Asianet Suvarna News

ಡೆತ್ ನೋಟ್ ಬರೆದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

  • ಡೆತ್ ನೋಟ್ ಬರೆದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
  •  ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ ನಡೆದ ಘಟನೆ
  • ತನ್ನ ಸಾವಿಗೆ ತಾನೆ ಜವಾಬ್ದಾರಿ ಎಂದು ಬರೆದ ವಿದ್ಯಾರ್ಥಿ
engineering Student Commits Suicide in Sagara snr
Author
Bengaluru, First Published Jul 1, 2021, 12:00 PM IST
  • Facebook
  • Twitter
  • Whatsapp

ಸಾಗರ (ಜು.01): ಡೆತ್ ನೋಟ್ ಬರೆದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ  ಶರಣಾಗಿರುವ ಘಟನೆ ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ  ಗುರುವಾರ ಮಧ್ಯಾಹ್ನ ವೇಳೆಗೆ ನಡೆದಿದೆ. 

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕೆಳದಿ ಗ್ರಾಮದ  ಸುಬ್ರಹ್ಮಣ್ಯ ಎಂಬುವರ ಪುತ್ರ ಗಣೇಶ್ (22) ಆತ್ಮಹತ್ಯೆಗೆ ಶರಣಾದ ಯುವಕ.
 
ಗಣೇಶ್  ಉಡುಪಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಲಾಕ್ ಡೌನ್ ನಿಂದ ಕಾಲೇಜು ರಜೆ ಇದ್ದ ಹಿನ್ನೆಲೆಯಲ್ಲಿ ತನ್ನ ಸ್ವಗ್ರಾಮಕ್ಕೆ ಮರಳಿದ್ದ.  

ಹಾಸನ; ಒಂದೇ ತಿಂಗಳಿನಲ್ಲಿ ಅಕ್ಕ-ತಂಗಿ ಆತ್ಮಹತ್ಯೆ, ವರದಕ್ಷಿಣೆ ಕಿರುಕುಳ?

ಗಣೇಶ್ ನಿನ್ನೆ ಮಧ್ಯಾಹ್ನ ತನ್ನ ಮನೆಯಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ತಾನೇ ಜವಾಬ್ದಾರಿ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ.

ಸುಬ್ರಹ್ಮಣ್ಯ ಅವರಿಗೆ ಐದು ಜನ ಹೆಣ್ಣುಮಕ್ಕಳು ಇದ್ದು ಗಣೇಶ ಕೊನೆಯ ಪುತ್ರನಾಗಿದ್ದ. ಇಂಜಿನಿಯರಿಂಗ್ ಓದುತ್ತಿದ್ದ ಈತ ಪ್ರಾಣ ಕಳೆದುಕೊಂಡಿದ್ದಾನೆ. 

ಈ ಸಂಬಂಧ ಸಾಗರ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios