ದಕ್ಷಿಣ ಭಾರತದ ಸಂಸದರ ನೇತೃತ್ವದಲ್ಲಿ ಅಡಿಕೆಗೆ ಉತ್ತಮ ಬೆಲೆ ಉಳಿಸುವ ಕಾರ್ಯ: ಬಿ.ವೈ. ರಾಘವೇಂದ್ರ
* ರೈತರು ಬೆವರು ಸುರಿಸಿದರೆ ಮಾತ್ರ ನಾವು ಒಂದು ತುತ್ತು ಅನ್ನವನ್ನು ತಿನ್ನಬಹುದು
* ರೈತನಿಗೆ ಕೃಷಿ ಸಮ್ಮಾನ್ ಹೆಸರಿನಲ್ಲಿ ಸನ್ಮಾನ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ
* ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಮೂಲಕ ಉದ್ಯೋಗ ಸೃಷ್ಟಿ
ಶಿವಮೊಗ್ಗ(ಜು.08): ರೈತರು ಬೆವರು ಸುರಿಸಿದರೆ ಮಾತ್ರ ನಾವು ಒಂದು ತುತ್ತು ಅನ್ನವನ್ನು ತಿನ್ನಬಹುದು ಆದರೆ ಅಂತಹ ಶ್ರೇಷ್ಠ ಕೆಲಸವನ್ನು ಮಾಡುತ್ತಿರುವ ರೈತನಿಗೆ ಕೃಷಿ ಸಮ್ಮಾನ್ ಹೆಸರಿನಲ್ಲಿ ಸನ್ಮಾನ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ, ಕೇವಲ ಭದ್ರಾವತಿ ತಾಲೂಕಿನಲ್ಲಿ 51.50 ಕೋಟಿ ಹಣವನ್ನು 23449 ರೈತರಿಗೆ ನೀಡಿದ್ದೇವೆ. ಅಡಿಕೆ ಟಾಸ್ಕ್ ಪೋರ್ಸ್ ಮೂಲಕ ದಕ್ಷಿಣ ಭಾರತದ ಸಂಸತ್ ಸದಸ್ಯರ ನೇತೃತ್ವದಲ್ಲಿ ಅಡಿಕೆಯ ಅಕ್ರಮ ಆಮದು ತಡೆದು ಉತ್ತಮ ಬೆಲೆ ಉಳಿಸುವ ಕಾರ್ಯ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಭದ್ರಾವತಿಯಲ್ಲಿ ಹೇಳಿದ್ದಾರೆ.
ಇಂದು(ಶುಕ್ರವಾರ) ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರಸ್ವಾಮಿ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಸಂಸದರಾದ ಬಿ. ವೈ. ರಾಘವೇಂದ್ರ ಅವರು ನೆರವೇರಿಸಿದರು.
ವಮೊಗ್ಗ: ತಾವರೆಕೊಪ್ಪದ ಟೈಗರ್ ಅಂಡ್ ಲಯನ್ ಸಫಾರಿಯ ಸಿಂಹ ಸಾವು
ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಮೂಲಕ ಉದ್ಯೋಗ ಸೃಷ್ಟಿ, ಉತ್ತಮ ಉನ್ನತ ಶಿಕ್ಷಣ ವ್ಯವಸ್ಥೆ, ಹಾಗೂ ನೂತನ ರೈಲ್ವೇ ಸಂಪರ್ಕ, ರೈಲ್ವೇ ಓವರ್ ಬ್ರಿಡ್ಜ್ ಕೆಲಸ ಆಗುತ್ತಿದೆ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಸವೇಶ್ವರ ಸೇವಾ ಸಂಘದ ಅಧ್ಯಕ್ಷರಾದ ಮಹೇಶ್ವರಪ್ಪ, ಮಂಗೋಟೆ ರುದ್ರೇಶ್, ಬಿಜೆಪಿ ಮಂಡಲ ಅಧ್ಯಕ್ಷರಾದ ಪ್ರಭಾಕರ್, ಶ್ರೀನಾಥ್.ಆನಂದ್, ಮಂಜುನಾಥ್, ಸಮಾಜದ ಅಧ್ಯಕ್ಷರಾದ ತೀರ್ಥಪ್ಪ, ನಾಗತಿಬೆಳಗಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮನೋಹರಿ, ನಗರ ಸಭೆ ಸದಸ್ಯರಾದ ಮೋಹನ್, ಗ್ರಾ.ಪಂ ಸದಸ್ಯರು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.