ದೊಡ್ಡ ಅಂತರದಲ್ಲಿ ಚುನಾವಣೆಯಲ್ಲಿ ಗೆದ್ದವರು!
1952ರಿಂದ ಈವರೆಗೆ ನಡೆದ ಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುವುದರ ಮೂಲಕ ಅಭ್ಯರ್ಥಿಗಳು ಗಮನಸೆಳೆದಿದ್ದಾರೆ.
ಉಗಮ ಶ್ರೀನಿವಾಸ್
ತುಮಕೂರು : 1952ರಿಂದ ಈವರೆಗೆ ನಡೆದ ಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುವುದರ ಮೂಲಕ ಅಭ್ಯರ್ಥಿಗಳು ಗಮನಸೆಳೆದಿದ್ದಾರೆ.
1983ರಲ್ಲಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೂಡ್ಲೇಗೌಡ ಅವರು 42 ಸಾವಿರದ 15 ಮತಗಳನ್ನು ಪಡೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಎನ್. ಕೃಷ್ಣಯ್ಯ ವಿರುದ್ಧ 27 ಸಾವಿರದ 215 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 1985ರಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ವೈ.ಕೆ. ರಾಮಯ್ಯ ಅವರು 49 ಸಾವಿರದ 309 ಮತಗಳನ್ನು ಪಡೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಂದಾನಯ್ಯ ಅವರನ್ನು 24 ಸಾವಿರದ 302 ಮತಗಳ ಅಂತರದಿಂದ ಗೆದ್ದಿದ್ದರು. ಅಂದಾನಯ್ಯ ಅವರು 25 ಸಾವಿರದ 7 ಮತಗಳನ್ನು ಪಡೆದಿದ್ದರು.
1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಎಂ. ಮಂಜುನಾಥ್ ಅವರು 61052 ಮತಗಳನ್ನು ಪಡೆದು ಜನತಾದಳದಿಂದ ಸ್ಪರ್ಧಿಸಿದ್ದ ಬಿ.ಎಸ್. ಚಂದ್ರಶೇಖರಯ್ಯ ವಿರುದ್ಧ 48 ಸಾವಿರದ 269 ಮತಗಳ ಅಂತರದಿಂದ ಜಯಸಾಧಿಸಿದ್ದರು. ಚಂದ್ರಶೇಖರಯ್ಯನವರು 12 ಸಾವಿರದ 283 ಮತಗಳನ್ನು ಪಡೆದಿದ್ದರು. ಹಾಗೆಯೇ ಇದೇ ವರ್ಷ ಪಾವಗಡ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೆಂಕಟರಮಣಪ್ಪ ಅವರು 45 ಸಾವಿರದ 628 ಮತಗಳನ್ನು ಪಡೆದು ಜೆಡಿಯಿಂದ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ ಅವರ ವಿರುದ್ಧ 24 ಸಾವಿರದ 763 ಮತಗಳಿಂದ ಗೆದ್ದಿದ್ದರು. ಅಲ್ಲದೇ ಇದೇ ವರ್ಷ ತುರುವೇಕೆರೆಯಿಂದ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್. ರುದ್ರಪ್ಪ ಅವರು 43 ಸಾವಿರದ 803 ಮತಗಳನ್ನು ಪಡೆದು ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಬಿ. ನಂಜೇಗೌಡರ ವಿರುದ್ಧ 28 ಸಾವಿರದ 217 ಮತಗಳಿಂದ ಗೆಲುವು ಸಾಧಿಸಿದ್ದರು.
ಭ್ರಷ್ಟಾಚಾರವನ್ನು ಎಂದೆಂದಿಗೂ ಬಿಜೆಪಿ ಸಹಿಸುವುದಿಲ್ಲ: ಕೇಂದ್ರ ಸಚಿವ ರಾಜನಾಥ್ ಸಿಂಗ್
1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೆಂಕಟರಮಣಪ್ಪ ಅವರು 65 ಸಾವಿರದ 999 ಮತಗಳನ್ನು ಪಡೆದು ಜೆಡಿಯುನಿಂದ ಸ್ಪರ್ಧಿಸಿದ್ದ ಸೋಮ್ಲಾನಾಯಕ್ ವಿರುದ್ಧ 21 ಸಾವಿರದ 102 ಮತಗಳ ಅಂತರದಿಂದ ಗೆದ್ದಿದ್ದರು. ಆ ಚುನಾವಣೆಯಲ್ಲಿ ಸೋಮ್ಲಾನಾಯಕ್ 44 ಸಾವಿರದ 897 ಮತಗಳನ್ನು ಪಡೆದಿದ್ದರು.
