ಮಂಗಳೂರು(ಫೆ.16): ಮಂಗಳೂರಿನ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಲೇ ಇವೆ. ಕೆಫೆ ಕಾಫೀ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಮಾಡಿದ ಸೇತುವೆಯಲ್ಲೇ ವ್ಯಕ್ತಿಯೊಬ್ಬರು ಆರು ವರ್ಷದ ಮಗುವಿನ ಜೊತೆಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗುವಿನ ಜೊತೆ ನದಿಗೆ ಹಾರಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಫಿ‌ ಡೇ ಸಿದ್ದಾರ್ಥ್ ಹಾರಿದ ಮಂಗಳೂರಿನ ನೇತ್ರಾವತಿ ಸೇತುವೆಯಲ್ಲಿ ಘಟನೆ ನಡೆದಿದೆ. ಮಗ ಅನೀಶ್ ರೈ(6) ಜೊತೆ ಬಂಟ್ವಾಳದ ಶಂಭೂರು ನಿವಾಸಿ ಗೋಪಾಲಕೃಷ್ಣ ರೈ(45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನ: ಒಂದೇ ದಿನ 2 ಬಾರಿ ರಕ್ಷಣೆ

ಕೊಣಾಜೆ ಸಮೀಪ ಕುಟುಂಬದ ಕಾರ್ಯಕ್ರಮಕ್ಕೆ ಪತ್ನಿ ಸಮೇತರಾಗಿ ಬಂದಿದ್ದ ಗೋಪಾಲಕೃಷ್ಣ ರೈ ಡೆತ್ ನೋಟ್ ಬರೆದಿಟ್ಟು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೇತ್ರಾವತಿಗೆ ಮತ್ತೊಬ್ಬ ಆಹುತಿ: ಸಿದ್ಧಾಥ್‌ ಹೆಗ್ಡೆ ಆತ್ಮಹತ್ಯೆ ಸ್ಥಳದಲ್ಲಿಯೇ ನದಿಗೆ ಹಾರಿದ ಯುವಕ

'ತನಗೆ ಒಂದು ವಾರದಿಂದ ನಿದ್ರೆ ಬರುತ್ತಿಲ್ಲ, ನಾನೊಬ್ಬ ಮಗನನ್ನು ಕೊಲ್ಲುವ ಮಹಾ ಪಾಪಿ', 'ಇದಕ್ಕಾಗಿ ನನ್ನ ಕ್ಷಮಿಸಿರಿ, ಪತ್ನಿ ಅಶ್ವಿನಿ ರೈ ನಿನ್ನ ಬಿಟ್ಟು ಇಬ್ಬರೂ ದೂರ ಹೋಗುತ್ತಿದ್ದೇವೆ' ಎಂದು ಡೆತ್ ನೋಟ್ ಬರೆದಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.