Dharwad: ವೇತನ ಪರಿಷ್ಕರಣೆಗೆ ಆಗ್ರಹಿಸಿ ಪ್ರತಿಭಟನೆ: 5ನೇ ದಿನಕ್ಕೆ ಕಾಲಿಟ್ಟ ಹೋರಾಟ

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಟಾಟಾ ಮಾರ್ಕೊಪೊಲೊ ಕ್ರಾಂತಿಕಾರಿ ಕಾರ್ಮಿಕ ಸಂಘದ ಸದಸ್ಯರ ಪ್ರತಿಭಟನೆ ಇದೀಗ 5ನೇ ದಿನಕ್ಕೆ ಕಾಲಿಟ್ಟಿದೆ. 

Workers protest demanding wage revision in dharwad gvd

ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ಏ.01): ವೇತನ ಪರಿಷ್ಕರಣೆಗೆ (Wage Revision) ಆಗ್ರಹಿಸಿ ಟಾಟಾ‌ ಮಾರ್ಕೋಪೊಲೊ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಟಾಟಾ ಮಾರ್ಕೊಪೊಲೊ ಕ್ರಾಂತಿಕಾರಿ ಕಾರ್ಮಿಕ ಸಂಘದ ಸದಸ್ಯರ ಪ್ರತಿಭಟನೆ (Protest) ಇದೀಗ 5ನೇ ದಿನಕ್ಕೆ ಕಾಲಿಟ್ಟಿದೆ. ಧಾರವಾಡ (Dharwad) ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ 5 ದಿನಗಳಿಂದ ಸತತ ಪ್ರತಿಭಟನೆ ನಡೆಸುತ್ತಿರುವ ಸಂಘದ ಸದಸ್ಯರು, ಹಳೆ ವೇತನ ಒಪ್ಪಂದ ಮುಗಿದು ಎರಡು ವರ್ಷ ಕಳೆದರೂ ಹೊಸ ವೇತನ ಪರಿಷ್ಕರಣೆ ಒಪ್ಪಂದಕ್ಕೆ ಕಂಪನಿ ಆಡಳಿತ ಮಂಡಳಿ ಸಹಿ ಹಾಕದೇ ಕಾರ್ಮಿಕರಿಗೆ ಅನ್ಯಾಯ ಎಸಗಿದೆ ಎಂದು ಆರೋಪಿಸಿದರು. 

ಈ ಕುರಿತು ಕಾರ್ಮಿಕ ಸಚಿವರ ಜೊತೆಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದ್ದರೂ, ಎಲ್ಲ ನಿರ್ಣಯಗಳನ್ನು ಕಂಪನಿ ಗಾಳಿ ತೂರಿದೆ ಎಂದು ಪ್ರತಿಭಟನಾನಿರತ ಕಾರ್ಮಿಕರು ಕಿಡಿಕಾರಿದರು. ಕಾರ್ಮಿಕರ ವೇತನ ಹೆಚ್ಚಿಸುವುದು, ವಿವಿಧ ಸೌಲಭ್ಯದ ಭತ್ಯೆಗಳನ್ನು ಎರಡು ಪಟ್ಟು ಹೆಚ್ಚಿಸುವುದು, ತಕ್ಷಣವೇ ಕಾರ್ಮಿಕ ವೇತನ ಒಪ್ಪಂದಕ್ಕೆ ಸಹಿ ಹಾಕಿ, ಜಾರಿಗೊಳಿಸುವುದು, ವಜಾಗೊಳಿಸಿದ ಏಳು ಕಾರ್ಮಿಕರನ್ನು ಕೋರ್ಟ್ ಆದೇಶದಂತೆ ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಈಡೇರಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.

ಗ್ಯಾಸ್ ಬೆಲೆ ಏರಿಕೆ: ಕಾಂಗ್ರೆಸ್ ಮುಖಂಡರ ಮನೆಯ ಮುಂಭಾಗದಲ್ಲಿ‌ ವಿನೂತನ ಪ್ರತಿಭಟನೆ!

