ಬೆಂಗಳೂರಿನಲ್ಲಿ ಬೈಕ್ ಟ್ಯಾಂಕ್ ಮೇಲೆ ಯುವ ಜೋಡಿಯೊಂದು ಅಪಾಯಕಾರಿಯಾಗಿ ಕುಳಿತುಕೊಂಡು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು (ಫೆ.27): ಸಾರ್ವಜನಿಕ ರಸ್ತೆಗಳಲ್ಲಿ ಪುಂಡರು ವೀಲಿಂಗ್‌ ಮಾಡುತ್ತಾ ಡ್ರೈವರ್‌ಗಳಿಗೆ ಸಮಸ್ಯೆ ಕೊಡುತ್ತಿದ್ದರು. ಇದರ ನಡುವೆ ಬೈಕ್‌ನ Fuel Tank ಮೇಲೆ ಹುಡುಗಿಯನ್ನು ಕೂರಿಸಿಕೊಂಡು ರೋಮ್ಯಾನ್ಸ್‌ ಮಾಡೋ ಟ್ರೆಂಡ್‌ ಕೂಡ ಜಾಸ್ತಿ ಆಗುತ್ತಿದೆ. ಸಾರ್ವಜನಿಕ ರಸ್ತೆಗಳಲ್ಲಿ ಸಾಹಸ ಮಾಡುವುದು ಸಾರ್ವಜನಿಕರಿಗೆ ಮತ್ತು ಚಾಲಕರಿಗೆ ಇಬ್ಬರಿಗೂ ಅಪಾಯಕಾರಿ. ಇತ್ತೀಚೆಗೆ, ದೇಶದ ವಿವಿಧ ಭಾಗಗಳಲ್ಲಿ ಯುವ ಜೋಡಿಗಳು ವೇಗವಾಗಿ ಚಲಿಸುವ ಬೈಕ್‌ಗಳಲ್ಲಿ ಸಾರ್ವಜನಿಕ ಪ್ರೀತಿಯ ಪ್ರದರ್ಶನಗಳಲ್ಲಿ (ಪಿಡಿಎ) ತೊಡಗಿರುವ ಪ್ರಕರಣಗಳು ಸಾಕಷ್ಟು ವರದಿಯಾಗಿದೆ. ಈಗ ಇದೇ ರೀತಿಯ ವಿಡಿಯೋ ಬೆಂಗಳೂರಿನ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ವರದಿಯಾಗಿದೆ. ತಮಿಳುನಾಡು ನಂಬರ್‌ ಪ್ಲೇಟ್‌ ಹೊಂದಿರುವ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನ ಇಂಧನ ಟ್ಯಾಂಕ್‌ನ ಮೇಲೆ ಮಹಿಳೆಯನ್ನು ವ್ಯಕ್ತಿಯೊಬ್ಬ ಕೂರಿಸಿಕೊಂಡಿದ್ದಾನೆ. ಇನ್ನು ಕೂತಿರುವ ಮಹಿಳೆ ಕೂಡ ಸುಮ್ಮನೆ ಇಲ್ಲ. ಹೆಲ್ಮೆಟ್‌ ಧರಿಸದೇ ಬೈಕ್‌ ರೈಡ್‌ ಮಾಡುತ್ತಿರುವ ರೈಡರ್‌ಅನ್ನು ತಬ್ಬಿಕೊಂಡು ಜಗತ್ತೇ ಮರೆತವರಂತೆ ವರ್ತಿಸಿದ್ದಾರೆ.

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ರಸ್ತೆ ಸುರಕ್ಷತೆ ಬಗ್ಗೆ ಆತಂಕ ಮನೆ ಮಾಡಿದೆ. ಬೆಂಗಳೂರು ಸಂಚಾರ ಪೊಲೀಸರಿಗೆ ಈ ವಿಡಿಯೋವನ್ನು ಟ್ಯಾಗ್‌ ಮಾಡಿದ್ದರೂ, ಇಲ್ಲಿಯವರೆಗೂ ಲವ್‌ ಬರ್ಡ್ಸ್‌ ಸಿಕ್ಕಂತೆ ಕಾಣತ್ತಿಲ್ಲ. ಹೆಲ್ಮೆಟ್‌ ಇಲ್ಲದ ರೈಡರ್‌ ಬ್ಯುಸಿಯಾಗಿರುವ ರಸ್ತೆಯಲ್ಲಿ ಬೈಕ್‌ ಓಡಿಸಿಕೊಂಡು ಹೋಗುತ್ತಿದ್ದರೆಮ ರೈಡರ್‌ಗೆ ಮುಖ ಮಾಡಿಕೊಂಡು ಮಹಿಳೆ ಇಂಧನ ಟ್ಯಾಂಕ್‌ನ ಮೇಲೆ ಕುಳಿತಿದ್ದಾಳೆ. ಇಂಥ ವರ್ತನೆಗಳ ಬಗ್ಗೆ ಟ್ರಾಫಿಕ್‌ ಪೊಲೀಸರು ಸಾಲು ಸಾಲು ಎಚ್ಚರಿಕೆಗಳನ್ನು ನೀಡುತ್ತಿದ್ದರೂ, ಅದ್ಯಾವುದಕ್ಕೂ ಇಂಥ ಜನರು ತಲೆಕೆಡಿಸಿಕೊಂಡಿಲ್ಲ.

