"

ಮೈಸೂರು(ನ.23): ಉಪಚುನಾವಣೆ ಪ್ರಚಾರಕ್ಕೆ ತೆರಳಿದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮಹಿಳೆಯರು ತೀವ್ರ ತರಾಟೆಗೆ ತೆಗದೆಕೊಂಡಿದ್ದಾರೆ. ಮಹಿಳೆಯರ ಪ್ರಶ್ನೆಗೆ ಉತ್ತರಿಸಲಾಗದೆ ಪ್ರಜ್ವಲ್ ರೇವಣ್ಣ ಕಕ್ಕಾಬಿಕ್ಕಿಯಾಗಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮತದಾರರು ತರಾಟೆಗೆ ತೆಗೆದುಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಪ್ರತಿ ಬಾರಿ ವೋಟು ಕೇಳಲು ಬರುತ್ತೀರಿ. ಕೆಲಸ ಮಾಡಿಕೊಡುವವರು ದಿಕ್ಕಿಲ್ಲ ಎಂದು ಜೆಡಿಎಸ್ ಪ್ರಚಾರದ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಎದುರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪಚುನಾವಣೆ: ಬೀಗರ ಔತಣದ ನೆಪದಲ್ಲಿ 6 ಸಾವಿರ ಜನಕ್ಕೆ ಬಾಡೂಟ

ಹುಣಸೂರು ತಾಲೂಕಿನ ಅಬ್ಬೂರಿನಲ್ಲಿ ಘಟನೆ ನಡೆದಿದ್ದು, ರಸ್ತೆ ದುರಸ್ಥಿಗಾಗಿ ಮಹಿಳೆಯರು ಏರು ಧ್ವನಿಯಲ್ಲಿ ಒತ್ತಾಯಿಸಿದ್ಧಾರೆ. ಮಹಿಳೆಯರ ಸಿಟ್ಟು ಕಂಡು ಪ್ರಜ್ವಲ್ ರೇವಣ್ಣ ಕಕ್ಕಾಬಿಕ್ಕಿಯಾಗಿದ್ದು, ಪ್ರಚಾರ ವಾಹನದಿಂದ ಕೆಳಗಿಳಿದು ಬಂದು ಮಹಿಳೆಯರನ್ನು ಸಂಸದ ಸಮಾಧಾನ ಪಡಿಸಿದ್ದಾರೆ.

ಸಿದ್ದು ಗಡ್ಡ ಕೆರೆದುಕೊಂಡು ಒದ್ದಾಡ್ತಿದ್ದಾರೆ: ವಿ. ಸೋಮಣ್ಣ

ನಾಯಕ ಸಮುದಾಯದ ಪ್ರತಿ ಬಾರಿಯೂ ನಮಗೆ ವೋಟು ಕೊಟ್ಟಿದೆ. ನಮ್ಮ ತಂದೆ ಎಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗ 150 ಕೋಟಿ ರೂ.ಗಳನ್ನು ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ವಿಶ್ವನಾಥ್ ದುಡ್ಡು ಎತ್ತಿಕೊಂಡು ಓಡಿ ಹೋದರು..! ಮತ್ತೊಮ್ಮೆ ಜೆಡಿಎಸ್ ಗೆಲ್ಲಿಸಿ, ನಾನು ರೋಡ್ ರಿಪೇರಿ ಮಾಡಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಭರವಸೆ ಕೊಟ್ಟಿದ್ದಾರೆ.

ಹುಣಸೂರಲ್ಲಿ JDSಗೆ ಇನ್ನೊಂದು ಹಿನ್ನಡೆ, ಪ್ರಭಾವಿ ಮುಸ್ಲಿಂ ಮುಖಂಡ ಕಾಂಗ್ರೆಸ್‌ಗೆ