Wildlife: ಚನ್ನಗಿರಿಯಲ್ಲಿ ಕಾಡಾನೆ ಆತಂಕ: ಗ್ರಾಮಸ್ಥರು ಎಚ್ಚರಿಕೆ ಇರುವಂತೆ ಅರಣ್ಯ ಇಲಾಖೆ ಸೂಚನೆ

ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮಲಾಪುರ ಕಾಶಿಪುರ ಹಾಗೂ ಜಕಲಿ ಗ್ರಾಮಗಳಿಗೆ ನುಗ್ಗಿದ  2 ಕಾಡಾನೆಗಳು ಗ್ರಾಮದ ನಾಲ್ವರ ಮೇಲೆ ದಾಳಿ ಮಾಡಿದ್ದು, 16 ವರ್ಷದ ಬಾಲಕಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

wild elephants threat in Channagiri Forest department advises villagers to be alert at davanagere rav

ದಾವಣಗೆರೆ (ಏ.9): ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮಲಾಪುರ ಕಾಶಿಪುರ ಹಾಗೂ ಜಕಲಿ ಗ್ರಾಮಗಳಿಗೆ ನುಗ್ಗಿದ  2 ಕಾಡಾನೆಗಳು ಗ್ರಾಮದ ನಾಲ್ವರ ಮೇಲೆ ದಾಳಿ ಮಾಡಿದ್ದು, 16 ವರ್ಷದ ಬಾಲಕಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಚನ್ನಗಿರಿ ತಾಲೂಕು ಅರಿಶಿನ ಘಟ್ಟ ಬಳಿಯ ಸೂಳೆಕೇರೆಯಲ್ಲಿ ಕಾಡಾನೆಗಳು ಬೀಡುಬಿಟ್ಟಿರುವ ಹಿನ್ನೆಲೆ ಹೊನ್ನಾಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸುವ ಸಾಧ್ಯತೆ ಹೀಗಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ರೈತರು ಸಾರ್ವಜನಿಕರು ಎಚ್ಚರದಿಂದರಲು ಅರಣ್ಯ ಇಲಾಖೆ ಸೂಚನೆ ನೀಡಿದೆ.

ಸತತ 8 ದಿನಗಳ ಕಾಲ ಹಗಲು ರಾತ್ರಿ ಕಾರ್ಯಾಚರಣೆ: ವಿದೇಶಿ ಅರಿವ​ಳಿಕೆ ಮದ್ದಿಗೆ ಕೊನೆಗೂ ಶರ​ಣಾದ ಕಾಡಾನೆ!

ಹಾಲೇಶಪುರ ಬೈರನಹಳ್ಳಿ ಚನ್ನೇನಹಳ್ಳಿ ಕ್ಯಾಸಿನ ಕೆರೆ, ಕುಳಗಟ್ಟೆ ಮಲ್ಲಿಕಟ್ಟೆ ರಾಂಪುರ ಉಜ್ಜಯಿನಿಪುರ  ಹೊಳೆ ಬೆನಕನಹಳ್ಳಿ ಕಮ್ಮರಘಟ್ಟ ತರಗನಹಳ್ಳಿ ತಕ್ಕನಹಳ್ಳಿ ಮಾರ್ಗದಲ್ಲಿ ಕಾಡಾನೆಗಳು ಸಂಚರಿಸುವ ಸಾಧ್ಯತೆಗಳಿದ್ದು ರೈತರೆಲ್ಲರೂ ಎಚ್ಚರಿಕೆಯಿಂದರಲು ಸೂಚನೆ ನೀಡಿದೆ. ಅಲ್ಲದೆ ಅರಣ್ಯ ಇಲಾಖೆ ಹಾಗು ಪೊಲೀಸರಿಂದಲೂ ಆನೆ ಸಾಗುವ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ರಸ್ತೆಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಾಡಾನೆ ದಾಳಿ:

ಆಲೂರು ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ವರ್ತನೆಯನ್ನು ನೋಡಿದರೆ ಈ ಆನೆಗಳಿಗೆ ಕಾಡಿಗಿಂತ ರಸ್ತೆ ಬದಿಯ ಫುಟ್‌ಪಾತ್‌ಗಳೇ ಹೆಚ್ಚು ಇಷ್ಟಎನಿಸುತ್ತಿದೆ. ಏಕೆಂದರೆ ರಸ್ತೆಬದಿ ಬಂದು ನಿಲ್ಲುತ್ತಿರುವ ಕಾಡಾನೆಗಳಿಂದಾಗಿ ಅದೆಷ್ಟೋ ವಾಹನ ಸವಾರರು, ಚಾಲಕರು ಗಾಬರಿಗೊಂಡು ಅನಾಹುತ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.

