Asianet Suvarna News Asianet Suvarna News

ಕಾಡುಕೋಣಗಳ ಸರಣಿ ಮರಣ: ತಿಳಿದಿಲ್ಲ ಕಾರಣ

ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದೊಂದು ತಿಂಗಳಲ್ಲಿ ಎರಡು ಕಾಡುಕೋಣಗಳು ಅಸಹಜವಾಗಿ ಮೃತಪಟ್ಟಿವೆ. ಮೃತ ಕಾಡುಕೋಣಗಳ ದೇಹದ ಕೆಲ ಭಾಗಗಳನ್ನು ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ.

Wild Buffalo dies in doubtful Circumstances at Shivamogga
Author
Bangalore, First Published Jul 14, 2019, 10:45 AM IST

ಶಿವಮೊಗ್ಗ (ಜು.14): ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದೊಂದು ತಿಂಗಳಲ್ಲಿ ಎರಡು ಕಾಡುಕೋಣಗಳು ಅಸಹಜವಾಗಿ ಮೃತಪಟ್ಟಿದ್ದು, ಇದು ಅರಣ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. ಮೃತ ಕಾಡುಕೋಣಗಳ ದೇಹದ ಕೆಲ ಭಾಗಗಳನ್ನು ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ.

ಫೊರೆನ್ಸಿಕ್ ಲ್ಯಾಬ್‌ ವರದಿ ಬಂದ ಬಳಿಕವಷ್ಟೇ ಕಾಡುಕೋಣಗಳ ಸಾವಿಗೆ ನಿಖರ ಕಾರಣ ತಿಳಿಯಬಹುದಾಗಿದೆ ಎಂದು ವನ್ಯ ಜೀವಿ ವಿಭಾಗದ ಡಿಎಫ್‌ಒ ಚಂದ್ರಶೆೀಖರ್ ಹೇಳಿದ್ದಾರೆ. ಇಲಾಖೆಯ ಪ್ರಕಾರ ಎರಡು ಕಾಡುಕೋಣಗಳು ಮೃತಪಟ್ಟಿವೆ. ಆದರೆ ಸ್ಥಳೀಯರು ನಾಲ್ಕು ಕಾಡುಕೋಣ ಮೃತಪಟ್ಟಿವೆ ಎನ್ನುತ್ತಾರೆ.

ತಾಲೂಕಿನ ಹಾರೋಗೊಳಿಗೆ ಗ್ರಾಮದ ಸುತ್ತಮುತ್ತಲೇ ಕಾಡುಕೋಣಗಳು ಮೃ ಪಟ್ಟಿರುವುದು ವಿಶೇಷವಾಗಿದೆ. ಶುಕ್ರವಾರ ಹಾರೋಗೊಳಿಗೆ ಗ್ರಾ.ಪಂ. ವ್ಯಾಪ್ತಿಯ ಹುಲಿಗುದ್ದಿನ ಗುಡ್ಡದಲ್ಲಿ ಕಾಡುಕೋಣವೊಂದರ ಶವ ಪತ್ತೆಯಾಯಿತು. ಇದಕ್ಕೆ ಅನತಿ ದೂರದಲ್ಲಿ ಇನ್ನೊಂದು ಮೃತ ಪಟ್ಟಿದೆ ಎನ್ನುವುದು ಗ್ರಾಮಸ್ಥರ ಮಾತು. ಆದರೆ ಇಲಾಖೆ ಇದನ್ನು ದೃಢಪಡಿಸಿಲ್ಲ. ಕಳೆದ 10 ದಿನಗಳ ಹಿಂದೆ ಕೂಡ ಇದೇ ಪ್ರದೇಶದಲ್ಲಿ ಕಾಡುಕೋಣವೊಂದರ ಮೃತದೇಹ ಪತ್ತೆಯಾಗಿತ್ತು.

ಸರಣಿ ಸಾವು ಆತಂಕ:

ಸಾಮಾನ್ಯವಾಗಿ ಹೀಗೆ ಒಂದರ ಹಿಂದೆ ಒಂದು ಕಾಡುಕೋಗಳು ಅಥವಾ ಯಾವುದೇ ಕಾಡು ಪ್ರಾಣಿ ಗಳು ಸಾಯುತ್ತಾ ಹೋದರೆ ಇಲಾಖೆ ತಕ್ಷಣ ಜಾಗೃತವಾಗುತ್ತದೆ. ಇದಕ್ಕೆ ಕಾರಣ ಹುಡುಕಲು ಮುಂದಾಗುತ್ತದೆ. ಆದರೆ ಈ ಸಾವಿನ ವಿಚಾರದಲ್ಲಿ ಇಲಾಖೆ ಆ ಮಟ್ಟಿನ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.

ಸಾಮಾನ್ಯವಾಗಿ ಕಾಡುಪ್ರಾಣಿಗಳ ಸಾವಿಗೆ ಕಾರಣಗಳು:

ಹೀಗೆ ಕಾಡುಪ್ರಾಣಿಗಳು ಸಾಯಲು ಮೂರ‌್ನಾಲ್ಕು ಕಾರಣಗಳನ್ನು ಮುಂದಿಡಲಾ ಗುತ್ತದೆ. ವಯೋಸಹಜವಾದ ಸಾವು, ಇನ್ನೊಂದು ಪ್ರಾಣಿಯ ಜೊತೆಗಿನ ಕಾದಾಟದಲ್ಲಿ ಗಾಯಗೊಂಡು ಸಾವು, ಅಘಾತ ದಿಂದ ಹೃದಯಾಘಾತಕ್ಕೆ ಒಳಗಾಗುವುದು, ಸಾಂಕ್ರಾಮಿಕ ರೋಗಕ್ಕೆ ಒಳಗಾಗುವುದು. ಸಾಮಾನ್ಯವಾಗಿ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುವುದು ಬೇಸಿಗೆಯಲ್ಲಿ. ಮಳೆಗಾಲದಲ್ಲಿ ಈ ರೀತಿ ಆಗುವುದಿಲ್ಲ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಸಾವಿನ ಬಗ್ಗೆ ಗೊಂದಲ:

ಮೇಲ್ನೋಟಕ್ಕೆ ಮೃತ ಕಾಡುಕೋಣಗಳ ಮೈಯಲ್ಲಿ ಭಾರೀ ಗಾಯಗಳು ಇರಲಿಲ್ಲ. ಹೀಗಾಗಿ ಕಾದಾಟದ ಸಾವು ಇರಲಾರದು ಎಂಬುದು ಒಂದು ಅಭಿಪ್ರಾಯ. ಜಿಂಕೆಗಳು ಶಾಕ್‌ಗೆ ಒಳಗಾಗಿ ಹೃದಯಾಘಾತಕ್ಕೆ ಒಳಗಾಗುತ್ತವೆ. ಆದರೆ ಕಾಡುಕೋಣಗಳು ಈ ರೀತಿಯ ಹೃದಯಾಘಾತಕ್ಕೆ ಒಳಗಾಗುವುದಿಲ್ಲ ಎನ್ನುವುದು ಕೂಡ ವನ್ಯಜೀವಿ ತಜ್ಞರ ಅಭಿಪ್ರಾಯ. ಹೀಗಾಗಿಯೇ ಈ ಕಾಡುಕೋಣಗಳ ಸಾವು ಅಧಿಕಾರಿಗಳ ತಲೆ ತಿನ್ನುತ್ತಿದೆ.

ಮೃತಪಟ್ಟಿದ್ದು ಕಾಡಿನಲ್ಲಲ್ಲ, ನಾಡಿನ ಸಮೀಪ:

ಕಾಡುಕೋಣಗಳು ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿಲ್ಲ. ಬದಲಾಗಿ ಊರಿಗೆ ಹೊಂದಿಕೊಂಡಿರುವ ಸ್ಥಳ ದಲ್ಲಿಯೇ ಮೃತಪಟ್ಟಿವೆ. ಕೆಲ ತಿಂಗಳಿಂದ ಇವೆಲ್ಲವೂ ಗ್ರಾಮದ ಜಮೀನಿನಲ್ಲಿ ಸಿಕ್ಕಾಪಟ್ಟೆ ಲೂಟಿ ಮಾಡುತ್ತಿದ್ದವು ಎನ್ನುವುದು ಗ್ರಾಮಸ್ಥರ ಮಾತು. ಇವನ್ನು ನಿಯಂತ್ರಿಸಲೇ ಸಾಧ್ಯ ವಾಗುತ್ತಿರಲಿಲ್ಲ. ಇಲಾಖೆಗೆ ಹೇಳಿದರೆ ಕ್ರಮ ಕೈಗೊಳ್ಳುತ್ತಿ ರಲಿಲ್ಲ ಎನ್ನುತ್ತಾರೆ. ಕಾಡುಕೋಣಗಳ ಸರಣಿ ಸಾವು ಆತಂಕಕ್ಕೆ ಕಾರಣವಾಗಿದೆ. ಫೊರೆನ್ಸಿಕ್ ಲ್ಯಾಬ್ ವರದಿ ಬಂದ ಬಳಿಕವಷ್ಟೇ ಕಾರಣ ತಿಳಿಯಲಿದೆ.

ಆನೆ ಆಯ್ತು ಈಗ ಕಾಡುಕೋಣಗಳ ಸರಣಿ ಸಾವು

 

Follow Us:
Download App:
  • android
  • ios