Asianet Suvarna News Asianet Suvarna News

Wild elephant attacks: ತೀರ್ಥಹಳ್ಳಿ: ಕುರು​ವ​ಳ್ಳಿ​ ಬಳಿ ಕಾಡಾನೆ ಹಾವಳಿ- ಆತಂಕ

ಪಟ್ಟಣಕ್ಕೆ ಹೊಂದಿಕೊಂಡಿರುವ ಕುರುವಳ್ಳಿಯಲ್ಲಿ ಶನಿವಾರ ನಸುಕಿನಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಸಮೀಪದ ವಿಠಲನಗರದ ಬಳಿ ಇರುವ ಅರಣ್ಯ ಇಲಾಖೆಯ ನೆಡುತೋಪಿನ ಬಳಿ ದಟ್ಟವಾದ ಪೊದೆಯೊಳಗೆ ಸೇರಿಕೊಂಡಿದೆ. ಆನೆಯನ್ನು ನಿಯಂತ್ರಿಸುವ ಸಲುವಾಗಿ ಸಕ್ರೆಬೈಲಿನಿಂದ ಮೂವರು ಮಾವುತರನ್ನು ಕೂಡ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.

wild elephants threat near Kuruvalli teerthahalli at shivamogga rav
Author
First Published Jan 1, 2023, 8:22 AM IST

ತೀರ್ಥಹಳ್ಳಿ (ಜ.1): ಪಟ್ಟಣಕ್ಕೆ ಹೊಂದಿಕೊಂಡಿರುವ ಕುರುವಳ್ಳಿಯಲ್ಲಿ ಶನಿವಾರ ನಸುಕಿನಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಸಮೀಪದ ವಿಠಲನಗರದ ಬಳಿ ಇರುವ ಅರಣ್ಯ ಇಲಾಖೆಯ ನೆಡುತೋಪಿನ ಬಳಿ ದಟ್ಟವಾದ ಪೊದೆಯೊಳಗೆ ಸೇರಿಕೊಂಡಿದೆ. ಆನೆಯನ್ನು ನಿಯಂತ್ರಿಸುವ ಸಲುವಾಗಿ ಸಕ್ರೆಬೈಲಿನಿಂದ ಮೂವರು ಮಾವುತರನ್ನು ಕೂಡ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.

ದಟ್ಟವಾದ ಜನವಸತಿ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ 4.15 ಗಂಟೆಗೆ ದಿಢೀರನೆ ಕುರುವಳ್ಳಿ ಪೇಟೆಯಲ್ಲಿ ಆನೆ ಕಾಣಿಸಿಕೊಂಡಿರುವ ಕಾರಣ ಈ ಭಾಗದ ಜನರು ಭಯಬೀತರನ್ನಾಗಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬೆಳಗಿನಿಂದ ಸ್ಥಳದಲ್ಲೇ ಮೊಕ್ಕಾಂ ಮಾಡಿದ್ದು ಆನೆ ಸೇರಿಕೊಂಡಿರುವ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸುತ್ತುವರಿದಿದ್ದಾರೆ.

ಕಾಡಾನೆ ದಾಳಿ: ನಾಲ್ಕು ಎಕರೆಯಲ್ಲಿನ ಅಡಿಕೆ,ಬಾಳೆ ಬೆಳೆ ಸಂಪೂರ್ಣ ನಾಶ

ಶನಿವಾರ ಬೆಳಗಿನ ಜಾವ ತುಂಗಾನದಿ(Tunga river)ಯಲ್ಲಿ ಸ್ನಾನ ಮಾಡುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳು ಮೊದಲಿಗೆ ಆನೆಯನ್ನು ಗಮನಿಸಿದ್ದರು. ಕುರುವಳ್ಳಿ ಪೇಟೆ(Kuruvalli pete) ಬದಿ ಸುತ್ತಾಡಿದ ಆನೆ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಶಂಕರ್‌ ವುಡ್‌ ಇಂಡಸ್ಟ್ರೀಸ್‌ನ ಫ​ಲ​ಕ​ವನ್ನು ತುಳಿದು ಬೀಳಿಸಿದೆ. ಅನಂತರ ತುಂಗಾನದಿ ಕಡೆಗೆ ಹೋಗುವ ಮಾರ್ಗದಲ್ಲಿ ಮನೆಗೆ ಹೊಂದಿಕೊಂಡಿದ್ದ ಬೇಲಿಯನ್ನು ಮುರಿದು ನದಿ ಕಡೆಗೆ ಹೋಗಿತ್ತು. ಹತ್ತಿರದಲ್ಲೇ ಕಾಣಿಸಿಕೊಂಡ ಆನೆಯನ್ನು ಕಂಡು ಅಯ್ಯಪ್ಪ ಮಾಲಾಧಾರಿಗಳು ಭಯಭೀತರಾಗಿದ್ದರು. ವಿಠಲನಗರದ ಬಳಿ ಇರುವ ನೆಡುತೋಪಿನ ಕಡೆಗೆ ಆನೆ ಹೋಗಿರುವುದಾಗಿ ಅಯ್ಯಪ್ಪ ಮಾಲಾಧಾರಿ ಚಂದ್ರ ತಿಳಿಸಿದರು.

ಸುಮಾರು ಮೂರು ವರ್ಷ ಪ್ರಾಯದ ಈ ಆನೆ ಬಸವಾನಿ ಸಮೀಪದ ಹೊಳೆಕೊಪ್ಪ ಕಟ್ಟೆಹಕ್ಕಲು ಬಳಿಯ ಶೇಡ್ಗಾರು ಹಾಗೂ ಮೇಳಿಗೆ ಭಾಗದಲ್ಲೂ ಕಾಣಿಸಿಕೊಂಡಿದೆ ಎನ್ನಲಾಗಿದೆ. ಎನ್‌ಆರ್‌ಪುರ ಕಡೆಯಿಂದ ಹಾದಿ ತಪ್ಪಿ ಬಂದಿರುವ ಸಾಧ್ಯತೆಯಿದೆ ಎಂದೂ ಊಹಿಸಲಾಗಿದೆ.

 

ಹಾಸನ: ಕಾಡಾನೆಗಳಿಗೆ ಖೆಡ್ಡಾ ತೋಡಿ ಸರ್ಕಾರಕ್ಕೆ ಸವಾಲ್‌ ಎಸೆದ ಗ್ರಾಮಸ್ಥರು..!

Follow Us:
Download App:
  • android
  • ios