Shivamogga: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಭದ್ರಾವತಿಯ ಮಹಾತಾಯಿ!

ಶಿವಮೊಗ್ಗದಲ್ಲೊಬ್ಬರು ಕಾಂಗರು ತಾಯಿಯ ಪ್ರತಿರೂಪವಾಗಿರುವ ಅಚ್ಚರಿಯ ಘಟನೆ ನಡೆದಿದೆ. ಹೌದು! ಶಿವಮೊಗ್ಗದ ಪ್ರಖ್ಯಾತ ಮಕ್ಕಳ ಆಸ್ಪತ್ರೆ ಸರ್ಜಿ ಆಸ್ಪತ್ರೆಯಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು  ನಾಲ್ಕು ಮಕ್ಕಳಿಗೆ ಮಹಾ ತಾಯಿಯೊಬ್ಬರು ಜನ್ಮ ನೀಡಿದ್ದಾರೆ. 

Woman Gives Birth To Four Children At Bhadravati In Shivamogga gvd

ವರದಿ: ರಾಜೇಶ್ ಕಾಮತ್, ಶಿವಮೊಗ್ಗ

ಶಿವಮೊಗ್ಗ (ಮೇ.23): ಶಿವಮೊಗ್ಗದಲ್ಲೊಬ್ಬರು ಕಾಂಗರು ತಾಯಿಯ ಪ್ರತಿರೂಪವಾಗಿರುವ ಅಚ್ಚರಿಯ ಘಟನೆ ನಡೆದಿದೆ. ಹೌದು! ಶಿವಮೊಗ್ಗದ ಪ್ರಖ್ಯಾತ ಮಕ್ಕಳ ಆಸ್ಪತ್ರೆ ಸರ್ಜಿ ಆಸ್ಪತ್ರೆಯಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ಮಕ್ಕಳಿಗೆ ಮಹಾ ತಾಯಿಯೊಬ್ಬರು ಜನ್ಮ ನೀಡಿದ್ದಾರೆ. ಸರ್ಜಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಸಿಜರಿಯನ್ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು  ನಾಲ್ಕು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ.  ಭದ್ರಾವತಿ ತಾಲೂಕು ತಡಸಾ ಗ್ರಾಮದ ಆರೀಫ್ ಅವರ ಪತ್ನಿ ಅಲ್ಮಾಜ್ ಬಾನು (22) ರವರೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿಯಾಗಿದ್ದಾರೆ.   

ನಾಲ್ವರು ಮಕ್ಕಳ ಪೈಕಿ ಒಂದೊಂದು ಮಗು 1.1 ಕೆ.ಜಿ , 1.2 ಕೆ.ಜಿ , 1.3 ಕೆಜಿ , 1.8 ಕೆ.ಜಿ ಇದ್ದಾವೆ. ಅದರಲ್ಲಿ ಗಂಡು ಮಗುವೊಂದು ಉಳಿದ ಮಕ್ಕಳಿಗಿಂತ ಹೆಚ್ಚಿನ ತೂಕ ಹೊಂದಿದ್ದು ಆತನೇ ಮೊದಲ ಮಗುವಾಗಿದ್ದ ಎನ್ನಲಾಗಿದೆ. ಅಲ್ಮಾಜ್ ಭಾನುರವರ ನಾಲ್ಕು ಮಕ್ಕಳಿಗೂ ಸ್ವಲ್ಪ ಪ್ರಮಾಣದ ಉಸಿರಾಟದ ಸಮಸ್ಯೆಯಿದ್ದು,  2 ಮಕ್ಕಳಿಗೆ ಸಿ ಪ್ಯಾಪ್ ಅಳವಡಿಸಲಾಗಿದೆ. ಇನ್ನು ಎರಡು ಮಕ್ಕಳಿಗೆ ಕೃತಕ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ.  ಎಲ್ಲಾ ಮಕ್ಕಳಿಗೂ ತಾಯಿಯ ಎದೆ ಹಾಲು ಕುಡಿಸಲು ಪ್ರಯತ್ನಿಸಲಾಗುತ್ತಿದೆ. ಸಂಬಂಧಿಗಳಲ್ಲಿ ನಾಲ್ವರು ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. 

Shivamogga: ಮಳೆಯ ಹಾನಿ ತಪ್ಪಿಸಲು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಿ: ಸಚಿವ ನಾರಾಯಣ ಗೌಡ

ಒಂದೊಂದು ಮಗುವಿಗೆ ಒಬ್ಬರು ಮಹಿಳೆಯನ್ನು ನಿಯೋಜನೆ ಮಾಡಲಾಗುತ್ತದೆ. ಆ ಮಗುವಿನ ಪಾಲನೆಯನ್ನು ಅವರು ಮಾಡಬೇಕು. ಇದರ ಜೊತೆಗೆ ತಾಯಿಯ ಆರೈಕೆ ಮಾಡಲಾಗುತ್ತದೆ. ಇಂತಹ ಹೆರಿಗೆ ಮಾಡಿಸುವುದು ವೈದ್ಯರಿಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು. ಈ ಪ್ರಕರಣಗಳಲ್ಲಿ ಅಧಿಕ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂದಿನ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅರವಳಿಕೆ ತಜ್ಞ ಡಾ. ಮೂರ್ಕಣ್ಣಪ್ಪ ಪ್ರಮುಖ ಪಾತ್ರ  ವಹಿಸಿದ್ದರು. ಐದು ಲಕ್ಷ ಜನರಲ್ಲಿ ಒಬ್ಬರು ಮಾತ್ರ ನಾಲ್ಕು ಮಕ್ಕಳಿಗೆ ಜನ್ಮ ನೀಡುತ್ತಾರೆ ಎನ್ನಲಾಗಿದೆ. 

Shivamogga: ನೆರೆ ಹಾವಳಿಗೊಳಗಾದ ರೈತರ ಹೊಲಗಳಿಗೆ ಜಿಲ್ಲಾಧಿಕಾರಿ ಭೇಟಿ: ಮಳೆಹಾನಿ ಪ್ರದೇಶದಲ್ಲಿ ಪರಿಶೀಲನೆ

ತಾಯಿಗೆ 32 ವಾರ 5 ದಿನಗಳಾಗಿದ್ದು, ಇದು ಅವಧಿ ಪೂರ್ವ ಹೆರಿಗೆ, ತಾಯಿಗೆ ಅರವಳಿಕೆ ಕೊಡುಬೇಕಿರುವುದು ಮತ್ತು ಅಧಿಕ ರಕ್ತಸ್ರಾವ ಉಂಟಾಗುವ ಸಂಭವವಿರುತ್ತದೆ. ಇವುಗಳ ನಮಗೆ ತುಂಬಾ ಸವಾಲಾಗಿದ್ದವು. ಎಲ್ಲ ಮಕ್ಕಳಿಗೆ ಹಾಲು ಶುರು ಮಾಡಲಾಗಿದೆ.‌ ಅವಧಿ ಪೂರ್ವವಾಗಿದ್ದರೂ ಮಕ್ಕಳ ತೂಕ ಈ ಹಂತದಲ್ಲಿ ಸರಿಯಾಗಿದೆ. ತಾಯಿಯ ಆರೋಗ್ಯವು ಚನ್ನಾಗಿದೆ. ನಾಲ್ಕು ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ನಾಲ್ಕು ಮಕ್ಕಳಿಗೆ ತಾಯಿಯ ಹಾಲು ಕೊಡುವುದು, ಅವುಗಳ ಆರೈಕೆ ಮಾಡುವುದು ಸುಲಭವಲ್ಲ. ತಾಯಿ ಮತ್ತು ಮಕ್ಕಳನ್ನು ಕುಟುಂಬದವರು ಸೂಕ್ಷ್ಮವಾಗಿ ಆರೈಕೆ ಮಾಡಬೇಕಾಗುತ್ತದೆ ಎಂದು ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ. ಚೇತನಾ , ಮಕ್ಕಳ ತಜ್ಞರಾದ ಡಾ ಅನಿಲ್ ಬಿ ಕಲ್ಲೇಶ್ ಅಭಿಪ್ರಾಯ ಪಡುತ್ತಾರೆ.

Latest Videos
Follow Us:
Download App:
  • android
  • ios