Karnataka election 2023: ಮತದಾರರಿಗೆ ಆಮಿಷ ಶಿಕ್ಷಾರ್ಹ ಅಪರಾಧ: ಡಿಸಿ

ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನಗ, ನಗದು ಇನ್ನಿತರ ಸಾಮಗ್ರಿಗಳನ್ನು ನೀಡಿ ಆಮಿಷವೊಡ್ಡುವುದು ಹಾಗೂ ಅದನ್ನು ಪಡೆಯುವುದು ಅಪರಾಧವಾಗಿದೆ. ಅಂತಹ ಕೃತ್ಯಗಳು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

Assembly elections: luring voters is a punishable offence says DC at shivamogga rav

ಶಿವಮೊಗ್ಗ (ಏ.1) : ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನಗ, ನಗದು ಇನ್ನಿತರ ಸಾಮಗ್ರಿಗಳನ್ನು ನೀಡಿ ಆಮಿಷವೊಡ್ಡುವುದು ಹಾಗೂ ಅದನ್ನು ಪಡೆಯುವುದು ಅಪರಾಧವಾಗಿದೆ. ಅಂತಹ ಕೃತ್ಯಗಳು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಮತದಾರ(Voter)ರಿಗೆ ಆಮಿಷವೊಡ್ಡಲು ಯಾವುದೇ ರೀತಿಯಲ್ಲಿ ಹಣ ವರ್ಗಾಯಿಸುವುದು, ವಿವಿಧ ಸಾಧನ ಸಾಮಗ್ರಿಗಳ ವಿತರಣೆ, ಗಿ¶್ಟ… ಓಚರ್‌ಗಳು, ಸಿಮ್‌ ಕಾರ್ಡ್‌ ಬ್ಯಾಲೆ®್ಸ…, ಪ್ರವಾಸಕ್ಕೆ ಏರ್ಪಾಡು ಮಾಡುವುದು, ಆಹಾರ ಪದಾರ್ಥಗಳ ವಿತರಣೆ, ಮದ್ಯ ಮತ್ತಿತರ ಪಾನೀಯಗಳ ವಿತರಣೆ, ವಾಹನಗಳಿಗೆ ಯಾವುದೇ ರೀತಿಯಲ್ಲಿ ಇಂಧನ ಭರಿಸುವುದು ಐಪಿಸಿ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951 ಅಡಿ ಶಿಕ್ಷಾರ್ಹ ಅಪರಾಧವಾಗಿದೆ.

ರಾಯಚೂರು: ಮಹಿಳಾ ಮತದಾರರನ್ನ ಟಾರ್ಗೆಟ್ ಮಾಡಿದ ರಾಜಕೀಯ ನಾಯಕರು!

ಜನರು ಸೂಕ್ತ ದಾಖಲೆ ಇಲ್ಲದೇ .50 ಸಾವಿರಕ್ಕಿಂತ ಅಧಿಕ ನಗದು ಕೊಂಡೊಯ್ಯಬಾರದು. ಯಾವುದೇ ಸಾಧನ, ಸಾಮಗ್ರಿಗಳನ್ನು ಸೂಕ್ತ ದಾಖಲೆಗಳಿಲ್ಲದೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಡುವುದು ಅಥವಾ ಸಾಗಾಟ ಮಾಡಬಾರದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಜಾಹೀರಾತು ನಿರ್ಬಂಧ:

ಚುನಾವಣಾ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕರಿಗೆ ಕಾಣಿಸುವ ರೀತಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೇ ಜಾಹೀರಾತುಗಳನ್ನು ಪ್ರಚುರಪಡಿಸುವುದು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮುದ್ರಣ ನಿರ್ಬಂಧ:

ಚುನಾವಣಾ ಸಂದರ್ಭದಲ್ಲಿ ಯಾವುದೇ ಚುನಾವಣಾ ಕರಪತ್ರ, ಪ್ಲೇ ಕಾರ್ಡ್‌, ಬ್ಯಾನರ್‌, ಬಂಟಿಂಗ್‌್ಸ, ಫೆಕ್ಸ್‌, ಪೋಸ್ಟರ್‌ ಇತ್ಯಾದಿಗಳನ್ನು ಮುದ್ರಿಸುವ ಸಂದರ್ಭದಲ್ಲಿ ಅದರಲ್ಲಿ ಮುದ್ರಕರ ಹೆಸರು, ವಿಳಾಸ, ಮುದ್ರಣ ಸಂಖ್ಯೆ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಮುದ್ರಣ ಕುರಿತಾಗಿ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ 3ದಿನದೊಳಗೆ ಹಾಗೂ ಸಾಮಗ್ರಿಯ ಪ್ರತಿಯನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು. ಇದರ ಉಲ್ಲಂಘನೆ ಪ್ರಜಾಪ್ರತಿನಿಧಿ ಕಾಯ್ದೆ 1951 ರ 127 (ಎ) ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.

