ಸುಮಾರು 12 ವರ್ಷಗಳ ಗಂಡಾನೆಯನ್ನು ಬಂಧಿಸುವಲ್ಲಿ ಡಿಸಿಎಫ್‌ ಶಿವಶಂಕರ್‌ ನೇತೃತ್ವದ ಸಿಬ್ಬಂದಿ ತಂಡ ಮೈಸೂರು ಮತ್ತು ಹುಣಸೂರಿನಿಂದ ಬಂದಿದ್ದ ವೈದ್ಯರು ಮತ್ತು 8 ದಿನಗಳ ಪರ್ಯಂತ ಹಗಲು- ರಾತ್ರಿ ಶ್ರಮಪಡುವಂತಾಗಿತ್ತು.ಕೊನೆಗೂ ವಿದೇಶಿ ಅರಿವಳಿಕೆ ಮದ್ದಿನಿಂದ ಸೆರೆಹಿಡಿದು ನಿಟ್ಟುಸಿರುವ ಬಿಟ್ಟಿದ್ದಾರೆ.

ತೀರ್ಥಹಳ್ಳಿ (ಏ.1) : ಕಳೆದ ಮೂರು ತಿಂಗಳಿನಿಂದ ತಾಲೂಕಿನ ದೇವಂಗಿ ಗ್ರಾಮ ಪಂಚಾ​ಯಿತಿ ವ್ಯಾಪ್ತಿಯ ಜನರಲ್ಲಿ ಭಯದ ವಾತಾವರಣವನ್ನು ಮೂಡಿಸಿದ್ದ ಕಾಡಾನೆಯನ್ನು ಗುರುವಾರ ಸಂಜೆ ದೇವಂಗಿ ಸಮೀಪದ ಮಳೂರು ಗ್ರಾಮದ ಬಳಿ ಎಂಪಿಎಂ ಪ್ಲಾಂಟೇಶನ್‌(MPM Plantation)ನಲ್ಲಿ ಗುರುವಾರ ಸಂಜೆ ವೇಳೆಗೆ ಸೆರೆಹಿಡಿಯಲಾಗಿದೆ. ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಬಂಧಿಸಿರುವ ಈ ಆನೆಯನ್ನು ನಾಗರಹೊಳೆ ವನ್ಯಜೀವಿ ವಿಭಾಗ(Nagarhole Wildlife Division)ಕ್ಕೆ ಕಳುಹಿಸಿಕೊಡಲಾಗಿದೆ.

ಸುಮಾರು 12 ವರ್ಷಗಳ ಗಂಡಾನೆಯನ್ನು ಬಂಧಿಸುವಲ್ಲಿ ಡಿಸಿಎಫ್‌ ಶಿವಶಂಕರ್‌(DCF Shivashankar) ನೇತೃತ್ವದ ಸಿಬ್ಬಂದಿ ತಂಡ ಮೈಸೂರು ಮತ್ತು ಹುಣಸೂರಿನಿಂದ ಬಂದಿದ್ದ ವೈದ್ಯರು ಮತ್ತು 8 ದಿನಗಳ ಪರ್ಯಂತ ಹಗಲು- ರಾತ್ರಿ ಶ್ರಮಪಡುವಂತಾಗಿತ್ತು. ಕಾಡಾನೆಯನ್ನು ಹಿಡಿಯುವ ಸಲುವಾಗಿ ಬಂದಿದ್ದ ಪಳಗಿದ ಆನೆಗಳಿಗೆ ಮಾತ್ರವಲ್ಲದೇ ಶಾಪ್‌ರ್‍ ಶೂಟರ್‌ಗಳ ಕೈಗೂ ಸಿಗದೇ ತಪ್ಪಿಸಿಕೊಳ್ಳುತ್ತಿತ್ತು. ಈ ಗಂಡಾನೆಯನ್ನು ಅಂತಿಮವಾಗಿ ಆನೆ ಸೆರೆಹಿಡಿಯಲು ಬಳಸಿರುವ ಅರಿವಳಿಕೆ ಮದ್ದನ್ನು ವಿದೇಶದಿಂದ ತರಿಸಲಾಗಿತ್ತು ಎಂದೂ ಹೇಳಲಾಗಿದೆ.

