ಕಾಶ್ಮೀರದಲ್ಲಿ ಹಿಂದುಗಳ ಹತ್ಯೆ ಕುರಿತು ಅಪಹಾಸ್ಯ, ಕೇಜ್ರಿವಾಲ್ ಮನೆಯ ಮುಂದೆ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ!

ಕಾಶ್ಮೀರ ಫೈಲ್ಸ್ ಚಿತ್ರದ ಕುರಿತಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ

ಹಿಂದುಗಳ ಹತ್ಯೆ ಕುರಿತು ದೆಹಲಿ ಮುಖ್ಯಮಂತ್ರಿ ಅಪಹಾಸ್ಯ

ಅರವಿಂದ್ ಕೇಜ್ರಿವಾಲ್ ಮನೆಯ ಮೇಲೆ ದಾಳಿ ಮಾಡಲಾಗಿದೆ ಎಂದ ಸಿಸೋಡಿಯಾ

BJP Yuva Morcha led by party MP Tejasvi Surya protests outside Delhi Chief Minister Arvind Kejriwal residence san

ನವದೆಹಲಿ (ಮಾ.30): ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ( Vivek Agnihotri) ಅವರ ದಿ ಕಾಶ್ಮೀರ್ ಫೈಲ್ಸ್ (The Kashmir Files) ಕುರಿತು ಗದ್ದಲದ ನಡುವೆ, ಪಕ್ಷದ ಸಂಸದ ತೇಜಸ್ವಿ ಸೂರ್ಯ (Tejasvi Surya) ನೇತೃತ್ವದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಮೋರ್ಚಾ (BJP Yuva Morcha) ಕಾರ್ಯಕರ್ತರು ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರ ನಿವಾಸದ ಮುಂದೆ ಚಿತ್ರದ ಕುರಿತು ಹೇಳಿಕೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ, ಕಾಶ್ಮೀರದಲ್ಲಿ  ಹಿಂದು ಹತ್ಯೆ ಕುರಿತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅಪಹಾಸ್ಯ ಮಾಡಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಮಾಡಿದೆ. ಈ ಕೂಡಲೇ ಕೇಜ್ರಿವಾಲ್ ಕ್ಷಮೆಯಾಚಿಸಬೇಕು. ಎಲ್ಲಿಯವರೆಗೂ ಕ್ಷಮೆ ಕೇಳುವುದಿಲ್ಲವೋ ಅಲ್ಲಿಯ ತನಕ ಯುವ ಮೋರ್ಚಾ ಪ್ರತಿಭಟಿಸಲಿದೆ ಎಂದು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಒಬ್ಬ ಮಹಾ ಸುಳ್ಳುಗಾರ. ಆತ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ. ಆಮ್ ಆದ್ಮಿ ಪಕ್ಷದ (Aam Aadmi Party) ಮಾತು ಯಾವಾಗಲು ಭಯೋತ್ಪಾದಕರ ಕಡೆ ಇರುತ್ತೆ. ಭಯೋತ್ಪಾದಕದ ಹತ್ಯೆಯಾದವರ ಬಗ್ಗೆ ಒಂದು ಮಾತೂ ಆಡುವುದಿಲ್ಲ. ಇದು ನಗರ ನಕ್ಸಲರ ತಂತ್ರಗಾರಿಕೆ. ಕೇಜ್ರಿವಾಲ್ ಅವರೇ ನಗರ ನಕ್ಸಲರು ಇದು ಕೇಜ್ರಿವಾಲ್ ಅವರ ಅಮಾನವೀಯ ಮನಸ್ಥಿತಿ ತೋರಿಸುತ್ತೆ ಎಂದು ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ, ದೆಹಲಿ ಮುಖ್ಯಮಂತ್ರಿ ನಿವಾಸದ ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತಾ ತಡೆಗಳನ್ನು ಮುರಿದು ದುಷ್ಕರ್ಮಿಗಳು ಕೇಜ್ರಿವಾಲ್ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ. "ಸಮಾಜ ವಿರೋಧಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತಾ ತಡೆಗಳನ್ನು ಮುರಿದಿದ್ದಾರೆ. ಗೇಟ್‌ನಲ್ಲಿರುವ ಬೂಮ್ ಬ್ಯಾರಿಯರ್ ಅನ್ನು ಸಹ ಒಡೆಯಲಾಗಿದೆ" ಅವರು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಸಿಎಂ ಕೇಜ್ರಿವಾಲ್ ಅವರ ಮನೆಯನ್ನು ಧ್ವಂಸ ಮಾಡಿದ “ಬಿಜೆಪಿ ಗೂಂಡಾಗಳಿಗೆ” ದೆಹಲಿ ಪೊಲೀಸರು ಸಹಾಯ ಮಾಡಿದ್ದಾರೆ ಎಂದು ಸಿಸೋಡಿಯಾ ಅವರು ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. "ಬಿಜೆಪಿ ಗೂಂಡಾಗಳು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮನೆ ಧ್ವಂಸ ಮಾಡುತ್ತಲೇ ಇದ್ದಾರೆ. ಅವರನ್ನು ತಡೆಯುವ ಬದಲು ಬಿಜೆಪಿ ಪೊಲೀಸರು ಅವರನ್ನು ಮನೆ ಬಾಗಿಲಿಗೆ ಕರೆತಂದರು" ಎಂದು ಅವರು ಟ್ವೀಟ್ ಮಾಡಿದ್ದಾರೆ.

