Asianet Suvarna News Asianet Suvarna News

ತುಮಕೂರು: ಬೇವಿನ ಮರದಲ್ಲಿ ಹಾಲಿನಂತ ದ್ರವ

ತುಮಕೂರಿನಲ್ಲಿ ಬೇವಿನ ಮರದಿಂದ ಬಿಳಿ ದ್ರವ ಬಂದಿರುವುದು ಜನರಲ್ಲಿ ವಿಸ್ಮಯ ಮೂಡಿಸಿದೆ. ಸ್ಥಳೀಯರು ಇದೊಂದು ದೈವ ಪವಾಡವೆಂದು ನಂಬಿ ಮರಕ್ಕೆ ಅರಿಶಿನ, ಕುಂಕುಮದಿಂದ ಪೂಜೆ ಸಲ್ಲಿಸಿಯೇ ಬಿಟ್ಟಿದ್ದಾರೆ. ಸಾಲದ್ದಕ್ಕೆ ಸದರಿ ಬೇವಿನ ಮರ ದೇವರಿಗೆ ಸೇರಿದ ಹೊಲದಲ್ಲಿರುವುದರಿಂದ ದೈವತ್ವಹೊಂದಿದ ಮರವೆಂದು ಭಾವನೆ ವ್ಯಕ್ತಪಡಿಸುತ್ತಿದ್ದಾರೆ.

white liquid comes out of  Neem tree in tumakur
Author
Bangalore, First Published Dec 7, 2019, 12:16 PM IST

ತುಮಕೂರು(ಡಿ.07): ಬೇವಿನಮರದಿಂದ ಹಾಲಿನಂತ ಬಿಳಿ ದ್ರವಧಾರೆ ಹರಿದು ಬರುತ್ತಿದ್ದು, ಈ ಪ್ರಕೃತಿ ವಿಸ್ಮಯ ವೀಕ್ಷಣೆಗೆ ಜನರು ಮುಗಿಬಿದ್ದಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಹೋಬಳಿ ರಾಮನಹಳ್ಳಿ ಪಂಚಾಯಿತಿಯ ಹನುಮಂತನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸೇರಿದ ಹೊಲದಲ್ಲಿರುವ ಬೇವಿನಮರವೊಂದರಲ್ಲಿ ಇತ್ತೀಚೆಗೆ ಹಾಲಿನಂತಹ ಬಿಳಿದ್ರವಧಾರೆ ಹರಿದು ಬರುತ್ತಿದೆ.

ಮೊದಲೇ ನಮ್ಮ ಹಿಂದುಗಳಲ್ಲಿ ಭಕ್ತಿನಂಬಿಕೆ ಜಾಸ್ತಿ. ಕಲ್ಲಿನಲ್ಲಿ ದೇವರನ್ನು ಕಂಡವರು ನಾವು, ಇನ್ನು ಜೀವವಿರುವ ಮರದ ಕಾಂಡದಿಂದ ದ್ರವ ಹರಿಯುತ್ತಿರುವುದನ್ನು ಕಂಡ ಸ್ಥಳೀಯರು ಇದೊಂದು ದೈವ ಪವಾಡವೆಂದು ನಂಬಿ ಮರಕ್ಕೆ ಅರಿಶಿನ, ಕುಂಕುಮದಿಂದ ಪೂಜೆ ಸಲ್ಲಿಸಿಯೇ ಬಿಟ್ಟಿದ್ದಾರೆ. ಸಾಲದ್ದಕ್ಕೆ ಸದರಿ ಬೇವಿನ ಮರ ದೇವರಿಗೆ ಸೇರಿದ ಹೊಲದಲ್ಲಿರುವುದರಿಂದ ದೈವತ್ವಹೊಂದಿದ ಮರವೆಂದು ಭಾವನೆ ವ್ಯಕ್ತಪಡಿಸುತ್ತಿದ್ದಾರೆ.

ಹೈದರಾಬಾದ್ ಎನ್‌ಕೌಂಟರ್: ಘಟನೆ ಸಂತೋಷವಲ್ಲ, ಸಮಾಧಾನ ತಂದಿದೆ ಎಂದ ಯದುವೀರ್

ಈ ವಿಸ್ಮಯವನ್ನು ನೋಡಲು ಪ್ರತಿದಿನ ನೂರಾರು ಮಂದಿ ಧಾವಿಸುತ್ತಿದ್ದಾರೆ. ಈ ಮರವು ದೇವಾಲಯದ ಜಮೀನಿಗೆ ಸೇರಿದ್ದರಿಂದ ಈ ಘಟನೆ ಹೆಚ್ಚಿನ ಮಹತ್ವ ಪಡೆದಿದೆ. ಇದೇ ಜಾಗದಲ್ಲಿ ಶ್ರೀಅಯ್ಯಪ್ಪ ದೇಗುಲ ನಿರ್ಮಾಣ ಕಾರ್ಯವನ್ನು ಊರಿನ ಭಕ್ತರು ಕೈಗೊಂಡಿದ್ದು, ಇದು ನಿರ್ಮಾಣ ಹಂತದಲ್ಲಿರುವಾಗಲೇ ಈ ವಿಸ್ಮಯ ಗೋಚರಿಸಿರುವುದು ಕಾಕತಾಳೀಯವೆನಿಸಿದೆ.

ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!

ಮರದ ಕಾಂಡದಿಂದ ಬಿಳಿದ್ರವ ಹರಿಯುವುದು ಕೆಲವು ಮರಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ ಪರಿಣಾಮವೆಂದು ಹಲವು ಮಂದಿ ಅಭಿಪ್ರಾಯವ್ಯಕ್ತಪಡಿಸಿ, ಈ ಹಿಂದೆಯೂ ಕೆಲವು ಕಡೆ ಮರದಲ್ಲಿ ಬಿಳಿದ್ರವ ಒಸರುವುದು ಕಂಡುಬಂದಿದ್ದು ಕೆಲವೇ ದಿನಗಳಲ್ಲಿ ಅದು ನಿಂತುಹೋಗುತ್ತದೆ ಎಂದು ತಿಳಿಸಿದ್ದಾರೆ.

ಪಟ್ಟಣದ ಸಮೀಪದ ಕುರುಬರಹಳ್ಳಿಯ ಬೇವಿನಮರವೊಂದರಲ್ಲಿ ಕೆಲವು ವರ್ಷಗಳ ಹಿಂದೆ ಇದೇರೀತಿ ಹಾಲಿನಬಣ್ಣದ ದ್ರವ ಹರಿದು ಕೌತುಕಕ್ಕೆ ಕಾರಣವಾಗಿತ್ತು. ಕೆಲವುದಿನಗಳ ನಂತರ ಈಕ್ರಿಯೆ ನಿಂತುಹೋಗಿತ್ತೆಂದು ತಿಳಿಸಿದ್ದಾರೆ.

ಡ್ಯಾನ್ಸ್‌ ನಿಲ್ಲಿಸಿದ್ದಕ್ಕೆ ಯುವತಿ ಮುಖಕ್ಕೆ ಗುಂಡು ಹಾರಿಸಿದ!

Follow Us:
Download App:
  • android
  • ios