್ನು ತಿಳಿದ ಅವರು ತಲೆಗೊಂದು ಮುಂಡಾಸು ಸುತ್ತಿ, ಪತ್ನಿಗೆ ವಿಡಿಯೋ ಕಾಲ್ ಮಾಡಿ ‘ರಾಜ್ಕುಮಾರ್ ಸಿನೆಮಾದ ನಾನಿರುವುದೇ ನಿಮಗಾಗಿ...’ ಎಂಬ ಹಾಡಿಗೆ ಸ್ಟೆಪ್ ಹಾಕಿ, ತಾನೂ ಖುಶಿ ಪಟ್ಟಿದ್ದಾರೆ, ಮನೆಯವರನ್ನೂ ಮನರಂಜಿಸಿದ್ದಾರೆ.ಈ ಮೂಲಕ ತಾನು ಆಸ್ಪತ್ರೆಯಲ್ಲಿ ಚೆನ್ನಾಗಿದ್ದೇನೆ, ಚಿಂತೆ ಮಾಡಬೇಡಿ ಎಂದು ಸಮಾಧಾನ ಹೇಳಿದ್ದಾರೆ.
ಮುರುಕಲು ಸೇತುವೇಲಿ ಉಕ್ಕಿ ಹರಿಯೋ ನದಿ ದಾಟಿದ ಆಶಾ ಕಾರ್ಯಕರ್ತೆ, ವಿಡಿಯೋ ನೋಡಿ
ಮಾತ್ರವಲ್ಲದೆ ಇನ್ನೊಂದು ವಿಡಿಯೋದಲ್ಲಿ ತನ್ನ ಬಗ್ಗೆ ಹೇಳಿಕೊಂಡಿದ್ದು, ಕೊರೋನಾಕ್ಕೆ ಹೆದರಬೇಕಾಗಿಲ್ಲ, ಅದೇನೂ ಮಾರಣಾಂತಿಕವೂ ಇಲ್ಲ, ಯಾವುದೇ ನೋವು ಅಗುವುದಿಲ್ಲ, ಆಸ್ಪತ್ರೆಯಲ್ಲಿ ಚೆನ್ನಾಗಿ ನೋಡಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಬಿಡುಗಡೆಯಾಗಿ ಬರುತ್ತೇವೆ ಎಂದು ಹೇಳಿದ್ದಾರೆ.