ಪ್ರವಾಸದ ನೆಪದಲ್ಲಿ ಬಂದ ಮಹಿಳೆ ಸಿಕ್ಕಿಬಿದ್ದಳು.. ಆಕೆ ಪರ್ಸ್ಪರಿಶೀಲಿಸಿದಾಗ ಅಸಲಿ ಮುಖ ಬಯಲಾಗಿದೆ. 

ಸಕಲೇಶಪುರ (ನ.05): ಪ್ರವಾಸಿಗರ ಸೋಗಿನಲ್ಲಿ ಬಂದು ನಕಲಿ ನೋಟು(ಖೋಟಾ) ಚಲಾವಣೆಗೆ ಯತ್ನಿಸಿದ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಮಂಜ್ರಾಬಾದ್‌ ಕೋಟೆ ಸಮೀಪದ ಕ್ಯಾಂಟೀನ್‌ನಲ್ಲಿ ತಿನಿಸುಗಳನ್ನು ಖರೀದಿ ಮಾಡಿ ನೋಟೊಂದನ್ನು ಅಂಗಡಿಯವನಿಗೆ ನೀಡಿ ಕೋಟೆ ನೋಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಂಗಡಿ ಮಾಲೀಕನಿಗೆ ನೋಟಿನ ಬಗ್ಗೆ ಅನುಮಾನ ಬಂದು ಹೈವೇ ಗಸ್ತು ತಿರುಗುವ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಹುಬ್ಬಳ್ಳಿ-ಧಾರವಾಡದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌: ಏಳು ಜನರ ಬಂಧನ

ಈ ವೇಳೆ ಕೋಟೆ ನೋಡಿಕೊಂಡು ಬಂದ ಮಹಿಳೆಯ ಪರ್ಸ್‌ ಪರಿಶೀಲಿಸಿದಾಗ 500 ರು.ಗಳ ಹಲವು ನಕಲಿ ನೋಟು ಕಂಡು ಬಂದಿದೆ. ಈ ವೇಳೆ ಮಹಿಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಮಹಿಳೆಯನ್ನು ಹಿಡಿದಿದ್ದಾರೆ.

ಬೆಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಮಹಿಳೆ ಹಾಗೂ ಈಕೆಯ ಜೊತೆ ಇನ್ನಿಬ್ಬರು ಬಂದಿದ್ದರು. ತಾಯಿ, ತಂದೆ, ಮಗ ಎಂದು ಹೇಳಲಾಗುತ್ತಿದೆ. ಹೆದ್ದಾರಿ ಗಸ್ತಿನವರು ಆರೋಪಿಗಳನ್ನು ನಗರ ಠಾಣೆಗೆ ಒಪ್ಪಿಸಿದ್ದು, ಈ ಕುರಿತು ದೂರು ದಾಖಲಿಸಿಕೊಂಡು ಮೂವರನ್ನೂ ತನಿಖೆಗೆ ಒಳಪಡಿಸಿದ್ದಾರೆ.