ಬೆಂಗಳೂರು(ಡಿ. 12)  ಕೋರಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ನಗರದಲ್ಲಿ ವನ್ಯಜೀವಿ ಗಳನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಶಕ್ತಿ (26), ಮಲ್ಲರಾಜು (55), ಗೋಪಿ (28) ಬಂಧಿತ ಅರೋಪಿಗಳು. ರಾಜಸ್ಥಾನದಲ್ಲಿ ಅತಿ ವಿರಳ ವನ್ಯಜೀವಿಗಳನ್ನ ಅಕ್ರಮಾವಾಗಿ ಸೆರೆ ಹಿಡಿದಿದ್ದ ಆರೋಪಿಗಳು ಮಾರಾಟ ಮಾಡಲು ಯತ್ನ ನಡೆಸುತ್ತಿದ್ದರು.

ಪ್ರೀತಿ-ಪ್ರೇಮ: ಫೆಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿ ಸುಸೈಡ್ ಮಾಡಿಕೊಂಡ ರಾಯಚೂರು ಯುವಕ

ಸ್ಪೈನಿ ಬಾಲದ 10 ಹಲ್ಲಿಯನ್ನ ಮಾರಾಟಕ್ಕೆ ತಂದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಮರಳುಗಾಡಿನಿಂದ ನಗರಕ್ಕೆ ಹಲ್ಲಿಗಳನ್ನು ತರಲಾಗಿತ್ತು. ಸೂಕ್ತ ಮಾಹಿತಿ ಮೇರೆಗೆ ಕೋರಮಂಗಲ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ವನ್ಯಜೀವಿಗಳ  ಮಾರಾಟದ ಬಗ್ಗೆ ತೀವ್ರ ನಿಗಾ ವಹಿಸಿರುವ ಪೊಲೀಸರು ಸೂಕ್ತ ಮಾಹಿತಿ ಆಧರಿಸಿ ದಾಳಿ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.