ಮಂಡ್ಯ: ಕಾವೇರಿ ನದಿಯಲ್ಲಿ ಪ್ರವಾಹ ಇಳಿಮುಖ
ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಸಂಪೂರ್ಣ ಇಳಿಮುಖವಾಗಿದೆ. ಕಳೆದ ಮೂರು - ನಾಲ್ಕು ದಿನಗಳಿಂದ ಪ್ರವಾಹ ಪರಿಸ್ಥಿತಿಯಿಂದ ನದಿ ಪಾತ್ರದ ಹಳ್ಳಿಗಳು ಜಲಾವೃತಗೊಂಡು ಸಾಕಷ್ಟುಹಾನಿ ಸಂಭವಿಸಿತ್ತು. ಈಗ ಪರಿಸ್ಥಿತಿ ತಿಳಿಗೊಂಡಿದೆ. ಜನ ಜೀವನ ಕೂಡ ತಹಬದಿಗೆ ಬಂದಿದೆ.
ಮಂಡ್ಯ(ಆ.15): ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಭರ್ತಿಯಾಗಿದೆ. ಆಣೆಕಟ್ಟೆಯಲ್ಲಿ ಬುಧವಾರ ಸಂಜೆ 124.30 ನೀರು ಸಂಗ್ರಹವಿದೆ. ಈ ನಡುವೆ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಸಂಪೂರ್ಣ ಇಳಿಮುಖವಾಗಿದೆ. ಕಳೆದ ಮೂರು - ನಾಲ್ಕು ದಿನಗಳಿಂದ ಪ್ರವಾಹ ಪರಿಸ್ಥಿತಿಯಿಂದ ನದಿ ಪಾತ್ರದ ಹಳ್ಳಿಗಳು ಜಲಾವೃತಗೊಂಡು ಸಾಕಷ್ಟುಹಾನಿ ಸಂಭವಿಸಿತ್ತು. ಈಗ ಪರಿಸ್ಥಿತಿ ತಿಳಿಗೊಂಡಿದೆ. ಜನ ಜೀವನ ಕೂಡ ತಹಬದಿಗೆ ಬಂದಿದೆ.
ಕೊಡಗಿನಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಜಲಾಶಯಕ್ಕೆ 23,187 ಕ್ಯುಸೆಕ್ ಒಳಹರಿವು ಇತ್ತು. ಅಣೆಕಟ್ಟೆಯಿಂದ 5167 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಇಳಿಮುಖಗೊಂಡು ಪ್ರವಾಹದಂತೆ ಹರಿಸುತ್ತಿದ್ದ ನೀರನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಜಲಾಶಯದಲ್ಲಿ ಈಗ ಬಹುತೇಕ ಭರ್ತಿಯಾದ ಹಿನ್ನೆಲೆಯಲ್ಲಿ, ಮತ್ತೆ ಕಾವೇರಿ ನದಿಗೆ ಬೆಳಗ್ಗೆ 32 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗಿತ್ತು. ಸಂಜೆ ವೇಳೆಗೆ ಕೇವಲ 2406 ಕ್ಯುಸೆಕ್ ನೀರನ್ನು ನದಿಗೆ ಹಾಗೂ 2761 ಕ್ಯುಸೆಕ್ ನೀರನ್ನು ನಾಲೆಗೆ ಬಿಡಲಾಗುತ್ತಿದೆ.
ರಂಗನತಿಟ್ಟು ಮತ್ತೆ ಪುನರರಾಂಭ:
ಕಾವೇರಿ ನದಿ ಮೂಲಕ ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ಹೊರ ಬಿಡುತ್ತಿದ್ದ ಪರಿಣಾಮ ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದ ಪರಿಣಾಮ ಭಾನುವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ರಂಗನತಿಟ್ಟು ಪಕ್ಷಿಧಾಮ ಗುರುವಾರದಿಂದ ಮತ್ತೆ ಆರಂಭಗೊಳ್ಳಲಿದೆ.
