ಬೆಂಗಳೂರು[ಡಿ.12]: ಅನುಮಾನಾಸ್ಪದವಾಗಿ ಗೃಹಿಣಿಯೋರ್ವಳು ಸಾವಿಗೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರಿನ ಮಹದೇವಪುರದಲ್ಲಿ ಗೃಹಿಣಿ [27] ಶಿಲ್ಪಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಹೊಸಕೋಟೆ ತಾಲೂಕಿನ ಹಿಂಡಗನಾಳದ ರಾಮಪ್ಪ ಹಾಗೂ ದೇವಮ್ಮ ದಂಪತಿಯ ಪುತ್ರಿ ಶಿಲ್ಪಾಳನ್ನು ಒಂದು ವರ್ಷದ ಹಿಂದೆ ನಾಗೇಶ್ ಜೊತೆಗೆ ವಿವಾಹ ಮಾಡಿಕೊಡಲಾಗಿತ್ತು. 

ಬೆಂಗಳೂರು ಪೋಲಿಸರ ಭರ್ಜರಿ ಬೇಟೆ ರಾಜಸ್ಥಾನದ ಹಲ್ಲಿ ಮಾರಾಟಗಾರರ ಸೆರೆ..

ಹೂಡಿಯಲ್ಲಿ ತಂದೆ ತಾಯಿಯ ಜೊತೆಗೆ ವಾಸವಾಗಿದ್ದ ನಾಗೇಶ್ ಜೊತೆಗೆ ಶಿಲ್ಪಾ ವಾಸವಾಗಿದ್ದು, ಗಂಡನ ಮನೆಯವರ ಕಿರುಕುಳವೇ ಇದಕ್ಕೆ ಕಾರಣ ಎನ್ನಲಾಗಿದೆ. 

ಗಂಡ, ಅತ್ತ, ಮಾವ ಕಿರುಕುಳ ನೀಡಿದ್ದಾರೆ ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಇದೀಗ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.