Asianet Suvarna News Asianet Suvarna News

ಕಾಡಾನೆ ದಾಳಿ : ಬೈಕ್‌ ಬಿಟ್ಟೋಡಿ ಪ್ರಾಣ ಉಳಿಸಿಕೊಂಡ ಸವಾರ

ಕಾಡಾನೆಗಳ ಹಾವಳಿಯಿಂದ ಮಲೆನಾಡಿನ ಜನರಿಗೆ ಜೀವನ ನಡೆಸೋದೆ ದುಸ್ತರವಾಗಿದೆ. ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಬೇಕೋ, ಜೀವ ಉಳಿಸಿಕೊಳ್ಳಬೇಕೋ ಎನ್ನುವ ಗೊಂದಲ ಅವರನ್ನು ಕಾಡುತ್ತಿದೆ.

wild elephant attack biker narrowly escaped in Mudigere akb
Author
Mudigere, First Published Jul 1, 2022, 12:12 PM IST

ಚಿಕ್ಕಮಗಳೂರು :ಕಾಡಾನೆಗಳ ಹಾವಳಿಯಿಂದ ಮಲೆನಾಡಿನ ಜನರಿಗೆ ಜೀವನ ನಡೆಸೋದೆ ದುಸ್ತರವಾಗಿದೆ. ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಬೇಕೋ, ಜೀವ ಉಳಿಸಿಕೊಳ್ಳಬೇಕೋ ಎನ್ನುವ ಗೊಂದಲ ಅವರನ್ನು ಕಾಡುತ್ತಿದೆ. ಯಾವ ಸಂದರ್ಭದಲ್ಲಿ ಆತಂಕ ಎದುರಾಗುತ್ತದೋ ಎನ್ನುವ ಭಯ ಆವರಿಸಿದೆ. ಮಲೆನಾಡಿನಲ್ಲಿ ದಿನದಿಂದದಿನಕ್ಕೆ ಕಾಡಾನೆ ದಾಳಿ ಹೆಚ್ಚಾಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಜೊತೆಗೆ ಜೀವಕ್ಕೂ ಹಾನಿ ಆಗುತ್ತಿದೆ.

ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ 

ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿದ್ದು ಆತ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡ ಘಟನೆ ಚಿಕ್ಕಮಗಳೂರು (Chikkamagluru) ಜಿಲ್ಲೆ ಮೂಡಿಗೆರೆ (Mudigere) ತಾಲೂಕಿನ ಊರಬಗೆ (Urabage) ಗ್ರಾಮದಲ್ಲಿ ನಡೆದಿದೆ. ಮೂಡಿಗೆರೆಯ ಎಂ.ಐ.ಎಸ್.ಎಲ್. (MSIL)ನಲ್ಲಿ ಕೆಲಸ ಮಾಡುತ್ತಿದ್ದ ಸತ್ತಿಗನಹಳ್ಳಿ (Sattiganahalli) ಗ್ರಾಮದ ಪ್ರಭಾಕರ್ (Prabhakar) ನಿನ್ನೆ ರಾತ್ರಿ ಕೆಲಸ ಮುಗಿಸಿ 10 ಗಂಟೆಗೆ ಬೈಕಿನಲ್ಲಿ ಹಿಂದಿರುಗುವಾಗ ಕಾಡಾನೆ (Wild elephant) ದಾಳಿ ಮಾಡಿದೆ. ಪ್ರಭಾಕರ್ ಕೂಡಲೇ ಬೈಕನ್ನ ಅಲ್ಲೇ ಬಿಟ್ಟು ಓಡಿ ಹೋಗಿ ಸಾವಿನಿಂದ ಪಾರಾಗಿದ್ದಾರೆ. ಆನೆ ದಾಳಿಯಲ್ಲಿ ಬೈಕ್ ಸಂಪೂರ್ಣ ಜಖಂಗೊಂಡಿದೆ. ಆನೆ ದಾಳಿಯಿಂದ ಪ್ರಭಾಕರ್ ಕಾಲು, ತಲೆಗೆ ತೀವ್ರ ಪೆಟ್ಟಾಗಿದ್ದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ (Mudegere Govt Hospital) ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ (Hasana) ರವಾನಿಸಲಾಗಿದೆ. 

ಬಂಡೀಪುರದಲ್ಲಿ ಅಪರೂಪದ ದೃಶ್ಯ ಸೆರೆ : ಅವಳಿ ಮರಿಗಳೊಂದಿಗೆ ಕಾಣಿಸಿಕೊಂಡ ಆನೆ

ಕಾಡಾನೆಯನ್ನ ಸೆರೆ ಹಿಡಿಯುವಂತೆ ಸ್ಥಳೀಯರ ಆಗ್ರಹ

ಅರಣ್ಯ ಇಲಾಖೆ ಅಧಿಕಾರಿಗಳು (Forest Department Officer) ಆಸ್ಪತ್ರೆಗೆ ಭೇಟಿ ನೀಡಿ ಪ್ರಭಾಕರ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಅರಣ್ಯ ಅಧಿಕಾರಿಗಳು ಆನೆ ದಾಳಿ ಮಾಡಿದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಆನೆಯನ್ನ ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮೂಡಿಗೆರೆ ತಾಲೂಕಿನ ಸಾರಗೋಡು (Saragodu), ಊರಬಗೆ (Urabage), ಕೋಗಿಲೆ (Kogile), ಜನ್ನಾಪುರ (Jannapura) , ಗುತ್ತಿ (Gutti) ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ದಶಕಗಳಿಂದಳೂ ಕಾಡಾನೆ ಹಾವಳಿ ಇದೆ. ರೈತರು ಆನೆ ಹಾವಳಿಯಿಂದ ಮನೆ-ಮಠ, ಜೀವವನ್ನೂ ಕಳೆದುಕೊಂಡಿದ್ದಾರೆ. ಹಾಗಾಗಿ, ಅರಣ್ಯ ಇಲಾಖೆ ಕೂಡಲೇ ಕಾಡಾನೆಯನ್ನ ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು  ಈ ಗ್ರಾಮಗಳ ಜನ ಆಗ್ರಹಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಮುಂದುವರಿದ ಕಾಡಾನೆ ಹಾವಳಿ,ಲಕ್ಷಾಂತರ ಮೌಲ್ಯದ ಬೆಳೆ ನಾಶ

Follow Us:
Download App:
  • android
  • ios