Shivamogga: 50 ಅಡಿ ಬಾವಿಗೆ ಬಿದ್ದ ಕಾಡುಕೋಣ ರಕ್ಷಣೆ: ಅಗ್ನಿಶಾಮಕ ದಳದಿಂದ ಯಶಸ್ವಿ ಕಾರ್ಯಾಚರಣೆ

ನಾಡಿಗೆ ಆಹಾರ ಅರಸಿ ಬಂದು ಬಾರಿ ಆಳದ ಬಾವಿಗೆ ಬಿದ್ದು ಕಾಡುಕೋಣ ವೊಂದು ಪೇಚಿಗೆ ಸಿಲುಕಿದ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ. ಹೌದು! ಸುಮಾರು ಐವತ್ತು ಅಡಿ ಆಳದ ಬಾವಿಯಲ್ಲಿ ಬಿದ್ದಿದ ಕಾಡುಕೋಣವನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಯಶಸ್ವಿಯಾಗುವ ಮೂಲಕ ಮೂಕ ಪ್ರಾಣಿಯೊಂದರ ಜೀವ ರಕ್ಷಣೆ ಮಾಡಲಾಗಿದೆ.  

wild buffalo rescue at shivamogga district gvd

ಶಿವಮೊಗ್ಗ (ಜು.09): ನಾಡಿಗೆ ಆಹಾರ ಅರಸಿ ಬಂದು ಬಾರಿ ಆಳದ ಬಾವಿಗೆ ಬಿದ್ದು ಕಾಡುಕೋಣ ವೊಂದು ಪೇಚಿಗೆ ಸಿಲುಕಿದ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ. ಹೌದು! ಸುಮಾರು ಐವತ್ತು ಅಡಿ ಆಳದ ಬಾವಿಯಲ್ಲಿ ಬಿದ್ದಿದ ಕಾಡುಕೋಣವನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಯಶಸ್ವಿಯಾಗುವ ಮೂಲಕ ಮೂಕ ಪ್ರಾಣಿಯೊಂದರ ಜೀವ ರಕ್ಷಣೆ ಮಾಡಲಾಗಿದೆ.  

ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿಯ ಹಳೆ ಇಕ್ಕೇರಿ ಗ್ರಾಮದ ಸಿದ್ದೇಶ್ವರ ದೇವಸ್ಥಾನ ಪಕ್ಕದ ನಾರಾಯಣಗೌಡ ಎಂಬವರಿಗೆ ಸೇರಿದ ಬಗರ್ ಹುಕುಂ ಜಾಗದಲ್ಲಿ ಸುಮಾರು 50 ಅಡಿ ಆಳದ ಬಾವಿಯಲ್ಲಿ ಆಕಸ್ಮಿಕವಾಗಿ ಕಾಡುಕೋಣ ಬಿದ್ದಿತ್ತು. ಸ್ಥಳೀಯರು ತಕ್ಷಣ ವನ್ಯಜೀವಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ವನ್ಯಜೀವಿ ಸಂರಕ್ಷಣಾ ವಿಭಾಗವೂ ಸಾಗರದ ಅಗ್ನಿಶಾಮಕ ದಳ ಕಚೇರಿಗೆ ಬಾವಿಯಲ್ಲಿ ಕಾಡುಕೋಣ ಬಿದ್ದಿರುವ ಮಾಹಿತಿ ನೀಡಿತ್ತು. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಸಾಗರ ಅಗ್ನಿಶಾಮಕದಳದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆ. ತಿಮ್ಮಪ್ಪರವರ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು.‌ 

ಶಿವಮೊಗ್ಗ: ಅತಿವೃಷ್ಟಿ ಹಾನಿ ಎದುರಿಸಲು ಜಿಲ್ಲಾಡಳಿತದಿಂದ ಕಟ್ಟೆಚ್ಚರ, ಡಿಸಿ ಡಾ.ಸೆಲ್ವಮಣಿ

ಲ್ಯಾಂಡರ್ ಸಹಾಯದಿಂದ 50 ಅಡಿ ಆಳದ ಬಾವಿಗೆ ಇಳಿದ ಸಿಬ್ಬಂದಿ  ಹಗ್ಗ ಮತ್ತು ಹೌಸಿನ ಸಹಾಯದಿಂದ ಸ್ಥಳೀಯರೊಂದಿಗೆ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತು. ಕೊನೆಗೂ ಬಾವಿಯಲ್ಲಿ ಬಿದ್ದಿದ್ದ ಕಾಡುಕೋಣವನ್ನು ಜೀವಂತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಯಿತು. ಬಾವಿಯಿಂದ ಮೇಲಕ್ಕೆ ಬಂದ ಕಾಡುಕೋಣ ಬದುಕಿತಾ ಬಡ ಜೀವ ಎಂಬಂತೆ ಅರಣ್ಯದತ್ತ ಓಟ ಕಿತ್ತಿತು. ಗ್ರಾಮಸ್ಥರು ಮೂಕ ಪ್ರಾಣಿಯ ಜೀವ ಉಳಿಯಿತಲ್ಲ ಎಂದು ನಿಟ್ಟುಸಿರು ಬಿಟ್ಟರು.

ಕಾಡುಬಿಟ್ಟು ಮರೋಳಿಗೆ ಬಂದ ಕಾಡುಕೋಣ ಜೋಡಿ: ನಗರದ ಹೊರವಲಯದ ಮರೋಳಿ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ಜೋಡಿ ಕಾಡುಕೋಣಗಳು ಮಂಗಳವಾರ ಬೆಳಗ್ಗೆ ಕಾಣಿಸಿಕೊಂಡಿದ್ದು, ಅವುಗಳನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಮಂಗಳವಾರ ಬೆಳಗ್ಗೆ ಮರೋಳಿಯ ಸೂರ್ಯ ನಾರಾಯಣ ದೇವಾಲಯದ ಬಳಿ ರಸ್ತೆ ಬದಿಯಲ್ಲಿ ಎರಡು ಕಾಡುಕೋಣಗಳು ಪ್ರತ್ಯಕ್ಷವಾಗಿವೆ. ಸ್ಥಳೀಯರು ಇದನ್ನು ಗಮನಿಸಿ ಓಡಿಸಲು ನೋಡಿದಾಗ ಹೆದರಿದ ಕಾಡುಕೋಣಗಳು ದಾರಿ ಕಾಣದೆ ಅತ್ತಿಂದಿತ್ತ ಓಡಾಡತೊಡಗಿವೆ.

ದಕ್ಷಿಣ ಭಾರತದ ಸಂಸದರ ನೇತೃತ್ವದಲ್ಲಿ ಅಡಿಕೆಗೆ ಉತ್ತಮ ಬೆಲೆ ಉಳಿಸುವ ಕಾರ್ಯ: ಬಿ.ವೈ. ರಾಘವೇಂದ್ರ

ಮರೋಳಿ ಪರಿಸರದಲ್ಲಿ ತೋಟಗಳು ಮಾತ್ರವಲ್ಲದೆ, ಕಾಡಿನ ವಾತಾವರಣ ಇರುವುದರಿಂದ ಅಲ್ಲಿ ಕಾಡುಕೋಣಗಳು ಆಶ್ರಯ ಪಡೆದಿವೆ ಎನ್ನಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾಡುಕೋಣಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ. ಕಾಡುಕೋಣಗಳು ಕಂಡುಬಂದಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಇದೇ ಪರಿಸರದಲ್ಲಿ ವರ್ಷದ ಹಿಂದೆ ಚಿರತೆಯೊಂದು ಅನೇಕ ದಿನಗಳ ಕಾಲ ಸ್ಥಳೀಯರ ನಿದ್ದೆಗೆಡಿಸಿತ್ತು. ರಾತ್ರಿ ವೇಳೆಯಲ್ಲಿ ಒಂದೊಂದಾಗಿ ಊರಿನ ನಾಯಿಗಳನ್ನು ಕೊಂಡೊಯ್ಯುತ್ತಿದ್ದ ಚಿರತೆ, ದಿನಗಳೆದಂತೆ ನಾಯಿಗಳು ಕಡಿಮೆಯಾಗಿ ಹಾಡಹಗಲೇ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟು ಹಿಡಿಯಲು ಹರಸಾಹಸ ಮಾಡಿದರೂ ಸಾಧ್ಯವಾಗಿರಲಿಲ್ಲ. ಕೆಲ ದಿನಗಳ ಬಳಿಕ ಚಿರತೆ ತನ್ನ ಪಾಡಿಗೆ ಕಾಡು ಸೇರಿಕೊಂಡಿತ್ತು.

Latest Videos
Follow Us:
Download App:
  • android
  • ios