ಇದು ಬಸ್ಸೋ ಅಥವಾ ಅಟೋನಾ? ಒಂದಲ್ಲ ಎರಡಲ್ಲ, ಬರೋಬ್ಬರಿ 19 ಮಂದಿ ಒಂದು ಆಟೋದಲ್ಲಿ ಪ್ರಯಾಣಿಸಿದ್ದಾರೆ. ಆಟೋ ನಿಲ್ಲಿಸಿದಾಗ 19 ಮಂದಿ ಇಳಿಯುತ್ತಿರುವ ವಿಡಿಯೋ ನೋಡಿ ಪೊಲೀಸರೇ ದಂಗಾಗಿದ್ದರೆ.
ಝಾನ್ಸಿ(ಫೆ.18) ಭಾರತದಲ್ಲಿ ಯಾವುದೇ ಭಾಗದಲ್ಲೂ ಆಟೋ ರಿಕ್ಷಾ ಹತ್ತಿರದ ಪ್ರಯಾಣಕ್ಕೆ ಸುಲಭ ಸಾರಿಗೆ. ಆದರೆ ಆಟೋದಲ್ಲಿ ಪ್ರಯಾಣ ಮಾಡುವಾಗ ಇಂತಿಷ್ಟೆ ಜನರು ಪ್ರಯಾಣ ಮಾಡಬೇಕು ಅನ್ನೋ ನಿಯಮವಿದೆ. ಗರಿಷ್ಠ 3 ಪ್ರಯಾಣಿಕರು ಆಟೋದಲ್ಲಿ ನಿಯಮದ ಪ್ರಕಾರ ಪ್ರಯಾಣ ಮಾಡಬಹುದು. ಇದು ಸುರಕ್ಷತೆ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆಯಲ್ಲಿ ನಿಯಮ ತರಲಾಗಿದೆ. ಹಲವು ಬಾರಿ ಅನಿವಾರ್ಯತೆ, ಸಾರಿಗೆ ಸೌಕರ್ಯವಿಲ್ಲದ ಕಡೆ 4, 5, 6 ಮಂದಿ ಪ್ರಯಾಣಿಸದ ಉದಾಹರಣೆಯೂ ಇದೆ. ಆದರೆ ಆಟೋ ಚಾಲಕ ಸೇರಿ 19 ಮಂದಿ ಪ್ರಯಾಣಿಸದ ಉದಾಹರಣೆ ಎಲ್ಲೂ ಇಲ್ಲ. ಕಾರಣ 19 ಮಂದಿ ಪ್ರಯಾಣಿಸಲು ಟಿಟಿ ಸಾಕಾಗಲ್ಲ, ಮಿನಿ ಬಸ್ ಬೇಕೆ ಬೇಕು. ಆದರೆ ಇಲ್ಲೊಬ್ಬ ಆಟೋ ಚಾಲಕ 18 ಮಂದಿ ಪ್ರಯಾಣಿಕ ಹಾಗೂ ತಾನು ಸೇರಿ ಒಟ್ಟು 19 ಮಂದಿ ಪ್ರಯಾಣಿಸಿ ದಾಖಲೆ ಬರೆದಿದ್ದಾರೆ. ಈ ವಿಡಿಯೋ ನೋಡಿದ ಪೊಲೀಸರು ದಂಗಾದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಝಾನ್ಸಿಯ ಆಟೋ ಚಾಲಕ 18 ಮಂದಿ ಪ್ರಯಾಣಿಕರನ್ನು ತುಂಬಿಸಿಕೊಂಡು ಆಟೋದಲ್ಲಿ ಪ್ರಯಾಣ ಮಾಡಿದ್ದಾನೆ. 18 ಪ್ರಯಾಣಿಕರನ್ನು ಅವರು ನಿಗದಿತ ಸ್ಥಳಕ್ಕೆ ಕೊಂಡೊಯ್ಯುತ್ತಿರುವಾಗ ಬರೌಸಾಗರ್ ಪೊಲೀಸ್ ಠಾಣೆ ವ್ಯಾಪ್ತಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಈ ವೇಳೆ ಈ ಆಟೋ ನೋಡಿ ದಂಗಾಗಿದ್ದಾರೆ. ಕಾರಣ ಆರಂಭದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಂದಿ ಆಟೋದಲ್ಲಿದ್ದಾರೆ ಅನ್ನೋ ಕಾರಣಕ್ಕೆ ಪೊಲೀಸರು ಅಟೋ ತಡೆದಿದ್ದಾರೆ.
ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದ ಆಟೋ ರಿಕ್ಷಾ, ಬಸ್‌ಗೆ ಪ್ರತಿ ದಿನ 50 ರೂ ದಂಡ, ಹೊಸ ನಿಯಮ!
ಬಳಿಕ ಅನುಮತಿಗಿಂತ ಹೆಚ್ಚು ಜನರನ್ನು ಆಟೋದಲ್ಲಿ ಪ್ರಯಾಣಿಸುವಂತಿಲ್ಲ ಎಂದು ಪ್ರಯಾಣಿಕರನ್ನು ಇಳಿಯಲು ಸೂಚಿಸಿದ್ದಾರೆ. ಈ ವೇಳೆ ಒಂದಲ್ಲ, ಎರಡಲ್ಲ, ಮೂರಲ್ಲ, ಈ ಸಂಖ್ಯೆ ಸಾಗುತ್ತಲೇ ಹೋಗಿದೆ. ಕೊನೆಗೆ ಚಾಲಕ ಇಳಿದಾಗ ಆಟೋದಲ್ಲಿ ಪ್ರಯಾಣಿಸದವರ ಒಟ್ಟು ಸಂಖ್ಯೆ ಬರೋಬ್ಬರಿ 19. ಆಟೋ ಚಾಲಕ ಹಾಗೂ ಎಲ್ಲಾ ಪ್ರಯಾಣಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಆಟೋ ಜಪ್ತಿ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಭಾರತದಲ್ಲಿ ಆಟೋ ಚಾಲಕನ ಸಾಮರ್ಥ್ಯ ಬಸ್‌ಗಿಂತ ಹೆಚ್ಚು. 19 ಮಂದಿಯನ್ನು ಒಂದು ಆಟೋದಲ್ಲಿ ಕೂರಿಸಿ ಹೇಗೆ ಚಾಲನೆ ಮಾಡಿದ್ದಾನೆ. ಕಾರಿನಲ್ಲಿ ಎರಡು ಲಗೇಟ್ ಇಟ್ಟರೆ ಹಿಂಬದಿ ಸೀಟು ಭರ್ತಿಯಾಗುತ್ತೆ. ಈತ ಸ್ಥಳ ಮ್ಯಾನೇಜ್ಮೆಂಟ್ ಮಾಡಲು ಸೂಕ್ತ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈತನಿಗೆ ಸೂಟ್‌ಕೇಸ್ ಕೊಟ್ಟರೆ 10 ಮಂದಿಯನ್ನು ಒಳಗೆ ಹಾಕುತ್ತಾನೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಆಟೋದಲ್ಲಿ 19 ಮಂದಿ ಹೇಗೆ ಸಾಧ್ಯ? ಈತ ಆಟೋ ಚಾಲಕ ಅಲ್ಲ, ಮ್ಯಾಜಿಕ್ ಚಾಲಕ ಎಂದಿದ್ದಾರೆ.
ಕರ್ನಾಟಕದಲ್ಲಿದ್ದು ಅಹಂಕಾರ ಬೇಡ ಕನ್ನಡ ಕಲಿ; ಚರ್ಚೆಗೆ ಗ್ರಾಸವಾದ ಆಟೋ ರಿಕ್ಷಾ ಬರಹ!