ತಾಲೂಕಿನಾದ್ಯಂತ ಕಾಡಾನೆ ಹಾಗೂ ಮಾನವನ ನಡುವಿನ ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗಿದ್ದು ಶನಿವಾರ ರಾತ್ರಿ ಹುಸ್ಕೂರು ಗ್ರಾಮದ ದಯಾನಂದ ಎಂಬುವವರು ತಮ್ಮ ಮಗನನ್ನು ಟ್ಯೂಷನ್ನಿನಿಂದ ಮನೆಗೆ ಕರೆದುಕೊಂಡು ಬರುವಾಗ ಗ್ರಾಮದ ರಸ್ತೆಯ ಹತ್ತಿರ ಒಂಟಿ ಕಾಡಾನೆಯೊಂದು ಏಕಾಏಕಿ ರಸ್ತೆಗೆ ಬಂದಾಗ ಗಾಬರಿಯಿಂದ ಬೈಕಿನಿಂದ ಬಿದ್ದು ಪೆಟ್ಟಾಗಿದೆ. ತಕ್ಷಣ ಅವರನ್ನು ಚಿಕಿತ್ಸೆಗೆಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಮನೆಯವರ ಕೋರಿಕೆಯಂತೆ ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಒಂದು ವಾರದಲ್ಲಿ ಒಂಟಿ ಸಲಗ ದಾಳಿಗೆ ರಾತ್ರಿ ಪಾಳಿ ಮುಗಿಸಿ ಬರುತ್ತಿದ್ದ ಪೊಲೀಸರು ಸೇರಿದಂತೆ ಹಲವಾರು ಮಂದಿ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಇಷ್ಟಾದರೂ ಸಹ ಅರಣ್ಯ ಇಲಾಖೆಯವರು ಗುಂಪಿನಿಂದ ಬೇರ್ಪಟ್ಟಿರುವ ಒಂಟಿ ಸಲಗವನ್ನು ಜನನಿಬಿಡ ಪ್ರದೇಶದಿಂದ ಬೇರೆಡೆಗೆ ಓಡಿಸಲು ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕರಲ್ಲಿ ಬೇಸರ ಉಂಟು ಮಾಡಿರುವುದರ ಜೊತೆಗೆ ಆತಂಕವನ್ನು ಹೆಚ್ಚು ಮಾಡಿದೆ.

ಒಂಟಿ ಸಲಗ ಯಾವ ಭಾಗದಲ್ಲಿ ಓಡಾಡುತ್ತಿದೆ ಎಂಬುದನ್ನು ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ತಿಳಿಸಿ ಎಚ್ಚರಿಕೆ ನೀಡಬೇಕಾಗಿತ್ತು. ಅರಣ್ಯ ಇಲಾಖೆಯವರು ಪದೇ ಪದೇ ವಿಫಲರಾಗುತ್ತಿರುವುದು ಈ ಭಾಗದ ಜನರಲ್ಲಿ ಬೇಸರ ತರಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆಗೆ ಗುತ್ತಿಗೆ ಆಧಾರದಲ್ಲಿ ಹಲವಾರು ಸ್ಥಳೀಯರನ್ನು ಕೆಲಸಕ್ಕೆ ನಿಯೋಜನೆಗೊಳಿಸಿದ್ದು ಕಾಡಾನೆಗಳು ಅದರಲ್ಲೂ ಒಂಟಿ ಸಲಗ ಜನನಿಬಿಡ ಪ್ರದೇಶಕ್ಕೆ ಬಾರದಂತೆ ತಡೆಯುವುದು, ಒಂಟಿ ಸಲಗ ಬಂದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಇವರ ಕೆಲಸವಾಗಿದೆ. ಒಂಟಿ ಸಲಗ ಸೇರಿದಂತೆ ಕೆಲವು ಆನೆಗಳಿಗೆ ಕಾಲರ್‌ ಐಡಿಯನ್ನು ಅಳವಡಿಸಿದ್ದು, ಕಾಡಾನೆ ಯಾವ ಭಾಗದಲ್ಲಿ ಸಂಚರಿಸುತ್ತಿವೆ ಎಂಬುದನ್ನು ಸುಲಭವಾಗಿ ಗುರುತಿಸಿ ಸಾರ್ವಜನಿಕರ ಗಮನಕ್ಕೆ ತರಬಹುದಾಗಿದೆ.

ಪ್ರತಿ ಬಾರಿಯೂ ಕಾಡಾನೆ ದಾಳಿಯಾದಾಗ ಸ್ಥಳಕ್ಕೆ ಬಂದು ಸಾರ್ವಜನಿಕರ ಕಣ್ಣುಒರೆಸುವ ನಾಟಕವಾಡುತ್ತಿರುವ ಅರಣ್ಯ ಇಲಾಖೆಯ ಅಧಿ​ಕಾರಿಗಳು ಹಾಗೂ ಜನಪ್ರತಿನಿ​ಧಿಗಳು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವುದು ಹಾಗಿರಲಿ, ತಾತ್ಕಾಲಿಕ ಪರಿಹಾರ ಒದಗಿಸುವಲ್ಲೂ ವಿಫಲರಾಗಿದ್ದಾರೆ. ಕಾಡಾನೆ ದಾಳಿಗೆ ಸಿಲುಕಿ ಯಾರಾದರೂ ಮೃತಪಟ್ಟರೆ ಇಂತಿಷ್ಟುಪರಿಹಾರ ನೀಡಿ ಕೈ ತೊಳೆದುಕೊಳ್ಳುವ ಇಲಾಖೆ ಈ ಭಾಗದ ಜನರ ಸಮಸ್ಯೆಯನ್ನು ಅರಿಯುವಲ್ಲಿ ವಿಫಲವಾಗಿದೆ.

ಒಂಟಿ ಸಲಗದ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್

 

ಕುಂದೂರು ಕೆಂಚಮ್ಮನ ಹೊಸಕೋಟೆ ಹಾಗೂ ಪಾಳ್ಯ ಹೋಬಳಿಗಳಲ್ಲಿ ಹೆಚ್ಚಿನ ರೈತರು ಕಾಫಿ ಬೆಳೆದಾರರಾಗಿದ್ದು ಉಳಿದ ರೈತರು ಇನ್ನಿತರ ತೋಟಗಾರಿಕಾ ಬೆಳೆ ಸೇರಿದಂತೆ ಬತ್ತವನ್ನು ಬೆಳೆಯುತ್ತಾರೆ. ಆದರೆ ಕಾಡಾನೆಗಳ ಹಿಂಡು ಒಂದು ಬಾರಿ ದಾಳಿ ಮಾಡಿದರೆ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗುತ್ತದೆ. ನಾಶವಾದ ಬೆಳಗೆ ಸೂಕ್ತ ಪರಿಹಾರ ನೀಡಲು ಈವರೆಗೂ ಸರ್ಕಾರ ವಿಫಲವಾಗಿದೆ. ಇದರೊಂದಿಗೆ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೆಲಸಗಾರರು ಆನೆ ಭಯದಿಂದ ಬಾರದ ಕಾರಣ ಸೂಕ್ತ ಸಮಯದಲ್ಲಿ ಕಾಫಿ ಬೆಳೆಗೆ ಒದಗಿಸಬಹುದಾದ ಸೌಲಭ್ಯಗಳನ್ನು ಒದಗಿಸಲಾಗದೆ ಕಾಫಿ ಬೆಳೆ ಅರ್ಧಕ್ಕರ್ಧ ನಾಶವಾಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಇದ್ದು ಕಾಫಿ ಬೆಳೆಯನ್ನು ಬಿಡಲಾಗುತ್ತಿಲ್ಲ. ಇತ್ತ ಬತ್ತದ ಬೆಳೆಯನ್ನು ಮಾಡಿದರೆ ಆನೆಗಳು ಅದನ್ನು ಬಿಡುತ್ತಿಲ್ಲ.

Latest Videos
Follow Us:
Download App:
  • android
  • ios