Asianet Suvarna News Asianet Suvarna News

ವಿಜಯಪುರ: ಕ್ವಾರಂಟೈನ್‌ಗೆ ಒಪ್ಪದ ಯುವತಿ, ಅಧಿಕಾರಿಗಳ ಜೊತೆ ಕಿರಿಕ್‌

ಕ್ವಾರಂಟೈನ್‌ಗೆ ಹೋಗಲು ಮಹಿಳೆ ತಕರಾರು| ಮುಂಬೈ​​-ಗದಗ ರೈಲಿನಿಂದ ವಿಜಯಪುರಕ್ಕೆ ಬಂದಿಳಿದ ಯುವತಿ| ಲಾಕ್‌ಡೌನ್‌ ಸಂದರ್ಭದಲ್ಲಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಚಿಕ್ಕಪ್ಪನ ಮನೆಯಲ್ಲಿದ್ದ ಯುವತಿ|

Girl did Not Agree Institutional Quarantine in Vijayapura
Author
Bengaluru, First Published Jun 6, 2020, 10:40 AM IST

ವಿಜಯಪುರ(ಜೂ.06): ಮುಂಬೈ​​-ಗದಗ ರೈಲಿನಿಂದ ವಿಜಯಪುರಕ್ಕೆ ಬಂದಿಳಿದ ಯುವತಿ ಹಾಗೂ ಮಹಿಳೆಯೊಬ್ಬರು ಕ್ವಾರಂಟೈನ್‌ ಬೇಡ ಎಂದು ಅಧಿಕಾರಿಗಳ ಜೊತೆ ಕಿರಿಕ್‌ ಮಾಡಿದ ಪ್ರಸಂಗ ಶುಕ್ರವಾರ ನಗರದಲ್ಲಿ ನಡೆದಿದೆ. 

ಮಹಾರಾಷ್ಟ್ರದಿಂದ ರೈಲಿನಲ್ಲಿ ಆಗಮಿಸಿದ ಎಲ್ಲರಿಗೂ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತಿದೆ. ಆದರೆ ಯುವತಿಯೊಬ್ಬಳು ತಮ್ಮ ಚಿಕ್ಕಪ್ಪನೊಂದಿಗೆ ಮನೆಗೆ ತೆರಳುವವಳಿದ್ದರು. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಚಿಕ್ಕಪ್ಪನ ಮನೆಯಲ್ಲಿ ಈ ಯುವತಿ ಲಾಕ್‌ಡೌನ್‌ ವೇಳೆ ಉಳಿದುಕೊಂಡಿದ್ದರು. 

ವಿಜಯಪುರ: ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ

ಹೀಗಾಗಿ ಯುವತಿಯನ್ನು ಅಧಿಕಾರಿಗಳು ಕ್ವಾರಂಟೈನ್‌ ಮಾಡಲು ಮುಂದಾಗಿದ್ದಾರೆ. ಆಗ ಆಕೆಯ ಚಿಕ್ಕಪ್ಪ ಇದಕ್ಕೆ ತಕರಾರು ತೆಗೆದು, ನನ್ನ ಮಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವುದು ಬೇಡ. ಮನೆಯಲ್ಲಿಯೇ ಕ್ವಾರಂಟೈನ್‌ ಮಾಡಲಾಗುವುದು ಎಂದರು. ಕೊನೆಯಲ್ಲಿ ಅಧಿಕಾರಿಗಳ ಎಚ್ಚರಿಕೆಗೆ ಮಣಿದ ಯುವತಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಪ್ಪಿದ್ದಾಳೆ.

Follow Us:
Download App:
  • android
  • ios