ಪೂರ್ವಾನುಮತಿ ಕಡ್ಡಾಯ:

ಚುನಾವಣಾ ಜಾಹೀರಾತು(Election advertisement)ಗಳನ್ನು ಕೇಬಲ್‌ ನೆಟ್‌ವರ್ಕ್ ಅಥವಾ ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವ ಪೂರ್ವದಲ್ಲಿ ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದಿರಬೇಕು. ಸುಗಮ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗಾಗಿ ಈಗಾಗಲೇ ಸ್ಟಾಟಿಕ್‌ ಸರ್ವೆಯಲೆನ್ಸ್‌ ತಂಡಗಳು, ವಿಡಿಯೋ ವೀಕ್ಷಣಾ ತಂಡಗಳು ಹಾಗೂ ಫ್ಲಯಿಂಗ್‌ ಸ್ಕಾ$್ವಡ್‌ಗಳನ್ನು ರಚಿಸಲಾಗಿದೆ. ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿದ್ದಾರೆ.

ರಾತ್ರೋರಾತ್ರಿ ಚೆಕ್‌ ಪೋಸ್ಟ್‌ಗಳಿಗೆ ಡಿಸಿ, ಎಸ್‌ಪಿ ಭೇಟಿ

ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೊಳ್ಳುತ್ತಿದ್ದಂತೆ ಚುನಾವಣೆ ಆಯೋಗದ ಕಟ್ಟು ನಿಟ್ಟಿನ ಆದೇಶ ಪಾಲನೆಯಾಗುತ್ತಿದೆ. ಈಗಾಗಲೇ ಹಲವು ರೀತಿಯ ತಪಾಸಣೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಗುರುವಾರ ರಾತ್ರಿ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಸುತ್ತುಕೋಟೆ, ಅತ್ತಿಬೈಲು ಮಡಿಕೆ ಚೀಲೂರು, ಹೊಳಲೂರು ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ತಪಸಣೆ ನಡೆಸಿದರು.

ರಾತ್ರಿ 8.30ರಿಂದ 11.30ರವರೆಗೆ ಶಿವಮೊಗ್ಗ(Shivamogga) ಗ್ರಾಮಾಂತರ ಭಾಗದಲ್ಲಿ ಜಿಲ್ಲಾಧಿಕಾರಿ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ನಡೆಸಿದರು. ಅವರಿಗೆ ಜಿಪಂ ಸಿಇಒ ಸ್ನೇಹಲ್‌ ಲೋಖಂಡೆ, ಸಿಡಿಪಿಒ ಚಂದ್ರಪ್ಪ ಮತ್ತಿತರರು ಸಾಥ್‌ ನೀಡಿದರು.

ಇತ್ತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಬುಧವಾರ ರಾತ್ರಿ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ, ಚೆಕ್‌ಪೋಸ್ಟ್‌ಗಳಲ್ಲಿ ಇರುವ ಪೊಲೀಸರು ವಾಹನಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಧ್ವನಿವರ್ಧಕ- ಪಟಾಕಿ ಬಳಕೆ ಅಪರಾಧ

ಶಿವಮೊಗ್ಗ: ಸಕ್ಷಮ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯದೇ ಸ್ಥಿರ ಅಥವಾ ಚಲಿಸುತ್ತಿರುವ ವಾಹನಗಳಿಗೆ ಅಳವಡಿಸಿರುವ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸಬಾರದು ಹಾಗೂ ಪಟಾಕಿಗಳನ್ನು ಸಿಡಿಸಬಾರದು. ಇದರ ಉಲ್ಲಂಘನೆ ಅಪರಾಧವಾಗಿದ್ದು, ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಆದೇಶಿಸಿದ್ದಾರೆ.

ಸಭಾಂಗಣ, ಕಾನ್ಫರೆನ್ಸ್‌ ಕೊಠಡಿ, ಕಮ್ಯುನಿಟಿ ಸಭಾಂಗಣ ಅಥವಾ ಸಾರ್ವಜನಿಕ ತುರ್ತು ಹೊರತುಪಡಿಸಿ, ರಾತ್ರಿ ವೇಳೆ ಧ್ವನಿವರ್ಧಕಗಳು, ಪಟಾಕಿಗಳು, ಶಬ್ದ ತರುವ ಸಾಧನಗಳು ಅಥವಾ ಸಂಗೀತ ಸಾಧನಗಳನ್ನು ಬಳಸುವಂತಿಲ್ಲ.

ಮೌನ ವಲಯ (ಸೈಲೆನ್ಸ್‌ ಝೋನ್‌) ಅಥವಾ ವಸತಿ ಪ್ರದೇಶಗಳಲ್ಲಿ ರಾತ್ರಿ ವೇಳೆ ವಾಹನಗಳ ಹಾರ್ನ್‌ ಶಬ್ದ ಮಾಡುವುದು ಅಥವಾ ಪಟಾಕಿ ಸಿಡಿಸುವುದು ಅಥವಾ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಮತದಾನ ಮುಕ್ತಾಯವಾಗುವ 48 ಗಂಟೆಗಳ ಹಿಂದೆ ಮತ್ತು ಮತ ಎಣಿಕೆ ಮುಗಿಯುವವರೆಗೆ ಜಿಲ್ಲಾಧಿಕಾರಿಗಳು, ಪೊಲೀಸ್‌ ಉಪಾಧೀಕ್ಷಕರ ಅನುಮತಿ ಇಲ್ಲದೆ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸುಂತಿಲ್ಲ. ಇದರ ಉಲ್ಲಂಘನೆ ಅಪರಾಧವಾಗಿದೆ. ಇದರಿಂದಾಗಿ ಯಾವುದೇ ರೀತಿಯ ಹಾನಿ, ತೊಂದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದಲ್ಲಿ ಕಾನೂನಿನ ರೀತ್ಯಾ ಕ್ರಮ ಜರುಗಿಸಲಾಗುವುದು. ಈ ಆದೇಶದ ಉಲ್ಲಂಘನೆಯಿಂದ ಯಾವುದೇ ವ್ಯಕ್ತಿ ಅಥವಾ ಮಾನವ ಜೀವನ, ಆರೋಗ್ಯ ಮತ್ತು ಸುರಕ್ಷತೆಗೆ ಹಾನಿ, ತೊಂದರೆ, ಅಡ್ಡಿ, ಗಾಯ ಉಂಟಾದಲ್ಲಿ ಅಥವಾ ಗಲಭೆ, ಗಲಾಟೆ ಉಂಟಾದಲ್ಲಿ ಐಪಿಸಿ ಸೆಕ್ಷನ್‌ 188ರ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಈ ಆದೇಶವು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಇಡೀ ಜಿಲ್ಲೆಗೆ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.

ಶಸ್ತ್ರ, ಆಯುಧಗಳನ್ನು ಠೇವಣಿ ಇರಿಸಲು ಸೂಚನೆ

ಶಿವಮೊಗ್ಗ: ವಿಧಾನಸಭೆ ಚುನಾವಣೆ(Assembly election) ಹಿನ್ನೆಲೆ ಎಲ್ಲ ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಸ್ತ್ರ, ಆಯುಧಗಳನ್ನು ಹೊಂದಿರುವವರು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಮೀಪದ ಪೊಲೀಸ್‌ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ಡಾ. ಆರ್‌. ಸೆಲ್ವಮಣಿ ಆದೇಶಿಸಿದ್ದಾರೆ.

ಠೇವಣಿಯಲ್ಲಿ ಇಡಲಾಗುವ ಶಸ್ತ್ರ, ಆಯುಧಗಳನ್ನು ಸಂಬಂಧಿಸಿದ ಪೊಲೀಸ್‌ ಠಾಣೆ ಅಧಿಕಾರಿಗಳು ಸುರಕ್ಷಿತವಾಗಿ ಇಟ್ಟುಕೊಳ್ಳುವುದಲ್ಲದೇ ಠೇವಣಿ ಮಾಡಿದ ಶಸ್ತ್ರ, ಆಯುಧ ಪರವಾನಿಗೆದಾರರಿಗೆ ಸೂಕ್ತ ರಸೀದಿ ನೀಡಬೇಕು. ಚುನಾವಣೆಯು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಬೇಕಾಗಿದೆ. ಆದ್ದ​ರಿಂದ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

 

Bengaluru crime: ಕಡಿಮೆ ಬಡ್ಡಿ ಆಸೆ ತೋರಿಸಿ ಖೋಟಾ ನೋಟು ಚಲಾವಣೆ!

ಸರ್ಕಾರಿ ಕರ್ತವ್ಯನಿರತ ರಕ್ಷಣಾ ಸಿಬ್ಬಂದಿಗೆ, ಎಂಪಿಎಂ, ವಿಐಎಸ್‌ಎಲ… ಮತ್ತು ರಾಷ್ಟ್ರೀಕೃತ ಬ್ಯಾಂಕ್‌ ಇತ್ಯಾದಿಗಳಲ್ಲಿ ಭದ್ರತಾ ಕರ್ತವ್ಯಗಳಲ್ಲಿರುವ ಸಿಬ್ಬಂದಿ ಅಧಿಕೃತ ಪರವಾನಿಗೆಯಲ್ಲಿ ಹೊಂದಿರುವ ಆಯುಧಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ

Latest Videos
Follow Us:
Download App:
  • android
  • ios