ನೇತ್ರಾವತಿಗೆ ತಡೆಗೋಡೆ ಯಾವಾಗ..? ಮತ್ತೊಬ್ಬ ಮಹಿಳೆ ಆತ್ಮಹತ್ಯೆ

ನೇತ್ರಾವತಿ ನದಿಯಲ್ಲಿ ಉಳ್ಳಾಲ ಸೇತುವೆಯಿಂದ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಂದೆ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮತ್ತೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಮಡಿದ್ದು, ಇನ್ನದರೂ ಸೇತುವೆಗೆ ಶೀಘ್ರ ತಡೆಗೋಡೆ ನಿರ್ಮಿಸಬೇಕಿದೆ.

 

Woman Commits suicide in Netravathi River Bridge in Mangalore

ಮಂಗಳೂರು(ಫೆ.29): ಉಳ್ಳಾಲ ನಗರದ ಉಳ್ಳಾಲ ರೈಲ್ವೆ ಸೇತುವೆ ಬಳಿ ಮಹಿಳೆಯೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಈಕೆಯ ಮೃತದೇಹ ಶನಿವಾರ ಉಳ್ಳಾಲ ಕೋಡಿ ಬಳಿ ಪತ್ತೆಯಾಗಿದೆ. ಬಿಕರ್ನಕಟ್ಟೆಕುಲಶೇಖರ ನಿವಾಸಿ ಉಮಾಪ್ರಕಾಶ್‌ (42) ಮೃತಪಟ್ಟವರು.

ಮಹಿಳೆ ಮೇರ್ಲಪದವು ಸಮೀಪ ವಾಸಿಸುತ್ತಿದ್ದು, ವಾರಕ್ಕೊಮ್ಮೆ ಕುಲಶೇಖರದಲ್ಲಿರುವ ಗಂಡನ ಮನೆ ಹೋಗಿ ಬರುತ್ತಿದ್ದರು. ಶುಕ್ರವಾರವೂ ಗಂಡನ ಮನೆಗೆ ಹೋಗಿ ಬಳಿಕ ಅಲ್ಲಿಂದ ಮೇರ್ಲಪದವಿನಲ್ಲಿರುವ ತನ್ನ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದರು. ಮನೆಯವರು, ಸಂಬಂಧಿಕರು ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ನೇತ್ರಾವತಿಗೆ ಮತ್ತೆರಡು ಬಲಿ: ಮಗುವಿನೊಂದಿಗೆ ನದಿಗೆ ಹಾರಿದ ತಂದೆ

ಶುಕ್ರವಾರ ಮಧ್ಯಾಹ್ನ ವೇಳೆ ಉಳ್ಳಾಲ ರೈಲ್ವೆ ಟ್ರ್ಯಾಕ್‌ ಬಳಿ ಮಹಿಳೆಯೊಬ್ಬರ ಬ್ಯಾಗ್‌, ಪರ್ಸ್‌, ಮೊಬೈಲ್‌ ಪತ್ತೆಯಾಗಿತ್ತು. ಕೂಡಲೇ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೊಬೈಲ್‌ನಲ್ಲಿರುವ ನಂಬರ್‌ ಆಧಾರದಲ್ಲಿ ಕರೆ ಮಾಡಿ ಮಹಿಳೆಯ ಮಾಹಿತಿ ಪಡೆದಿದ್ದರು. ಮಹಿಳೆ ನಾಪತ್ತೆ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನ: ಒಂದೇ ದಿನ 2 ಬಾರಿ ರಕ್ಷಣೆ

ಶನಿವಾರ ಬೆಳಗ್ಗೆ ಉಳ್ಳಾಲ ಕೋಡಿ ಬಳಿ ಮಹಿಳೆಯ ಮೃತದೇಹವೊಂದು ಪತ್ತೆಯಾಗಿದ್ದು, ಅದು ಉಮಾಪ್ರಕಾಶ್‌ ಎಂಬವರದೆಂದು ಕುಟುಂಬದವರು ಗುರುತು ಪತ್ತೆಹಚ್ಚಿದ್ದಾರೆ. ಮಹಿಳೆಯ ಗಂಡ ದುಬೈಯಲ್ಲಿದ್ದು, ಅವರು ಬಂದ ಬಳಿಕ ಶವವನ್ನು ಮಹಜರು ನಡೆಸಿ ಕುಟುಂಬಿಕರು ಬಿಟ್ಟುಕೊಡಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios