ರಾಜ್ಯದಲ್ಲಿ ಮಳೆಗಾಗಿ ಜನ ಪೂಜೆ, ಪ್ರಾರ್ಥನೆ ಮಾಡುತ್ತಿದ್ದು, ಇಲ್ಲೊಬ್ಬ ಮಹಿಳೆ 3 ದಿನದಲ್ಲಿ ಬರೋಬ್ಬರಿ 45 ಕಿ.ಮೀ. ಉರುಳುಸೇವೆ ಸೇವೆ ಮಾಡಿ ಮುಂಬರುವ ದಿನಗಳಲ್ಲಿ ಸಕಾಲಕ್ಕೆ ಸರಿಯಾಗಿ ಮಳೆಯಾಗಿ ಉತ್ತಮ ಬೆಳೆ ಬರುವಂತೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಅಫಜಲಪುರ (ಜು.17): ರಾಜ್ಯದಲ್ಲಿ ಮಳೆಗಾಗಿ ಜನ ಪೂಜೆ, ಪ್ರಾರ್ಥನೆ ಮಾಡುತ್ತಿದ್ದು, ಇಲ್ಲೊಬ್ಬ ಮಹಿಳೆ 3 ದಿನದಲ್ಲಿ ಬರೋಬ್ಬರಿ 45 ಕಿ.ಮೀ. ಉರುಳುಸೇವೆ ಸೇವೆ ಮಾಡಿ ಮುಂಬರುವ ದಿನಗಳಲ್ಲಿ ಸಕಾಲಕ್ಕೆ ಸರಿಯಾಗಿ ಮಳೆಯಾಗಿ ಉತ್ತಮ ಬೆಳೆ ಬರುವಂತೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಮಹಾನಂದಾ ಅಮಾತಿ(Mahananda amaati) ಹದರೆ ಎನ್ನುವರೇ ಉರುಳುಸೇವೆ ಮಾಡಿದ ಭಕ್ತೆ. ಇವರು ಮಂಗಳವಾರ ಮಹಾರಾಷ್ಟ್ರದ ಸೊಲ್ಲಾಪುರ್ ಜಿಲ್ಲೆಯ ಆಹೇರವಾಡಿ (ಐರೋಡಿ) ಗ್ರಾಮದಿಂದ ಆರಂಭಿಸಿ ಗುರುವಾರ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಮಣ್ಣೂರು ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಯಶಸ್ವಿಯಾಗಿ ತಲುಪಿದ್ದಾರೆ.

ಉರುಳು ಸೇವೆ ಉದ್ದಕ್ಕೂ ಸಾಧು ಸಂತರು ಭಾಗಿ

ಆಹೇರವಾಡಿ ಗ್ರಾಮದಿಂದ 45 ಕಿ.ಮೀ. ದಾರಿಯುದ್ದಕ್ಕೂ ರಸ್ತೆ ಮೇಲೆ ಬೆಡ್‌ಶೀಟ್ ಹಾಗೂ ಬಟ್ಟೆ ಹಾಕಲಾಗಿತ್ತು. ಇದರ ಮೇಲೆ ಮಹಾನಂದಾ ಅವರು ಉರುಳುಸೇವೆ ಮಾಡಿ ದೇವಿ ದರ್ಶನ ಪಡೆದಿದ್ದಾರೆ. ಉರುಳು ಸೇವೆಯುದ್ದಕ್ಕೂ ಸಾಧು-ಸಂತರು, ಭಕ್ತರು, ಯುವಕರು, ಮಕ್ಕಳು ಭಜನೆ ಮಾಡುತ್ತಾ ಪ್ರಾರ್ಥನೆ ಸಲ್ಲಿಸಿದರು.

ಎಲ್ಲಿಂದ ಎಲ್ಲಿಗೆ?

ಮಹಾನಂದ ಅಮಾತಿ ಎನ್ನುವ ಮಹಾರಾಷ್ಟ್ರ ಗಡಿಯ ಮಹಿಳೆ ರಾಜ್ಯದಲ್ಲಿ ಮಳೆಗಾಗಿ ಪ್ರಾರ್ಥಿಸಿ 3 ದಿನದಲ್ಲಿ ಬರೋಬ್ಬರಿ 45 ಕಿ.ಮೀ. ಉರುಳು ಸೇವೆ ಮಾಡಿ ಪ್ರಾರ್ಥಿಸಿದ್ದಾರೆ. ಮಂಗಳವಾರ ಮಹಾರಾಷ್ಟ್ರದ ಸೊಲ್ಲಾಪುರ್ ಜಿಲ್ಲೆಯ ಆಹೇರವಾಡಿ (ಐರೋಡಿ) ಗ್ರಾಮದಿಂದ ಉರುಳು ಸೇವೆ ಆರಂಭಿಸಿ ಗುರುವಾರ ಕಲಬುರಗಿಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಮಣ್ಣೂರು ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಬಂದು ತಲುಪಿದರು.