ಬೆಳಗಾವಿ (ಸೆ. 24): ಮಲಪ್ರಭಾ ನದಿ ಪ್ರವಾಹ, ಮೂರ್ನಾಲ್ಕು ವರ್ಷಗಳ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಸಾಲ ಬಾಕಿ ಉಳಿಸಿಕೊಂಡಿದ್ದ ರೈತನೊಬ್ಬನಿಗೆ ಖಾಸಗಿ ಹಣಕಾಸು ಸಂಸ್ಥೆಗಳು ಕೋಲ್ಕತಾ ಕೋರ್ಟ್‌ನಿಂದ ಬಂಧನ  ವಾರಂಟ್ ಜಾರಿಗೊಳಿಸುವುದು ನಿಂತಿಲ್ಲ. ನೆರೆಸಂತ್ರಸ್ತರಿಂದ ಬಲವಂತವಾಗಿ ಸಾಲ ವಸೂಲಿ ಮಾಡದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ಹೊರತಾಗಿಯೂ ಫೈನಾನ್ಸ್ ಕಂಪನಿ ವಾರಂಟ್ ಜಾರಿಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದ ರೈತ ಸಹೋದರರಾದ ನಿಂಗಪ್ಪ ಬಸಪ್ಪ ಲಕ್ಕನ್ನವರ ಮತ್ತು ನೀಲಕಂಠ ಬಸಪ್ಪ ಲಕ್ಕನ್ನವರ ಎಂಬುವವರಿಗೆ ಎಲ್ ಆ್ಯಂಡ್ ಟಿ ಫೈನಾನ್ಸ್ ಸಂಸ್ಥೆ ಕೋಲ್ಕತಾ ಕೋರ್ಟ್ ಮೂಲಕ ಅರೆಸ್ಟ್ ವಾರಂಟ್ ಹೊರಡಿಸಿದೆ.

5 ವರ್ಷಗಳ ಹಿಂದೆ ನಿಂಗಪ್ಪ ಬಸಪ್ಪ ಲಕ್ಕನ್ನವರ ತಮ್ಮ ಹಳೇ ಟ್ರ್ಯಾಕ್ಟರ್ ಅನ್ನು ಎಕ್ಸ್‌ಚೇಂಜ್ ಆಫರ್‌ನಲ್ಲಿ ₹3.60 ಲಕ್ಷಕ್ಕೆ ಮಾರಾಟ  ಮಾಡಿ ಎಲ್ ಆ್ಯಂಡ್ ಟಿ ಫೈನಾನ್ಸ್‌ದಿಂದ 20 ರಲ್ಲಿ ₹4 ಲಕ್ಷ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದರು. ನಂತರ ಪ್ರತಿ 6 ತಿಂಗಳಿಗೊಮ್ಮೆ ₹ 81 ಸಾವಿರದ 2 ಕಂತು ಸರಿಯಾದ ಸಮಯಕ್ಕೆ ಪಾವತಿಸಿದ್ದರು.