ಮಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಮಹಿಳೆ ಉಸಿರುಗಟ್ಟಿ ಸಾವು

ಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಮುಂಜಾನೆ 4 ಗಂಟೆ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಮಹಿಳೆ ಬಾತ್‌ರೂಂನಲ್ಲಿದ್ದ ಸಹೈನ್‌ ಮೂಸಬ್‌ ಬೆಂಕಿಯ ಹೊಗೆಗೆ ಹೊರಬರಲಾಗದೆ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. 

Woman Dies Due to Fire on Apartment in Mangaluru grg

ಮಂಗಳೂರು(ನ.29): ನಗರದ ಅತ್ತಾವರದಲ್ಲಿ ಶಾರ್ಟ್‌ಸರ್ಟ್‌ನಿಂದ ಬೆಂಕಿ ಹತ್ತಿಕೊಂಡ ಅಪಾರ್ಟ್‌ಮೆಂಟ್‌ನಲ್ಲಿ ಬಾತ್‌ರೂಂನಲ್ಲಿದ್ದ ಮಹಿಳೆ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಸಹೈನ್‌ ಮೂಸಬ್‌(57) ಮೃತಪಟ್ಟ ಮಹಿಳೆ. ಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಮುಂಜಾನೆ 4 ಗಂಟೆ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಮಹಿಳೆ ಬಾತ್‌ರೂಂನಲ್ಲಿದ್ದ ಸಹೈನ್‌ ಮೂಸಬ್‌ ಬೆಂಕಿಯ ಹೊಗೆಗೆ ಹೊರಬರಲಾಗದೆ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಮನೆಯೊಳಗಿದ್ದ ಮತ್ತೊಬ್ಬರು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಬೆಂಕಿ ಅವಘಡದ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕದಳ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅವಘಡದಲ್ಲಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಘಟನೆಗೆ ಶಾರ್ಟ್‌ಸರ್ಕ್ಯೂಟ್‌ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆ ಕುರಿತು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

ಸರ್ಕಾರಿ ಶಾಲೆ ಮೇಲೆ ಬಿತ್ತು ಭೂ ಬಕಾಸುರರ ಕಣ್ಣು..? ಶಾಲೆ ಭೂಮಿ ಕಬಳಿಸಿ ಬಡಾವಣೆ ನಿರ್ಮಾಣಕ್ಕೆ ಪ್ಲಾನ್!

ಅವಘಡ ವೇಳೆ ಮನೆಯಲ್ಲಿ ಒಂಭತ್ತು ಮಂದಿ ಇದ್ದರು. ಬಳಿಕ ಏಳು ಮಂದಿ ಹೊರಗೆ ಬಂದಿದ್ದಾರೆ. ಆದರೆ ಎಲ್ಲರೂ ಹೊರಗೆ ಬಂದಿದ್ದಾರೆ ಎಂದು ಭಾವಿಸಲಾಗಿತ್ತು. ನಂತರ ಒಳಗೆ ಇಬ್ಬರು ಸಿಲುಕಿರುವುದು ಗಮನಕ್ಕೆ ಬಂದಿತ್ತು. ಅವರನ್ನು ರಕ್ಷಿಸುವ ವೇಳೆ ಒಬ್ಬಾಕೆ ಸಾವಿಗೀಡಾಗಿದ್ದು, ಇನ್ನೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದಾರೆ.

ಅಗ್ನಿಶಾಮಕದಳದ ಪ್ರಾದೇಶಿಕ ಅಗ್ನಿಶಮನ ಅಧಿಕಾರಿ ಆರ್‌. ರಂಗನಾಥ್‌, ಪುಂಡಲೀಕ, ರಾಜಾ, ಜಯಾ, ಎಲುಗುರಪ್ಪ ಮೂಲೆಮನಿ, ಮಲ್ಲಿಕಾರ್ಜುನ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios