ಗಲಾಟೆ ವಿಕೋಪಕ್ಕೆ ತಿರುಗಿ ಗಂಡ ಹೆಂಡತಿಯನ್ನು ಚಲ್ಲಿಸುತ್ತಿದ್ದ ಲಾರಿ ಕೆಳಗೆ ತಳಿದ ಪರಿಣಾಮ ಹೆಂಡತಿ ಲಾರಿ ಚಕ್ರಗಳಿಗೆ ಸಿಕ್ಕಿ ಸ್ಥಳದಲ್ಲೇ ಸಾವು 

ಚಿಂತಾಮಣಿ(ಡಿ.04):  ಗಂಡ ಹೆಂಡತಿ ರಸ್ತೆ ಬದಿಯಲ್ಲಿ ಗಲಾಟೆ ಮಾಡಿಕೊಂಡು ಬರುತ್ತಿದ್ದು, ಸಿಟ್ಟಿನಿಂದ ಗಂಡ ಹೆಂಡತಿಯನ್ನು ತಳ್ಳಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಆಕೆಯ ಮೇಲೆ ಲಾರಿಯೊಂದು ಚಲಿಸಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.

ನಗರದ ಕರ್ನಾಟಕ ಬ್ಯಾಂಕ್‌ ಸಮೀಪದ ಸುಖಸಾಗರ್‌ ಹೋಟಲ್‌ ಮುಂಭಾಗದಲ್ಲಿ ಶನಿವಾರ ಬೆಳಿಗ್ಗೆ 8-30 ರ ಸಮಯದಲ್ಲಿ ಕುಡಿದ ಅಮಲಿನಲ್ಲಿ ಗಂಡ ಮುನಿಕೃಷ್ಣ ಆಕೆಯ ಪತ್ನಿ ಸುಮೈರಾ ಸುಲ್ತಾನ್‌ ರೊಂದಿಗೆ ಗಲಾಟೆ ಮಾಡಿಕೊಂಡು ಗಲಾಟೆ ವಿಕೋಪಕ್ಕೆ ತಿರುಗಿ ಗಂಡ ಹೆಂಡತಿಯನ್ನು ಚಲ್ಲಿಸುತ್ತಿದ್ದ ಲಾರಿ ಕೆಳಗೆ ತಳಿದ ಪರಿಣಾಮ ಹೆಂಡತಿ ಲಾರಿ ಚಕ್ರಗಳಿಗೆ ಸಿಕ್ಕಿ ಸ್ಥಳದಲ್ಲೇ ಸಾವನ್ನಪಿದ್ದಾಳೆ. ಇವರಿಗೆ ನಾಲ್ಕು ವರ್ಷದ ಬಾಬಾಜಾನ್‌ ಎಂಬ ಪುಟ್ಟಬಾಲಕನಿದ್ದು, ಬಾಲಕನಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. 

ರೈಲು ಹತ್ತುವ ವೇಳೆ ದುರಂತ: ಗಾಲಿಗೆ ಸಿಲುಕಿ ಪ್ರಯಾಣಿಕ ಸಾವು

ಸ್ಥಳಕ್ಕೆ ಉಪವಿಭಾಗದ ಎಎಸ್‌ಪಿ ಕುಶಾಲ್‌ ಚೌಕ್ಸಿ, ನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ರಂಗಸ್ವಾಮಯ್ಯ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಘಟನೆಗೆ ಕಾರಣನಾದ ಗಂಡ ಹಾಗೂ ಲಾರಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.