ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರು ಕೂಲಿ ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿರುವಾಗ ಪಟ್ಟಣದ ಸೆಲ್ವಮ್ಮ ಅವರು ಒಂದು ರುಪಾಯಿಗೆ ಒಂದು ಇಡ್ಲಿ ನೀಡುವ ಮೂಲಕ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಅನ್ನಪೂರ್ಣೇಶ್ವರಿಯಾಗಿದ್ದಾರೆ.

ಬಂಗಾರಪೇಟೆ(ಮೇ 26): ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರು ಕೂಲಿ ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿರುವಾಗ ಪಟ್ಟಣದ ಸೆಲ್ವಮ್ಮ ಅವರು ಒಂದು ರುಪಾಯಿಗೆ ಒಂದು ಇಡ್ಲಿ ನೀಡುವ ಮೂಲಕ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಅನ್ನಪೂರ್ಣೇಶ್ವರಿಯಾಗಿದ್ದಾರೆ.

ಪಟ್ಟಣದ ಕಾರಹಳ್ಳಿ ವೃತ್ತದ ನೀರಿನ ಸಂಪ್‌ ಬಳಿ ಇರುವ ಬೇಕರಿ ರವಿಕುಮಾರ್‌ ಎಂಬುವರ ತಾಯಿ ಸೆಲ್ವಮ್ಮ. 80 ವರ್ಷದ ಇಳಿವಯಸ್ಸಿನ ಇವರು ನಿತ್ಯ ಇಡ್ಲಿ ಮಾಡಿ, ಬಡವರ ಹಾಗೂ ಹಸಿದವರ ಹೊಟ್ಟೆತುಂಬಿಸುತ್ತಿರುವುದು ಹೆಗ್ಗಳಿಕೆಯಾಗಿದೆ. ಇವರ ಸೇವೆ ಬರೀ ಲಾಕ್‌ಡೌನ್‌ ಸಂದರ್ಭದಲ್ಲಿ ಆರಂಭಿಸಿದ್ದಲ್ಲ. ಐದೂವರೆ ದಶಕದಿಂದ ಸತತವಾಗಿ ನಡೆಯುತ್ತಿದೆ. ಆರಂಭದಲ್ಲಿ ರುಪಾಯಿಗೆ ನಾಲ್ಕು ಇಡ್ಲಿ ನೀಡುತ್ತಿದ್ದ ಇವರು ತದನಂತರ ರುಪಾಯಿಗೆ ಎರಡು ಇಡ್ಲಿ ನೀಡುತ್ತಿದ್ದರು.

ಮೈಮುಲ್‌ ಅಕ್ರಮ ವಿರುದ್ಧ ಹೋರಾಟ ನಿಲ್ಲದು: ಸಾರಾ

ಈಗ ರುಪಾಯಿಗೆ 1 ಇಡ್ಲಿ ಕೊಡಲಾಗುತ್ತಿದೆ. 10 ರೂಪಾಯಿಗೆ ತೆಗೆದುಕೊಂಡರೆ ಹೆಚ್ಚುವರಿಯಾಗಿ ಮತ್ತೊಂದು ಇಡ್ಲಿ ಕೊಡುವುದು ಅವರ ರೂಢಿ. ನಿತ್ಯ 325 ಇಡ್ಲಿ ಮಾರಾಟ ಮಾಡುವರು. ಇವರಿಗೆ ಮಗ ರವಿಕುಮಾರ್‌, ಜ್ಞಾನಸುಂದರಿ ದಂಪತಿ ಇವರ ಸಹಕಾರಕ್ಕೆ ನಿಂತಿದ್ದಾರೆ.

