ಮೈಸೂರು(ಡಿ.07): ಹೈದರಾಬಾದ್‌ ಎನ್‌ಕೌಂಟರ್ ಬಗ್ಗೆ ಹಲವರು ಹಲವು ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿರುವ ಬಗ್ಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ.

"

ಹೈದರಾಬಾದ್ ಅತ್ಯಾಚಾರಿಗಳ ಎನ್‌ಕೌಂಟರ್‌ ಪ್ರಕರಣವಾಗಿ ಪ್ರತಿಕ್ರಿಯಿಸಿದ ಅವರು, ಹೈದರಾಬಾದ್ ಪೊಲೀಸರ ಕ್ರಮವನ್ನ‌ ಟೀಕಿಸುವುದು ಸರಿಯಲ್ಲ. ಇಂತಹ ಘಟನೆಗಳು ಯಾರಿಗು ಸಂತೋಷ ತರೋಲ್ಲ ಆದ್ರೆ ಸಮಾಧನ ತಂದಿದೆ ಎಂದು ಹೇಳಿದ್ದಾರೆ.

ಡಾಕ್ಟ್ರೇ... ನನ್ನನ್ನು ಬದುಕಿಸಿ: ಉನ್ನಾವೋ ರೇಪ್ ಸಂತ್ರಸ್ತೆಯ ಕೊನೆಯ ಮಾತುಗಳು!

ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದು, ಹೈದರಾಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಪ್ರಕರಣ ಮರುಸೃಷ್ಟಿ ವೇಳೆ ಈ ಘಟನೆ ನಡೆದಿದೆ. ಹಾಗಾಗಿ ಆ ಸಂದರ್ಭದಲ್ಲಿ ಅವರು ಎನ್‌ಕೌಂಟರ್ ಮಾಡಿದ್ದಾರೆ ಎಂದಿದ್ದಾರೆ.

ಕನ್ನಡಿಗನಿಂದ ಕನ್ನಡದಲ್ಲಿ ವಿವರಣೆ: ಶೂಟೌಟ್ ಬಗ್ಗೆ ವಿಶ್ವನಾಥ್ ಸರ್ ಹೇಳಿದ್ದಿಷ್ಟು!

ಎಲ್ಲರಿಗೂ ಕಾನೂನಿನ ಮೂಲಕವೇ ಎಲ್ಲವು ಬಗೆಹರಿಯಬೇಕು ಎಂಬ ಆಸೆ ಇದೆ. ಈಗ ಆಗಿರುವುದು ಕಾನೂನು ಪ್ರಕಾರ ಆಗಿದ್ದರೆ ಅದು ತಪ್ಪಲ್ಲ. ರಾಜರ ಕಾಲಕ್ಕು ಇಂದಿನ ಕಾಲಕ್ಕೂ ವತ್ಯಾಸ ಇದೆ. ಕಾನೂನು ಬದಲಾವಣೆಗಿಂತ ತ್ವರಿತವಾಗಿ ಕಾನೂನಿನ ಮೂಲಕ ಶಿಕ್ಷೆಯಾಗಲಿ ಅನ್ನೋದೆ ನಮ್ಮ ಆಶಯ ಎಂದು ಹೇಳಿದ್ದಾರೆ.

ನಮ್ ಜಮೀನಲ್ಲಿ ಆ ರಾಕ್ಷಸರನ್ನು ಸುಡಬೇಡಿ: ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ!