ಚಾಮರಾಜನಗರ(ಜೂ.18): 5 ದಿನದ ಹಸುಗೂಸನ್ನು ಯುವತಿಯೊಬ್ಬಳು ಕದ್ದೊಯ್ದಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಸಂಜೆ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಮುತ್ತುರಾಜಮ್ಮ(28) ಅವರು ಮಗು ಕಳೆದುಕೊಂಡಿರುವ ತಾಯಿ.

ಶನಿವಾರದಂದು ಮುತ್ತುರಾಜಮ್ಮ ಅವರಿಗೆ ಮಗು ಹುಟ್ಟಿದ್ದು, ತಾಯಿ ಹಾಗೂ ಮಗುವನ್ನು ಐಸಿಯು ವಾರ್ಡ್‌ನಲ್ಲಿರಿಸಲಾಗಿತ್ತು. ವಾರ್ಡ್‌ಗೆ ಬಂದ ಅಪರಿಚಿತ ಯುವತಿ ಮುತ್ತು ರಾಜಮ್ಮ ಅವರನ್ನು ಪರಿಚಯ ಮಾಡಿಕೊಂಡು ಮಗು ಆರೋಗ್ಯ ವಿಚಾರಿಸಿದ್ದಾಳೆ.

ಮಂಗಳೂರು ಗೋಲಿಬಾರ್‌: ನಾಲ್ಕು ಚಾರ್ಜ್‌ಶೀಟ್ ಸಲ್ಲಿಕೆ

ಈ ಸಂದರ್ಭದಲ್ಲಿ ಮಗುವಿಗೆ ಭೇದಿಯಾಗುತ್ತಿರುವುದನ್ನು ತಿಳಿದು ಬೇಗ ಓಪಿಡಿಯಲ್ಲಿನ ವೈದ್ಯರಿಗೆ ತೋರಿಸಿ ಕೆಲವು ದಿನಗಳ ಹಿಂದಷ್ಟೆ ಮಗುವೊಂದು ಭೇದಿಯಿಂದ ತೀರಿಕೊಂಡಿದೆ ಎಂದು ಹೆದರಿಸಿದ್ದಾಳೆ. ವೈದ್ಯರನ್ನು ನೋಡಿಕೊಂಡು ಬಾ ಮಗುವನ್ನು ನೋಡಿಕೊಳ್ಳುತ್ತಿರುತ್ತೇನೆ ಎಂದಿದ್ದಾಳೆ.

ವೈದ್ಯರನ್ನು ನೋಡಿ ವಾಪಸ್‌ ಬರುವಷ್ಟರಲ್ಲಿ ಯುವತಿ ಮಗುವಿನ ಜೊತೆ ಪರಾರಿಯಾಗಿದ್ದಾಳೆ. ಪೊಲೀಸರು, ಆಸ್ಪತ್ರೆ ಸಿಬ್ಬಂದಿ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದು ಅಪರಿಚಿತ ಯುವತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.