Asianet Suvarna News Asianet Suvarna News

ಮಲೆನಾಡು ಭಾಗದಲ್ಲಿ ಮುಂದುವರಿದ ಕಾಡಾನೆ ಹಾವಳಿ,ಲಕ್ಷಾಂತರ ಮೌಲ್ಯದ ಬೆಳೆ ನಾಶ

* ಮಲೆನಾಡಿನ ಭಾಗದಲ್ಲಿ ಮುಂದುವರಿದ ಕಾಡಾನೆ ಹಾವಳಿ
* ಕಾಡಾನೆ ದಾಳಿಯಿಂದ ಮಣ್ಣು ಪಾಲಾದ ಬೆಳೆಗಳು
* ಅಡಿಕೆ, ಕಾಫಿ ತೋಟಗಳಲ್ಲಿ ದಾಂದಲೆ ನಡೆಸಿರುವ ಕಾಡಾನೆ

farmers suffering from wild elephant attacks on farms In malnad Area rbj
Author
Bengaluru, First Published Apr 26, 2022, 5:16 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಏ.26):
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಾನೆಗಳು ದಿನನಿತ್ಯ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಯನ್ನ ಹಾನಿ ಮಾಡ್ತಿವೆ. ಕಾಡಾನೆಗಳ ಉಪಟಳಕ್ಕೆ ಮಲೆನಾಡಿನ ಜನ ತತ್ತರಿಸಿ ಹೋಗಿದ್ದು ಕಾಡಾನೆಗಳನ್ನ ಸ್ಥಳಾಂತರಿಸುವಂತೆ ಅರಣ್ಯಾಧಿಕಾರಿ ಎಷ್ಟೇ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗ್ತಿಲ್ಲ.ಕಷ್ಟಪಟ್ಟು ಬೆಳೆ ಬೆಳಗಳು ಮಣ್ಣು ಪಾಲು ಆಗುತ್ತಿದ್ದು ಬೇಸತ್ತಿರೋ ರೈತರು ಅರಣ್ಯಾಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ. 

ಲಕ್ಷಾಂತರ ಮೌಲ್ಯದ ಭತ್ತ, ಕಾಫಿ, ಅಡಿಕೆ ಬೆಳೆ ನಾಶ
ಮಲೆನಾಡಿನಲ್ಲಿ ಕಾಫಿ ತೋಟ, ಅಡಿಕೆ ತೋಟಕ್ಕೆ ಕಾಡಾನೆ ದಾಳಿ ಮುಂದುವರಿದೆ.ಕಳೆದ ಒಂದು ತಿಂಗಳಿನಿಂದ ಚಿಕ್ಕಮಗಳೂರಿನ ಮಲೆನಾಡಿನ ಭಾಗದಲ್ಲಿ ಕಾಡಾನೆ ದಾಳಿ ಜಾಸ್ತಿ ಆಗಿದ್ದು ರೈತರು ಕಷ್ಟಪಟ್ಟು ಬೆಳೆ ಬೆಳೆಗಳು ಮಣ್ಣು ಪಾಲಾಗುತ್ತಿದೆ.. ರೈತರು ಅರಣ್ಯಾಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಜೊತೆಗೆ ಕಾರ್ಮಿಕರು, ಜನರು ಆನೆ ಓಡಾಟದಿಂದ ಭಯಭೀತರಾಗಿರೋ ಚಿತ್ರಣ ಇದೀಗ ಸಾಮಾನ್ಯವಾಗಿದೆ.ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನ ಕಲ್ಲುಕೊಡು, ಅಬ್ಬುಗುಡಿಗೆ ಸುತ್ತಮುತ್ತಲಿನ ಭಾಗದಲ್ಲಿ ಒಂಟಿ ಸಲಗ ಕಳೆದ ಒಂದು ತಿಂಗಳಿನಿಂದ ದಾಂದಲೆ ಮಾಡುತ್ತಿದೆ.  ಇದರಿಂದ ಲಕ್ಷಾಂತರ ಮೌಲ್ಯದ ಕಾಫಿ ಗಿಡಿ, ಅಡಿಕೆ ಬೆಳೆಯನ್ನ ನಾಶ ಮಾಡ್ತಿದೆ.

ಚಿಕ್ಕಮಗಳೂರು: ದಶಕಗಳಿಂದ ಆತಂಕದಲ್ಲೇ ಬದುಕುತ್ತಿದ್ದ ಭೂ ಒತ್ತುವರಿದಾರರಿಗೆ ಗುಡ್‌ನ್ಯೂಸ್

ಕಾಡಾನೆ ದಾಳಿಗೆ ಗ್ರಾಮಸ್ಥರು ಬೇಸತ್ತು ಹೋಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ದಿನ ಸಂಜೆಯಾಗುತ್ತಿದ್ದಂತೆ ಕಾಡಾನೆ ಮನೆಯ ಸಮೀಪವೇ ಓಡಾಡುತ್ತಿದೆ, ಇದ್ರಿಂದ ಭಯದಲ್ಲೇ ಬದುಕುವ ಸ್ಥಿತಿ ಇಲ್ಲಿನ ಗ್ರಾಮಸ್ಥರದ್ದು. ಗಣೇಶ್ ಭಟ್, ನಾರಾಯಣಗೌಡ್ರು, ಸುಧೀರ್ ಗೌಡ ಎಂಬುವರ ಕಾಫಿ ತೋಟಕ್ಕೆ ಕಾಡಾನೆ ಬಂದಿದ್ದು ಕಾಡಾನೆ ಕಂಡು ತೋಟದ ಮಾಲೀಕ ಕಂಗಲಾಗಿದ್ದಾರೆ. 

ಒಂಟಿ ಸಲಗ ಸ್ಥಳಾಂತರಕ್ಕೆ ಗ್ರಾಮಸ್ಥರು ಒತ್ತಾಯ 
ಕಾಫಿತೋಟ ದಾಳಿ ನಡೆಸುವ ಕಾಡಾನೆ ಅಡಿಕೆ, ಕಾಫಿ, ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಬೆಳೆ ಹಾನಿ ಮಾಡುತ್ತಿದೆ. ಮುಂದೊಂದು ದಿನ ಮತ್ತೊಂದು ಅನಾಹುತ ಸಂಭವಿಸೋ ಮುನ್ನವೇ ಅರಣ್ಯ ಇಲಾಖೆ ಈ ಆನೆಗೊಂದು ದಾರಿ ಕಾಣಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ. ಕಾಡಾನೆ ದಾಳಿಯಿಂದ ಅಂದಾಜು ಒಂದು ಲಕ್ಷಕ್ಕೂ ಅಧಿಕ ನಷ್ಟವನ್ನುಂಟು ಮಾಡಿದೆ ಎಂಬುಂದು ತೋಟದ ಮಾಲೀಕರ ಮಾತು. ಅರಣ್ಯ ಇಲಾಖೆ ಕೂಡಲೇ ರೈತರ ನಷ್ಟವನ್ನ ಭರಿಸಿ, ಆನೆ ಕಾಟದಿಂದ ಇಲ್ಲಿನ ಸಾರ್ವಜನಿಕರನ್ನು ಪಾರು ಮಾಡಬೇಕೆಂದು ತೋಟದ ಮಾಲೀಕ ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಕಾಡಾನೆ ಸ್ಥಳಾಂತರಿಸುವಂತೆ ಎಷ್ಟು ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಈ ಕೂಡಲೇ ಕಾಡಾನೆಯನ್ನ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಯಾವ ಕಾರಣಕ್ಕೆ ಈ ರೀತಿ ಬೇಜವಾಬ್ದಾರಿತನ ತೋರಿಸ್ತಿದ್ಯೋ ಗೊತ್ತಿಲ್ಲ. ಕಾಡು ಪ್ರಾಣಿಗಳ ಕಾಟವಿರೋ ಕಡೆಯಲ್ಲಾ ಸಾರ್ವಜನಿಕರು ಆರೋಪ ಮಾಡ್ತಿರೋದು ಅರಣ್ಯ ಇಲಾಖೆ ಮೇಲೆಯೇ. ಅದ್ದರಿಂದ ಕೂಡಲೇ ಅರಣ್ಯ ಇಲಾಖೆ ತಮ್ಮಲ್ಲಿರೋ ಲೋಪ-ದೋಷಗಳನ್ನು ಸರಿಪಡಿಸಿಕೊಂಡು, ಕಾಡು ಪ್ರಾಣಿಗಳ ಕಾಟಕ್ಕೆ ತುತ್ತಾಗಿರೋ ಇಲ್ಲಿನ ಜನರನ್ನ ರಕ್ಷಿಸಬೇಕಿದೆ.

Follow Us:
Download App:
  • android
  • ios