ಮಹಾರಾಷ್ಟ್ರದ ನಾನಾ ಪ್ರದೇಶಗಳಿಂದ ಆಗಮಿಸಿದ್ದ ಜನರ ಜೊತೆಗೆ ತೆರಳಿದರೆ ನನಗೂ ಕೊರೋನಾ ತಗಲುವ ಸಾಧ್ಯತೆ ಇದೆ ಎನ್ನುವುದು ಮಹಿಳೆ ವಾದ| ಹೈದರಾಬಾದ್‌ನಲ್ಲಿ ನನಗೆ ತಪಾಸಣೆ ಮಾಡಲಾಗಿದ್ದು, ಕೈ ಮೇಲೆ ಸೀಲ್‌ ಹಾಕಿದ್ದಾರೆ| ಕ್ವಾರಂಟೈನ್‌ಗೆ ಒಳಪಡುತ್ತೇನೆ ಎಂದ ಮಹಿಳೆ| 

ವಿಜಯಪುರ(ಜೂ.06): ಮುಂಬೈ- ಗದಗ ರೈಲಿನಿಂದ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದ ಮಹಿಳೆ ತಾನು ಮಹಾರಾಷ್ಟ್ರದಿಂದ ಬಂದವರ ಜೊತೆಗೆ ಬಸ್ಸಿನಲ್ಲಿ ತೆರಳುವುದಿಲ್ಲ ಎಂದು ಪಟ್ಟು ಹಿಡಿದ ಘಾಟನೆ ನಗರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಷ್ಟ್ರದ ನಾನಾ ಪ್ರದೇಶಗಳಿಂದ ಆಗಮಿಸಿದ್ದ ಜನರ ಜೊತೆಗೆ ತೆರಳಿದರೆ ನನಗೂ ಕೊರೋನಾ ತಗಲುವ ಸಾಧ್ಯತೆ ಇದೆ ಎನ್ನುವುದು ಮಹಿಳೆ ವಾದವಾಗಿತ್ತು. ನಾನು ಹೈದರಾಬಾದ್‌ನಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಬಂದಿದ್ದೇನೆ. ನಂತರ ಸೊಲ್ಲಾಪುರದಿಂದ ಮುಂಬೈ-ಗದಗ ರೈಲಿನಿಂದ ವಿಜಯಪುರಕ್ಕೆ ಬಂದಿದ್ದೇನೆ. ಹೈದರಾಬಾದ್‌ನಲ್ಲಿ ತಪಾಸಣೆ ಮಾಡಲಾಗಿದ್ದು, ಕೈ ಮೇಲೆ ಸೀಲ್‌ ಹಾಕಿದ್ದಾರೆ. 

ವಿಜಯಪುರ: ಕ್ವಾರಂಟೈನ್‌ಗೆ ಒಪ್ಪದ ಯುವತಿ, ಅಧಿಕಾರಿಗಳ ಜೊತೆ ಕಿರಿಕ್‌

ನಾನು ಇಂಡಿಯ ಹೊರ್ತಿ ಗ್ರಾಮಕ್ಕೆ ಹೋಗಬೇಕಿದೆ. ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿ, ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಡುತ್ತೇನೆ ಎಂದು ಆ ಮಹಿಳೆ ತಿಳಿಸಿದ್ದಾರೆ. ಅಧಿಕಾರಿಗಳು ಸಮ್ಮತಿಸಿದ್ದು, ಖಾಸಗಿ ವಾಹನದಲ್ಲಿ ಮಕ್ಕಳ ಜೊತೆ ತೆರಳಲು ಅವಕಾಶ ನೀಡಿದ್ದಾರೆ.