ಈ ವಿಡಿಯೋ ವೈರಲ್ ಆಗಿದ್ದು, ಹಲವರು ಇವರಿಬ್ಬರ ಬೇಜವಾಬ್ದಾರಿ ಮತ್ತು ಅಶ್ಲೀಲ ವರ್ತನೆಗಾಗಿ ಟೀಕಿಸಿದ್ದಾರೆ. ಅನೇಕ ಬಳಕೆದಾರರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಗರದ ಸಂಚಾರ ಪೊಲೀಸರಿಗೆ ಟ್ಯಾಗ್‌ ಕೂಡ ಮಾಡಿದ್ದು, ರಸ್ತೆ ಸುರಕ್ಷತಾ ನಿಯಮಗಳನ್ನು ಸ್ಪಷ್ಟವಾಗಿ ನಿರ್ಲಕ್ಷಿಸಿದ್ದಕ್ಕಾಗಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

"ಇದು ಶುದ್ಧ ನಾಚಿಕೆಯಿಲ್ಲದ ವರ್ತನೆ, ಇಬ್ಬರನ್ನೂ ಒಟ್ಟಿಗೆ ಜೈಲಿಗೆ ಕಳುಹಿಸಬೇಕು ಮತ್ತು ಅಲ್ಲಿ ಪ್ರೀತಿಯಲ್ಲಿ ಬೀಳಲು ಬಿಡಬೇಕು' ಎಂದು ಬರೆದಿದ್ದಾರೆ.. "ವ್ಯಕ್ತಿಗಳು ಹಿಂದೆ ಬರುವ ವಾಹನಗಳನ್ನು ವೀಕ್ಷಿಸಲು ರಿಯರ್‌ವ್ಯೂ ಕನ್ನಡಿಗಳನ್ನು ಸ್ಥಾಪಿಸುತ್ತಾರೆ, ಆದರೆ ಈ ವ್ಯಕ್ತಿ ತನ್ನ ಹುಡುಗಿಯನ್ನು ಆರಿಸಿಕೊಂಡಿದ್ದಾನೆ' ಎಂದು ತಮಾಷೆ ಮಾಡಿದ್ದಾರೆ.

ಹೇ ಪ್ರಭು ಏನಿದು? ಒಂದು ಆಟೋದಲ್ಲಿ 19 ಮಂದಿ, ವಿಡಿಯೋ ನೋಡಿ ಪೊಲೀಸರೇ ಶಾಕ್

ಅಧಿಕಾರಿಗಳು ಮೊದಲು ಈ ಬೈಕ್‌ ಅನ್ನು ಟ್ರೇಸ್‌ ಮಾಡಬೇಕು. TN12W4910 ನಂಬರ್‌ ಪ್ಲೇಟ್‌ ಇದು ಹೊಂದಿದ್ದು, ಕಠಿಣ ಕ್ರಮ ಕೈಗೊಳ್ಳಬೇಕು. ಇಂಥ ರೈಡಿಂಗ್‌ಅನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು ಎಂದು ಬರೆದಿದ್ದಾರೆ.

ಟಿಆರ್‌ಪಿಗಾಗಿ ಸುಧೀರ್‌ರನ್ನು ಬಳಸಿಕೊಳ್ಳುತ್ತಿದ್ದಾರೆ: ಆ್ಯಂಕರ್ ರಶ್ಮಿ ಗೌತಮ್‌ಗೆ ಛೀಮಾರಿ ಹಾಕಿದ ನೆಟ್ಟಿಗರು!

Scroll to load tweet…