ತುರುವೇಕೆರೆ (ಡಿ.07):  ತಾಲೂಕಿನ ಕಡೇಹಳ್ಳಿ ಗ್ರಾಮದ ಮಹಿಳೆಯ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಆರೋಪಿಯನ್ನು ಹಿಂಡುಮಾರನಹಳ್ಳಿಯ ಧೀಮಂತ್‌(27) ಎಂದು ಹೇಳಲಾಗಿದೆ.

 ಆರೋಪಿ ಧೀಮಂತ್‌ ಮಹಿಳೆಯ ಕುಟುಂಬಕ್ಕೆ ಪರಿಚಯಸ್ಥ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಧೀಮಂತ್‌ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ನಡೆಸಿದ್ದಾನೆ. 

ಕ್ಲಾಸ್‌ ರೂಂನಲ್ಲೇ ವಿದ್ಯಾರ್ಥಿಗಳ ಮದ್ವೆ; ಆಮೇಲೆ ಆಗಿದ್ದೇನು? ಬೇಕಿತ್ತಾ ಇವೆಲ್ಲಾ? .

ಆಗ ಮಹಿಳೆ ಪ್ರತಿರೋಧ ಒಡ್ಡಿದಾಗ ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ. ಮಹಿಳೆಯ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ಧೀಮಂತ್‌ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.