100ಕ್ಕೆ 1000 ಪಟ್ಟು ಗೆಲ್ತೀನಿ: ಬಿಜೆಪಿ ಅಭ್ಯರ್ಥಿ ವಿಶ್ವಾಸ
ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಮಂಡ್ಯದ ಕೆ. ಆರ್. ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಅವರು ಮತ ಚಲಾಯಿಸಿ ಮಾತನಾಡಿದ್ದಾರೆ. ಏನು ಹೇಳಿದ್ದಾರೆ..? ಇಲ್ಲಿದೆ ಓದಿ.
ಮಂಡ್ಯ(ಡಿ.05): ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಮಂಡ್ಯದ ಕೆ. ಆರ್. ಪೇಟೆಯಲ್ಲಿಯೂ ಬಿರುಸಿನ ಮತದಾನ ನಡೆದಿದೆ. ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮತದಾನದ ನಂತರ ಮಾತನಾಡಿದ ಕೆ. ಸಿ. ನಾರಾಯಣಗೌಡ ಅವರು, ತಾವು ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಅಭಿವೃದ್ದಿಯೇ ನನ್ನ ಗುರಿಯಾಗಿದೆ. ತಾಲೂಕಿನ ಎಲ್ಲಾ ಕೆರೆಕಟ್ಟೆಗಳನ್ನ ತುಂಬಿಸುವುದು, ಆರೋಗ್ಯ ಸುಧಾರಣೆಗೆ ಕ್ರಮ ಸೇರಿದಂತೆ ಅಭಿವೃದ್ದಿಗಾಗಿ ಜನ ಕೈ ಹಿಡಿಯಲಿದ್ದಾರೆ ಎಂದಿದ್ದಾರೆ.
ಮೈಸೂರು: ‘ಕಮಲ’ ತಡೆಗೆ ‘ಕೈ’, ‘ತೆನೆ’ ತಂತ್ರಗಾರಿಕೆ!
ನೂರಕ್ಕೆ 1000 ಪಟ್ಟು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಇನ್ನು ಹತ್ತು ಹದಿನೈದು ವರ್ಷ ಬಿಜೆಪಿಯೇ ಅಧಿಕಾರದಲ್ಲಿರಲಿದೆ. ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ಸಿ ಎಂ ಆಗಿರಲಿದ್ದಾರೆ ಎಂದು ಹೇಳಿದ್ದಾರೆ.
ಕೆ. ಆರ್. ಪೇಟೆಯಲ್ಲಿ ಬೆಳಗ್ಗಿನ ಸಂದರ್ಭ ಮತಕಟ್ಟೆಗೆ ಜನ ಹೆಚ್ಚಿನ ಜನ ಆಗಮಿಸಿರಲಿಲ್ಲ. ನಂತರದಲ್ಲಿ ಮತದಾನ ಬಿರುಸಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮಾಂಸದ ಅಡುಗೆ ಸಿದ್ದಪಡಿಸುತ್ತಿದ್ದ ವ್ಯಕ್ತಿ ಅರೆಸ್ಟ್..!