ಮನೆಯಲ್ಲಿ ಬೆಳಗ್ಗೆ ಏಳು ಗಂಟೆಗೆ ಒಲೆಗೆ ಮರದ ಹೊಟ್ಟು ತುಂಬಿ ಇಡ್ಲಿ ಹಾಕಲು ಆರಂಭಿಸಿದರೆ 11 ಗಂಟೆಯವರೆಗೂ ಮುಂದುವರೆಯುತ್ತದೆ. ನಿತ್ಯ ನಾಲ್ಕು ಕೆ.ಜಿ ಕುಸುಬಲ ಅಕ್ಕಿ, ಉದ್ದಿನ ಬೇಳೆ, ಚಟ್ನಿಗೆ ಬೇಕಾದ ಅಗತ್ಯ ಸಾಮಗ್ರಿ ಕೊಂಡು ರುಬ್ಬಿ ಕೊಡುವ ಕೆಲಸವನ್ನು ಮಗ ರವಿಕುಮಾರ್‌ ಮಾಡುತ್ತಾರೆ.

ರಾಜ್ಯದಲ್ಲಿ ಕೊರೋನಾರಹಿತ ಏಕೈಕ ಜಿಲ್ಲೆ, ಸೋಷಿಯಲ್ ಮೀಡಿಯಾ ಸ್ಟೇಟಸ್‌ಗಳು ವೈರಲ್

ಅಜ್ಜಿಗೆ ಮಂಡಿ, ಕೈಕಾಲು ನೋವು ಇದೆ. ಆದರೆ ಅವರೊಬ್ಬರೇ ಇಡ್ಲಿ ಮಾಡಿ, ಪೊಟ್ಟಣ ಕಟ್ಟುತ್ತಾರೆ. ನಮ್ಮನ್ಯಾರನ್ನೂ ಅವಲಂಬಿಸುವುದಿಲ್ಲ ಎನ್ನುತ್ತಾರೆ ಮಗ ರವಿಕುಮಾರ್‌. ಇಡ್ಲಿ ಅಗ್ಗವಾದರೂ ಗುಣಮಟ್ಟಮತ್ತು ರುಚಿಯಲ್ಲಿ ರಾಜಿಯಿಲ್ಲ. ಹೋಟೆಲ್‌ನಲ್ಲಿ 10 ರು. ಕೊಟ್ಟು ಕೊಂಡುಕೊಳ್ಳುವ ಇಡ್ಲಿಗಿಂತ ಅಜ್ಜಿಯ ಇಡ್ಲಿ ರುಚಿಯಾಗಿರುತ್ತೆ ಎನ್ನುತ್ತಾರೆ ಮುನಿಯಮ್ಮ ಬಡಾವಣೆಯ ವಿ.ರೂಪ.

ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಒಂದೇ ವಾರದಲ್ಲಿ ಕೊರೋನಾ ಸ್ಫೋಟ..! ಏರುತ್ತಲೇ ಇದೆ ಸೋಂಕಿತರ ಸಂಖ್ಯೆ

ನನಗೆ ಇಡ್ಲಿ ಮಾರಾಟದಿಂದ ಪಡೆಯುವ ದುಡ್ಡು ಮುಖ್ಯವಲ್ಲ. ಯಾರೂ ಹಸಿವಿನಿಂದ ಬಳಲಬಾರದು ಎನ್ನುವುದು ನನ್ನ ಅಭಿಲಾಷೆ. ಎಲ್ಲರ ಹಸಿವು ನೀಗಿಸಲಾಗದಿದ್ದರೂ ನನ್ನಿಂದಾದಷ್ಟುಅಳಿಲು ಸೇವೆ ಮಾಡುತ್ತಿದ್ದೇನೆ. ನಿತ್ಯ ನಾವು ಎಷ್ಟುಸಂಪಾದನೆ ಮಾಡುತ್ತೇವೆ ಎನ್ನುವುದೇ ಮುಖ್ಯವಲ್ಲ. ಸಮಾಜಕ್ಕಾಗಿ ತನ್ನಿಂದಾದ ಸೇವೆ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದನ್ನು ಮರೆಯಬಾರದು ಎಂದು ಇಡ್ಲಿ ಮಾರಾಟ ಮಾಡುವ ಸೆಲ್ವಮ್ಮ ಹೇಳಿದ್ದಾರೆ.