ಇನ್ನು ಕಳೆದ ಐದು ದಿನಗಗಳಿಂದ ಕುಟುಂಬ ಸಮೇತ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದಾರೆ. ಇದೇ ವಿಚಾರಕ್ಕೆ‌ ಪ್ರತಿಭಟನೆ ಮಾಡಿ‌ ಎಚ್ಚರಿಸಿದರೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ಯಾವುದೇ ಒಬ್ಬ ಸಿಬ್ಬಂದಿ ಕೂಡಾ ಬಂದು ಪ್ರತಿಭಟನಾಕಾರರ ಮನವಿಯನ್ನು ಕೇಳುವ ಗೋಜಿಗೆ ಬಂದಿಲ್ಲ‌ ಎಂದು ಕಾರ್ಮಿಕರು ಮಾರ್ಕೋ ಪೋಲೊ ಆಡಳಿತ ಮಂಡಳಿ ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಮಾರ್ಕೋಪೋಲೋ ನೀತಿ ಖಂಡಿಸಿ ಪ್ರತಿಭಟನೆ: ಕಾರ್ಮಿಕರ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಟಾಟಾ ಮಾರ್ಕೊಪೋಲೊ ಕ್ರಾಂತಿಕಾರಿ ಕಾರ್ಮಿಕ ಸಂಘ, ಟಾಟಾ ಮಾರ್ಕೊಪೋಲೊ ಕಾರ್ಮಿಕ ಕುಟುಂಬ ಸದಸ್ಯರ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ಟಾಟಾ ಮಾರ್ಕೊಪೋಲೊ ಕಂಪನಿ ಕಾರ್ಮಿಕರಿಗೆ ನೀಡುತ್ತಿದ್ದ ಹಳೇ ವೇತನದ ಒಪ್ಪಂದ ಮುಗಿದು 21 ತಿಂಗಳಾಗಿದೆ. ಹೊಸ ವೇತನ ಒಪ್ಪಂದಕ್ಕೆ ಮನವಿ ಸಲ್ಲಿಸಿ ವರ್ಷವಾದರೂ ವೇತನ ಹೆಚ್ಚಿಸಿಲ್ಲ. 

ಈ ವಿಷಯವಾಗಿ ಹಲವು ಸುತ್ತಿನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿವೆ. ಆದಾಗ್ಯೂ ಟಾಟಾ ಆಡಳಿತ ವರ್ಗ ವೇತನ ಹೆಚ್ಚಳಕ್ಕೆ ಮುಂದಾಗಿಲ್ಲ ಎಂದು ದೂರಿದರು. ಕಂಪನಿ ಕಾರ್ಮಿಕರು ಕೋವಿಡ್‌ ಅವಧಿಯಲ್ಲೂ ಕೆಲಸ ನಿರ್ವಹಿಸಿದ್ದಾರೆ. ಕಂಪನಿ ಉತ್ಪಾದನೆ ಹೆಚ್ಚಿದ್ದರೂ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಯುನಿಯನ್‌ ಕಟ್ಟಿದ ಕಾರಣಕ್ಕೆ ವಜಾಗೊಳಿಸಿದ್ದ 7 ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಕೆಲಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಕಾಶ್ಮೀರದಲ್ಲಿ ಹಿಂದುಗಳ ಹತ್ಯೆ ಕುರಿತು ಅಪಹಾಸ್ಯ, ಕೇಜ್ರಿವಾಲ್ ಮನೆಯ ಮುಂದೆ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ!

ಈಗಾಗಲೇ ವೇತನ ಹೆಚ್ಚಳ ಸಾಕಷ್ಟುವಿಳಂಬವಾಗಿದ್ದು, ಕಾರ್ಮಿಕರ ನ್ಯಾಯಯುತ ಹಾಗೂ ಜೀವನ ಅಗತ್ಯ ವೇತನ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಮಿಕ ಸಂಘದೊಂದಿಗೆ ಒಪ್ಪಂದವನ್ನು ನೇರವಾದ ದ್ವಿಪಕ್ಷೀಯ ಹಂತದಲ್ಲೇ ಮಾಡಿಕೊಳ್ಳಲು ಕಂಪನಿಗೆ ನಿರ್ದೇಶನ ನೀಡಬೇಕು. ಇದಲ್ಲದೆ ಜಂಟಿ ಸಭೆ ಕರೆದು ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿ​ಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ರವಾನಿಸಿದರು. ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ ಅಧ್ಯಕ್ಷ ಆರ್‌. ಮಾನಸಯ್ಯ, ಮಲ್ಲಿಕಾರ್ಜುನ ಮರತಮ್ಮನವರ, ಸಿದ್ದನಗೌಡ ಪಾಟೀಲ, ಕೆ.ಬಿ. ಗೋನಾಳ, ಶಿವಯೋಗಿ ಹಾಲಭಾವಿ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios