ಬೆಳಗಾವಿ[ಸೆ.26]: ತನ್ನ ಪತಿಯ ಸಾವಿನ ಸುದ್ದಿ ಕೇಳಿದ ಕೇವಲ ಒಂದೇ ಗಂಟೆಯೊಳಗೆ ಪತ್ನಿಯೂ ಸಾವನ್ನಪ್ಪಿದ್ದಾರೆ. ಈ ಮೂಲಕ ವೃದ್ಧ ದಂಪತಿಯೊಂದು ಸಾವಿನಲ್ಲೂ ಒಂದಾಗಿರುವ ಘಟನೆ ಬೆಳಗಾವಿ ಜಿ್ಜ್ಲಿಲೆಯ ಭಾಗ್ಯ ನಗರದಲ್ಲಿ ನಡೆದಿದೆ.

ಹೌದು ನಿವೃತ್ತ ಶಿಕ್ಷಕ ಗುರುರಾಜ ಅಧ್ಯಾಪಕ ( 89) ಹಾಗೂ ಪತ್ನಿ ನಿವೃತ್ತ ಶಿಕ್ಷಕಿ ಅಲಕಾ ಅಧ್ಯಾಪಕ (84) ಮೃತರಾದ ವೃದ್ಧ ದಂಪತಿ. ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಗುರುರಾಜ ನಿಧನರಗಿದ್ದು, ಈ ಸುದ್ದಿ ಕೇಳಿದ ಪತ್ನಿ ಅಲಕಾ ಅಧ್ಯಾಪಕ ಆಘಾತಕ್ಕೊಳಗಾಗಿದ್ದಾರೆ. ದರಿಂದ ಚೇತರಿಸಿಕೊಳ್ಳದ ಅಲಕಾ ಕೇವಲ 45 ನಿಮಿಷಗಳೊಳಗೆ ಕೊನೆಯುಸಿರೆಳೆದಿದ್ದಾರೆ.

ಎಲ್ಲಾ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುರುರಾಜ ಅವರು ಸರಸ್ವತಿ ಪ್ರೌಢಶಾಲೆಯಲ್ಲಿ ಪ್ರಧಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರೆ, ಪತ್ನಿ ಅಲಕಾ ಅವರು ಗೋಮಟೇಶ ಪ್ರೌಢಶಾಲೆಯಲ್ಲಿ ಪ್ರಧಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ವೃದ್ಧ ದಂಪತೊಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಬಂದು ಅಂತಿಮ ದರ್ಶನ ಪಡೆದಿದ್ದಾರೆ.

ನೆರೆ ಸಂತ್ರಸ್ತ ರೈತರಿಗೆ ಕೋಲ್ಕತ್ತಾ ಕೋರ್ಟ್ ಬಂಧನ ವಾರಂಟ್!.

ಮೃತ ದಂಪತಿಗೆ ಮೂವರು ಪುತ್ರಿಯರಿದ್ದಾರೆ. ಗುರುರಾಜ ಅಧ್ಯಾಪಕ ಅವರು ಸಾಹಿತಿಯೂ ಆಗಿದ್ದರು. ಹಲವಾರು ಕೃತಿಗಳನ್ನು ರಚಿಸಿದ್ದಾರೆ.