ಗಂಡನ ಅಕ್ರಮ ಸಂಬಂಧದಿಂದ ಕೌಟುಂಬಿಕ ಕಲಹ ನೊಂದ ಪತ್ನಿ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣು ಕೋಲಾರ ಜಿಲ್ಲೆಯ ಚಿನ್ನಾಪುರ ಗ್ರಾಮದಲ್ಲಿ ಘಟನೆ

ಕೋಲಾರ (ಜು.01) : ಕೌಟುಂಬಿಕ ಕಲಹದಿಂದ ಬೇಸತ್ತು ಎರಡು ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರದಲ್ಲಿಂದು ನಡೆದಿದೆ.

ಕೋಲಾರ ತಾಲೂಕಿನ ಚಿನ್ನಾಪುರ ಗ್ರಾಮದ ಭವಾನಿ (23) ಅತ್ಮಹತ್ಯೆಗೆ ಶರಣಾದ ಮಹಿಳೆ.

ಗಂಡ ಹರೀಶ್ ಮತ್ತೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಎದುರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದ ಹರೀಶ್ ಹಾಗೂ ಭವಾನಿ ನಡುವೆ ಈ ಸಂಬಂಧ ಕಲಹ ಶುರುವಾಗಿತ್ತು. ಇದರಿಂದ ನೊಂದು ಭವಾನಿ ಪ್ರಾಣ ಕಳೆದುಕೊಂಡಿದ್ದಾಳೆ. 

ಡೆತ್ ನೋಟ್ ಬರೆದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ .

ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊದಲು ಮಗುವನ್ನು ಕೊಂದು ಬಳಿಕ ತಾನು ನೇಣಿಗೆ ಕೊರಳೊಡ್ಡಿದ್ದಾಳೆ.

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.