ಬೆಂಗಳೂರು(ಮೇ 28): ಕೊರೋನಾ ವೈರಸ್ ತಡೆಗಟ್ಟಲು ಲಾಕ್‌ಡೌನ್ ಮಾಡಿದ ನಂತರ ಎಷ್ಟೋ ಜನರು ಉದ್ಯೋಗ ಕಳೆದುಕೊಂಡರು, ಇನ್ನೊಂದಷ್ಟು ಜನ ಮರಳಿ ಮಣ್ಣಿಗೆ ಎಂದು ಗಂಟು ಮೂಟೆ ಕಟ್ಟಿ ಹಳ್ಳಿ ಕಡೆ ಹೊರಟರು. ಕೆಲಸ ಕಳೆದುಕೊಂಡ ಮೇಲೆ ಸಿಲಿಕಾನ್‌ ಸಿಟಿಯಲ್ಲಿ ದಿನದೂಡುವುದೇ ದುಸ್ತರ. ಹಾಗಿರುವಾಗ ಇಬ್ಬರು ಯುವತಿಯರು ದಿಟ್ಟತನದಿಂದ ದುಡಿದು ಬದಕು ಕಟ್ಟಿಕೊಳ್ಳುತ್ತಿದ್ದಾರೆ.

ಒಬ್ಬಾಕೆ ಡಿಗ್ರಿ ಮುಗಿಸಿ ಇನ್ನೂ ಕೆಲಸ ಹುಡುಕುತ್ತಿದ್ದಾಕೆ. ಕೊರೋನಾ ವೈರಸ್ ಎಂಬ ಮಹಾಮಾರಿ ವಕ್ಕರಿಸಿಕೊಳ್ಳದಿರುತ್ತಿದ್ದರೆ ಇಷ್ಟೊತ್ತಿಗೆ ಪುಟ್ಟದೊಂದು ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಳೇನೋ.. ಆದರೆ ಹಾಗಾಗಲಿಲ್ಲ. ಕೆಲಸ ಸಿಗಲಿಲ್ಲ ಎಂದು ಬೇಸರಿಸದೆ ಉತ್ಸಾಹದಲ್ಲಿ ಸೊಪ್ಪು ಮಾರುವ ಕೆಲಸಕ್ಕೆ ಕೈ ಹಾಕಿದ್ದಾರೆ ಇಬ್ಬರು ಯುವತಿಯರು.

ಒಂದು ರುಪಾಯಿಗೆ ಇಡ್ಲಿ ನೀಡಿ ಹಸಿವು ನೀಗಿಸುವ ಸೆಲ್ವಮ್ಮ

ಬೆಳಗ್ಗೆ ಸುಮಾರು 2 ಗಂಟೆಯ ಹೊತ್ತಿಗೆ ಮಾರ್ಕೆಟ್‌ಗೆ ಹೋಗಿ ಸೊಪ್ಪು ಆರಿಸಿ ತಂದು ನಂತರ ವ್ಯವಸ್ಥಿತವಾಗಿ ಅದನ್ನು ಕಟ್ಟುಗಳನ್ನಾಗಿ  ಮಾಡಿ ತಳ್ಳುಗಾಡಿಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟು ರಸ್ತೆಗಳಲ್ಲಿ ಸೊಪ್ಪು ಮಾರುತ್ತಾ ಹೋಗುತ್ತಾರೆ.

ದಿನವಿಡೀ ಕೆಲಸ ಮಾಡಿದರೆ ವ್ಯಾಪಾರದಿಂದ ಹೆಚ್ಚು ಲಾಭವಾಗಿದ್ದರೂ, ನಷ್ಟವಂತೂ ಆಗಿಲ್ಲ ಎನ್ನುತ್ಥಾರೆ ಇವರು. ತಂದ ಅಷ್ಟೂ ಸೊಪ್ಪು ಮಾರಾಟವಾಗದಿದ್ದರೆ ಅದನ್ನು ಅಕ್ಕ ಪಕ್ಕದ ಮನೆಗಳಿಗೆ ಹಂಚುತ್ತಾರೆ.

ಜಗತ್ತಿನ ಮೊದಲ ಮಂಗಳಮುಖಿ ಯಾರು ನಿಮಗೆ ಗೊತ್ತಾ?

ಲಾಕ್‌ಡೌನ್‌ ಸಂದರ್ಭ ಎಲ್ಲರೂ ಕಷ್ಟದಲ್ಲಿರುವಾಗ ದಿಟ್ಟತನದಿಂದ ದುಡಿದು, ಅಕ್ಕಪಕ್ಕದವರಿಗೂ ನೆರವಾಗಿ ಮಹಾನಗರಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಯುವತಿಯರಿಗೆ ಹ್ಯಾಟ್ಸಾಫ್..!