Asianet Suvarna News Asianet Suvarna News

ಮಂಗಳೂರು ಗೋಲಿಬಾರ್‌: ನಾಲ್ಕು ಚಾರ್ಜ್‌ಶೀಟ್ ಸಲ್ಲಿಕೆ

ರಾಜ್ಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾದ ಮಂಗಳೂರು ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಚಾಜ್‌ರ್‍ ಶೀಟ್‌ಗಳನ್ನು ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.

Mangalore golibar 4 charge sheet submitted
Author
Bangalore, First Published Jun 18, 2020, 9:01 AM IST

ಮಂಗಳೂರು(ಜೂ.18): ರಾಜ್ಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾದ ಮಂಗಳೂರು ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಚಾಜ್‌ರ್‍ ಶೀಟ್‌ಗಳನ್ನು ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.

ಗೋಲಿಬಾರ್‌ಗೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರಕರಣ, ದಕ್ಷಿಣ ಠಾಣೆಯಲ್ಲಿ 13 ಪ್ರಕರಣ ದಾಖಲಾಗಿತ್ತು. ಮುಖ್ಯ ಪ್ರಕರಣ ಸೇರಿದಂತೆ ಮೂರು ಪ್ರಕರಣಗಳನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಇವುಗಳಲ್ಲಿ ಒಂದು ಪ್ರಕರಣದ ಚಾಜ್‌ರ್‍ ಶೀಟ್‌ನ್ನು ಸಿಐಡಿಯು ನ್ಯಾಯಾಲಯಕ್ಕೆ ಮಾಚ್‌ರ್‍ ತಿಂಗಳಲ್ಲೇ ಸಲ್ಲಿಕೆ ಮಾಡಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ 2 ಪ್ರಕರಣಗಳ ಚಾಜ್‌ರ್‍ಶೀಟ್‌ ಸಲ್ಲಿಕೆ ಬಾಕಿಯಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ನಾಲ್ಕೈದು ದಿನ ಭಾರೀ ಮಳೆ ಮುನ್ಸೂಚನೆ

ಒಟ್ಟು 600ಕ್ಕೂ ಅಧಿಕ ಪುಟಗಳ ಚಾಜ್‌ರ್‍ಶೀಟ್‌ ಇದಾಗಿದ್ದು, ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಣೆ ಮಾಡಿದ್ದಾರೆ. ಉಳಿದಂತೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ದಾಖಲಾಗಿದ್ದ 13 ಪ್ರಕರಣಗಳ ಪೈಕಿ ಮೂರು ಪ್ರಕರಣಗಳ ಕುರಿತ ಚಾಜ್‌ರ್‍ ಶೀಟ್‌ನ್ನು 10 ದಿನಗಳ ಹಿಂದಷ್ಟೆನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಉಳಿದೆಲ್ಲ ಪ್ರಕರಣಗಳ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಕೆಲವು ವಾರದೊಳಗೆ ಚಾಜ್‌ರ್‍ಶೀಟ್‌ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಮ್ಯಾಜಿಸ್ಟೀರಿಯಲ್‌ ತನಿಖೆಯ ಪೂರ್ಣ ವರದಿ ಸಲ್ಲಿಕೆ ಇನ್ನಷ್ಟೇ ಆಗಬೇಕಿದೆ. ಬಂದರು ಠಾಣಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್‌ ಗೋವಿಂದರಾಜು, ಪಾಂಡೇಶ್ವರ ಠಾಣಾ ವ್ಯಾಪ್ತಿಯ ಪ್ರಕರಣಗಳಿಗೆ ಇನ್‌ಸ್ಪೆಕ್ಟರ್‌ ಲೋಕೇಶ್‌ ಎ.ಸಿ. ತನಿಖಾಧಿಕಾರಿಯಾಗಿದ್ದರೆ, ಸಿಐಡಿ ಎಸ್ಪಿ ರಾಹುಲ್‌ ಕುಮಾರ್‌ ಸಿಐಡಿ ತಂಡದ ತನಿಖಾಧಿಕಾರಿಯಾಗಿದ್ದರು.

14 ಕಲ್ಲಿನ ಕೋರೆಗಳಿಗೆ ಲೋಕಾಯುಕ್ತ ದಾಳಿ

ಮಂಗಳೂರಿನಲ್ಲಿ 2019ರ ಡಿ.19ರಂದು ನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟು, 9ಕ್ಕೂ ಹೆಚ್ಚು ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದರು. ಅಲ್ಲದೆ, ಲಾಠಿಚಾಜ್‌ರ್‍ನಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಸಂಘಟನೆಯೊಂದು ನಗರದ ನೆಹರೂ ಮೈದಾನದಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿತ್ತು. ಆದರೆ ಅದರ ಹಿಂದಿನ ದಿನವೇ ರಾತ್ರಿ 9 ಗಂಟೆಯಿಂದ ಎರಡು ದಿನಗಳವರೆಗೆ 144 ಸೆಕ್ಷನ್‌ನ್ನು ನಗರದಾದ್ಯಂತ ವಿಧಿಸಲಾಗಿತ್ತು. ಇದರ ಹೊರತಾಗಿಯೂ ಮರುದಿನ (ಡಿ.19) ನಗರದ ಸ್ಟೇಟ್‌ ಬ್ಯಾಂಕ್‌ ಬಳಿ ಗುಂಪು ಜಮಾಯಿಸಿದ್ದು, ಇದನ್ನು ಚದುರಿಸಲು ಪೊಲೀಸರು ಕಾರ್ಯಾ

ಚರಣೆ ನಡೆಸಿದ್ದರು. ಇದು ಲಾಠಿಜಾಜ್‌ರ್‍, ಅಶ್ರುವಾಯು, ರಬ್ಬರ್‌ಗುಂಡು, ಗಾಳಿಯಲ್ಲಿ ಗುಂಡು ಹಾರಾಟಕ್ಕೆ ತಿರುಗಿತು. ಸಂಜೆಯಾಗುತ್ತಿದ್ದಂತೆ ಬಂದರು ಪ್ರದೇಶದಲ್ಲಿ ನಡೆದ ಗೋಲಿಬಾರ್‌ನಲ್ಲಿ ಕಂದಕ್‌ ನಿವಾಸಿ ಅಬ್ದುಲ್‌ ಜಲೀಲ್‌ (42), ಕುದ್ರೋಳಿ ನಿವಾಸಿ ನೌಶಿನ್‌ (25) ಎಂಬವರು ಮೃತಪಟ್ಟಿದ್ದರು.

Follow Us:
Download App:
  • android
  • ios