ನಿಮಗೇನಾದ್ರೂ ಸಂವೇದನೆ ಇದ್ಯಾ.. ಲಿಕ್ಕರ್ ಲೈಸೆನ್ಸ್ ನವೀಕರಣ ಶುಲ್ಕದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕೋರ್ಟ್!

ಕಾಶ್ಮೀರ ಫೈಲ್ಸ್ ಚಿತ್ರವನ್ನು ಜೀ ಸ್ಟುಡಿಯೋಸ್ ನಿರ್ಮಿಸಿದ್ದು, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಹಿಂದು ಸಮುದಾಯದ ಜನರನ್ನು ವ್ಯವಸ್ಥಿತವಾಗಿ ಹತ್ಯೆಗೈದ ನಂತರ 1990 ರಲ್ಲಿ ಕಣಿವೆಯಿಂದ ಕಾಶ್ಮೀರಿ ಹಿಂದೂಗಳ ನಿರ್ಗಮನವನ್ನು ಇದು ಚಿತ್ರಿಸುತ್ತದೆ.

110 ದಿನದಲ್ಲಿ 6 ಸಾವಿರ ಕಿ.ಮೀ. ಓಡಿ ಗಿನ್ನೆಸ್ ದಾಖಲೆ ಬರೆದ ಸುಫಿಯಾ ಖಾನ್

ದೆಹಲಿ ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದ ಕೇಜ್ರಿವಾಲ್, ಈ ಹಿಂದೆ ಚಿತ್ರದ 'ಪ್ರಚಾರ'ಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅನೇಕ ರಾಜ್ಯಗಳು ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸುವುದರೊಂದಿಗೆ, ಕೇಜ್ರಿವಾಲ್ ಅವರ ನಿರ್ಧಾರವನ್ನೂ ಪ್ರಶ್ನಿಸಿದರು. ವಿವೇಕ್ ಅಗ್ನಿಹೋತ್ರಿಯವರಿಗೆ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ, ಎಲ್ಲರೂ ಉಚಿತವಾಗಿ ನೋಡಬಹುದು, ಸಿನಿಮಾವನ್ನು ತೆರಿಗೆ ಮುಕ್ತಗೊಳಿಸುವ ಅವಶ್ಯಕತೆ ಏನಿದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದರು.

Latest Videos
Follow Us:
Download App:
  • android
  • ios