ಮಳೆಗಾಗಿ ಹಾಡು ಹಾಡಿ ಪ್ರಾರ್ಥಿಸಿದ ಮಂಡ್ಯ ಶಾಸಕ
ಕಳೆದ ಭಾನುವಾರ ಕಾವೇರಿ ನದಿ ಮೂಲಕ 1.8 ಲಕ್ಷ ಕ್ಯುಸೆಕ್ ನೀರು ಹೊರಬಿಟ್ಟಪರಿಣಾಮ ರಂಗನತಿಟ್ಟು ಪಕ್ಷಿಧಾಮದಲ್ಲಿನ ಟಿಕೆಟ್ ಕೌಂಟರ್ ಕಚೇರಿ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಪ್ರವಾಸಿಗರ ಹಿತದೃಷ್ಟಿಯಿಂದ ರಂಗನತಿಟ್ಟು ಪಕ್ಷಿಧಾಮದ ಪ್ರಮುಖ ದ್ವಾರವನ್ನು ಮುಚ್ಚಲಾಗಿತ್ತು.
ಕಾವೇರಿ ಜಲಾಶಯದ ಮೇಲ್ಬಾಗದಲ್ಲಿ ಅಧಿಕ ಮಳೆಯಾಗಿ ಕಾವೇರಿ ನದಿ ಮೂಲಕ ಯತೇಚ್ಛವಾಗಿ ನೀರು ಹರಿಬಿಡುತ್ತಿದ್ದ ಪರಿಣಾಮ ರಂಗನತಿಟ್ಟಪಕ್ಷಿಧಾಮದಲ್ಲಿ ಸುಮಾರು 15-20 ದಿನಗಳಿಂದ ಬೋಟಿಂಗ್ ನಿಲ್ಲಿಸಲಾಗಿತ್ತು. ಸದ್ಯ ಕಾವೇರಿ ನದಿಯಲ್ಲಿ 20-30 ಸಾವಿರ ಕ್ಯುಸೆಕ್ ನೀರು ಹರಿದು ಹೋಗುತ್ತಿದೆ. ಇನ್ನು ಒಂದೆರಡು ದಿನಗಳಲ್ಲಿ ನದಿಯಲ್ಲಿ ನೀರು ಕಡಿಮೆಯಾದ ನಂತರ ಮತ್ತೆ ಬೋಟಿಂಗ್ ಆರಂಭಿಸಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಎಂ.ಪುಟ್ಟಮಾದೇಗೌಡ ತಿಳಿಸಿದ್ದಾರೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಗತ್ಯ ನೀರು ಸಂಗ್ರಹ:
ಕಳೆದ ಒಂದು ವಾರದಿಂದ ಜಲಾಶಯಕ್ಕೆ 2 ಲಕ್ಷಕ್ಕೂ ಹೆಚ್ಚು ನೀರು ಒಳಹರಿವು ಬರುತ್ತಿತ್ತು. ಜಲಾಶಯದ ಪ್ರಮಾಣ ಎಷ್ಟುಬೇಕೋ ಅದನ್ನು ಸಂಗ್ರಹಣೆ ಮಾಡಿ, ಉಳಿದ ಒಂದು ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಜಲಾ ಶಯದಿಂದ ಹೊರಬಿಡಲಾಗಿತ್ತು. ನದಿಯಲ್ಲಿ ಪ್ರವಾಹದಂತೆ ಹರಿದು ಜಮೀನು, ಪ್ರವಾಸಿ ತಾಣ, ದೇವಾಲಯಗಳು ಜಲಾವೃತವಾಗಿದ್ದವು. ಕಾವೇರಿ ನದಿಯಲ್ಲಿ ನೀರಿನ ಹೊರಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ನಿನ್ನೆಯಿಂದ ಯಥಾಸ್ಥಿತಿಗೆ ಮರಳಿದೆ.