ಬ್ರಾಹ್ಮಣರ ಮೇಲೆ ಹರತಾಳು ಹಾಲಪ್ಪನ ದಬ್ಬಾ​ಳಿಕೆ ಇನ್ಮುಂದೆ ಸಹಿ​ಸಲ್ಲ: ಬ್ರಾಹ್ಮಣ ಮಹಾ ಮಹಾ​ಸ​ಭಾ

ಗೃಹ ಸಚಿವ ಆರಗ ಜ್ಞಾನೇಂದ್ರ(Home Minister Araga jnanendra) ಮಳೂರು ಗ್ರಾಮಕ್ಕೆ ಶುಕ್ರವಾರ ಮುಂಜಾನೆ ಭೇಟಿ ನೀಡಿ, ನಿರಂತರ ಕಾರ್ಯನಿರ್ವಹಿಸಿ ಗ್ರಾಮಸ್ಥರಿಗೆ ನೆಮ್ಮದಿ ನೀಡಿದ್ದೀರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸೇವೆ ಶ್ಲಾಘಿ​ಸಿ ಅಭಿನಂದನೆಯನ್ನು ಸಲ್ಲಿಸಿದರುಸಿ ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ಆನೆ ಭಯದ ವಾತಾವರಣವನ್ನು ಮೂಡಿಸಿದ್ದು, ಅಪಾಯಕಾರಿಯಾಗಿ ವರ್ತಿಸುತ್ತಿದ್ದ ಕಾಡಾನೆಯನ್ನು ಬಂಧಿಸುವ ಕಾರ್ಯ ದೊಡ್ಡ ಸವಾಲಿನದಾಗಿತ್ತು ಎಂದರು.

ಕಾರ್ಯಾಚರಣೆಗೆ ಈ ಭಾಗದ ಜನರು ಆನೆಗಳಿಗೆ ಹುಲ್ಲು ನೀಡುವ ಮೂಲಕ ನೀಡಿದ ನೆರವೂ ಸಹ ಸಹಕಾರಿಯಾಗಿದೆ. ಕಾಡಾನೆ ಸೇರಿದಂತೆ ಬಂಧಿಸುವ ಪ್ರಾಣಿಗಳ ಜೀವಕ್ಕೆ ಅಪಾಯವಾಗದಂತೆ ಕಾರ್ಯನಿರ್ವಹಿಸುವ ಅರಿವಳಿಕೆ ಔಷಧಿಯನ್ನು ವಿದೇಶದಿಂದ ತರಿಸಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಯಿಂದಾಗಿ ಆಗುಂಬೆ ಭಾಗದಲ್ಲಿ ಜನರನ್ನು ಕಾಡುತ್ತಿರುವ ಸಲಗವನ್ನೂ ಬಂಧಿಸಲು ಪ್ರೇರಣೆ ಮತ್ತು ಉತ್ತೇಜನವೂ ದೊರೆತಿದೆ. ಆದಷ್ಟುಶೀಘ್ರದಲ್ಲಿ ಆಗುಂಬೆ ಭಾಗದಲ್ಲಿ ಸಂಚರಿಸು ಕಾಡಾನೆಯನ್ನೂ ಬಂಧಿಸಬೇಕಿದೆ ಎಂದರು.

Karnataka election 2023: ಮತದಾರರಿಗೆ ಆಮಿಷ ಶಿಕ್ಷಾರ್ಹ ಅಪರಾಧ: ಡಿಸಿ...

ಆನೆ ಕಾರ್ಯಾಚರಣೆ ತಂಡದಲ್ಲಿ ಎಸಿಎಫ್‌ ಪ್ರಕಾಶ್‌, ಆರ್‌ಎಫ್‌ಓಗಳಾದ ಮಧುಕರ್‌, ಲೋಕೇಶ್‌, ಅರಿವಳಿಕೆ ತಜ್ಞರಾದ ಡಾ.ವಿನಯ್‌, ಹುಣಸೂರಿನ ಡಾ.ಮುಜೀಬ್‌, ಡಾ. ವಾಸೀಮ್‌ ಮೈಸೂರು, ಸಿಬ್ಬಂದಿ ಪುನೀತ್‌, ಪರಶುರಾಂ, ಪ್ರವೀಣ್‌, ಸಂದೇಶ್‌, ಚೇತನ್‌, ವಿಶ್ವನಾಥ್‌, ಶ್ರೀಧರ್‌, ಶಿವಕುಮಾರ್‌, ಶಶಿಧರ್‌ ಹಾಗೂ ಮಂಜುನಾಥ್‌ ಪಾಲ್ಗೊಂಡಿದ್ದರು.