Asianet Suvarna News Asianet Suvarna News

ಮೈಸೂರು ಝೂಗೆ ವಿಮಾನದಲ್ಲಿ ಬಂದ ಬಿಳಿ ಘೇಂಡಾಮೃಗ

ಸಿಂಗಾಪುರದಿಂದ ಬಿಳಿ ಘೇಂಡಾಮೃಗಗಳನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ತರಲಾಗಿದೆ. ಸಿಂಗಪೂರ ಮೃಗಾಲಯದಿಂದ ವಿಮಾನ ಮಾರ್ಗದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆತಂದು ನಂತರ ರಸ್ತೆ ಮಾರ್ಗವಾಗಿ ಮೈಸೂರು ಝೂಗೆ ಕರೆತರಲಾಯಿತು. ಮೂರು ವರ್ಷಗಳ ಅಂತರದಲ್ಲಿ ಮೈಸೂರು ಮೃಗಾಲಯ ಬಿಳಿ ಘೇಂಡಾಮೃಗವನ್ನು ಮತ್ತೊಮ್ಮೆ ಪ್ರದರ್ಶಿಸುವ ಅವಕಾಶವನ್ನು ಪಡದಿದೆ.

White rhinoceros arrives at Mysore Zoo from Singapore
Author
Bangalore, First Published Aug 15, 2019, 9:31 AM IST

ಮೈಸೂರು(ಆ.15): ಸಿಂಗಾಪುರ ಮೃಗಾಲಯದ ಆಫ್ರಿಕಾ ಬಿಳಿ ಘೇಂಡಾಮೃಗಗಳು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಅತಿಥಿಯಾಗಿ ಆಗಮಿಸಿವೆ.

ಮೈಸೂರು ಮೃಗಾಲಯ ಹಾಗೂ ಸಿಂಗಪೂರ್‌ ಮೃಗಾಲಯದ ನಡುವಿನ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಗಪೂರ ಮೃಗಾಲಯದಿಂದ ವಿಮಾನ ಮಾರ್ಗದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆತಂದು ನಂತರ ರಸ್ತೆ ಮಾರ್ಗವಾಗಿ ಮೈಸೂರು ಝೂಗೆ ಕರೆತರಲಾಯಿತು.

ಮಂಡ್ಯ: ಕಾವೇರಿ ನದಿಯಲ್ಲಿ ಪ್ರವಾಹ ಇಳಿಮುಖ

ಒಬಾನ್‌ (ಗಂಡು) ಮತ್ತು ವೀಟಾ (ಹೆಣ್ಣು) ಹೆಸರಿನ ಘೇಂಡಾಮೃಗಗಳು ತಮ್ಮ ಹೊಸ ನೆಲೆಗೆ ಬಂದು ಸೇರಿದ್ದು, ಪ್ರಸ್ತುತ ಅವುಗಳನ್ನು ದಿಗ್ಬಂಧನ ಆವರಣದಲ್ಲಿರಿಸಿ ನಿಗಾ ವಹಿಸಲಾಗಿದೆ. ಇವುಗಳನ್ನು ಮೈಸೂರು ಮೃಗಾಲಯದ ಪರಿಸರಕ್ಕೆ ಸರಾಗವಾಗಿ ಪರಿಚಯವಾಗುವಂತೆ ಮಾರ್ಗದರ್ಶನ ನೀಡಲು ಸಿಂಗಪೂರ ಮೃಗಾಲಯದ 35ಕ್ಕಿಂತ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಮುಖ್ಯ ಪ್ರಾಣಿಪಾಲಕ ಚಿದಂಬರಂ ಪ್ರಾಣಿಗಳ ಜೊತೆ ಆಗಮಿಸಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಬಾನ್‌ 2 ವರ್ಷ ಹಾಗೂ ವೀಟಾ 3.9 ವರ್ಷ ವಯಸ್ಸಿನದಾಗಿದ್ದು, ಮೂರು ವರ್ಷಗಳ ಅಂತರದಲ್ಲಿ ಮೈಸೂರು ಮೃಗಾಲಯ ಬಿಳಿ ಘೇಂಡಾಮೃಗವನ್ನು ಮತ್ತೊಮ್ಮೆ ಪ್ರದರ್ಶಿಸುವ ಅವಕಾಶವನ್ನು ಪಡದಿದೆ.

ಘೇಂಡಾಮೃಗಗಳ ವಿಶೇಷತೆ:

ಮೃಗಾಲಯ ಪರಿಸರದಲ್ಲಿ ಘೇಂಡಾಮೃಗಗಳು 40 ವರ್ಷಗಳವರೆಗೆ ಜೀವಿಸಬಲ್ಲವು. ಗಂಡು ಮತ್ತು ಹೆಣ್ಣು ಎರಡೂ ಘೇಂಡಾಮೃಗಗಳು ಈ ಮೃಗಾಲಯದ ಪರಿಸರದಲ್ಲಿ ಶೀಘ್ರದಲ್ಲಿ ಪ್ರವರ್ಧಮಾನಕ್ಕೆ ಬಂದು ಅವುಗಳ 6 ರಿಂದ 8ನೇ ವಯಸ್ಸಿನಲ್ಲಿ ತಮ್ಮ ಸಂತಾನಾಭಿವೃದ್ಧಿ ಪ್ರಕ್ರಿಯೆ ಪ್ರಾರಂಭಿಸುತ್ತವೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರು ಮೃಗಾಲಯಕ್ಕೆ ಈ ಪ್ರಾಣಿಗಳ ಸಾಗಾಣಿಕೆಗೆ ಅಗತ್ಯವಿದ್ದ ಪರಿಣತಿ ಹಾಗೂ ಮುಂದಾಳತ್ವವನ್ನು ಪ್ರದರ್ಶಿಸಿದ ಮೃಗಾಲಯದ ಸಹಾಯಕ ನಿರ್ದೇಶಕ ಡಾ.ಕೆ.ಆರ್‌. ರಮೇಶ್‌, ವಲಯ ಅರಣ್ಯಾಧಿಕಾರಿ ಎ.ವಿ. ಸತೀಶ್‌ ಅವರನ್ನು ಅಭಿನಂದಿಸಿದರು.

Follow Us:
Download App:
  • android
  • ios