ಹಾಗೆಯೇ ಅದೇ ವರ್ಷ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪಿ.ಎಂ. ರಂಗನಾಥಪ್ಪ ಅವರು 42 ಸಾವಿರದ 263 ಮತಗಳನ್ನು ಪಡೆದು ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಿ. ಸತ್ಯನಾರಾಯಣ ಅವರನ್ನು 25 ಸಾವಿರ 654 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿ. ಸತ್ಯನಾರಾಯಣ 16609 ಮತಗಳನ್ನು ಪಡೆದಿದ್ದರು.
ಬಿಜೆಪಿ ಅಧಿಕಾರದಲ್ಲಿರುವವರೆಗೆ ಅಚ್ಛೇದಿನ್ ಬರುವುದಿಲ್ಲ: ಡಿ.ಕೆ.ಶಿವಕುಮಾರ್
1999ರಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್. ನಾರಾಯಣ್ ಅವರು 43 ಸಾವಿರದ 803 ಮತಗಳನ್ನು ಪಡೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಎನ್. ಮೂರ್ತಿ ಅವರ ವಿರುದ್ಧ 24 ಸಾವಿರದ 96 ಮತಗಳಿಂದ ಗೆಲುವು ಸಾಧಿಸಿದ್ದರು. ಇದೇ ವರ್ಷ ಮಧುಗಿರಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಜಿ. ಪರಮೇಶ್ವರ್ ಅವರು 71 ಸಾವಿರದ 895 ಮತಗಳನ್ನು ಪಡೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗಂಗಹನುಮಯ್ಯ ವಿರುದ್ಧ 55 ಸಾವಿರದ 802 ಮತಗಳ ಅಂತರದಿಂದ ಗೆದ್ದಿದ್ದರು.
2004ರಲ್ಲಿ ನಡೆದ ಚುನಾವಣೆಯಲ್ಲಿ ಕುಣಿಗಲ್‌ನಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್. ನಿಂಗಪ್ಪ ಅವರು 52 ಸಾವಿರದ 370 ಮತಗಳನ್ನು ಪಡೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುದ್ದಹನುಮೇಗೌಡರ ವಿರುದ್ಧ 19090 ಮತಗಳ ಅಂತರದಿಂದ ಗೆದ್ದಿದ್ದರು. 2008ರಲ್ಲಿ ಚಿಕ್ಕನಾಯಕನಹಳ್ಳಿಯಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸುರೇಶಬಾಬು ಅವರು 67 ಸಾವಿರದ 46 ಮತಗಳನ್ನು ಪಡೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಕಿರಣಕುಮಾರ್ ವಿರುದ್ಧ 29 ಸಾವಿರದ 44 ಮತಗಳ ಅಂತರದಿಂದ ಗೆದ್ದಿದ್ದರು. ಅದೇ ವರ್ಷ ತುಮಕೂರು ಗ್ರಾಮಾಂತರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ. ಸುರೇಶಗೌಡ ಅವರು 60 ಸಾವಿರದ 904 ಮತಗಳನ್ನು ಪಡೆದು ಜೆಡಿಎಸ್‌ನ ನಿಂಗಪ್ಪ ವಿರುದ್ಧ 28 ಸಾವಿರದ 392 ಮತಗಳ ಅಂತರದಿಂದ ಗೆದ್ದಿದ್ದರು. ಶಿರಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಟಿ.ಬಿ.ಜಯಚಂದ್ರ ಅವರು 60 ಸಾವಿರದ 793 ಮತಗಳನ್ನು ಪಡೆದು ಜೆಡಿಎಸ್‌ನ ಸತ್ಯನಾರಾಯಣ ವಿರುದ್ಧ 26 ಸಾವಿರದ 496 ಮತಗಳ ಅಂತರದಿಂದ ಸೋಲಿಸಿದ್ದರು.